ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯದಲ್ಲಿ ಮಹೋತ್ಸವ

ಮೈಸೂರು: ತಾಲ್ಲೂಕಿನ ಸರ್ಕಾರಿ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರಸುಂದರಿ ಮತ್ತು ರಾಮನಾಥೇಶ್ವರಸ್ವಾಮಿ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಪ್ರೋಕ್ಷಣೆ, ಕುಂಭಾಭಿಷೇಕ ಮಹೋತ್ಸವವು ಫೆ.20 ರಿಂದ 22 ರವರೆಗೆ ನಡೆಯಲಿದೆ.

ಫೆ.20 ರಂದು ಬೆಳಗ್ಗೆ ಹಾಗೂ ಸಂಜೆ 4.30, 21 ರಂದು ಬೆಳಗ್ಗೆ ಮತ್ತು ಸಂಜೆ 4ಕ್ಕೆ ಧಾರ್ಮಿಕ ಕಾರ್ಯ ನಡೆಯಲಿದೆ.

ಫೆ.22 ರಂದು ಬೆಳಗ್ಗೆ 6.12 ರಿಂದ ಧಾರ್ಮಿಕ ಕಾರ್ಯ, ಮಧ್ಯಾಹ್ನ 12 ಕ್ಕೆ ಪ್ರಸಾದ ವಿನಿಯೋಗ ಇದೆ. ಎಲ್ಲ ಧಾರ್ಮಿಕ ಕಾರ್ಯಗಳು ಪ್ರಧಾನ ಆಗಮಿಕರಾದ ಎಸ್.ಸಿ.ಮಹದೇವಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಲಿದೆ.

ಕೇರಳದಿಂದ ತಪಥಿಗಳ (ಮುಖ್ಯಸ್ಥರು) ಜತೆ 30 ಮಂದಿ ತಂತ್ರಿಗಳು, ಆಗಮಿಸಿ ಪೂಜಾ ಕಾರ್ಯಕ್ರಮ ನೆರವೇರಿಸುವರು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಕಾಳಯ್ಯ ತಿಳಿಸಿದ್ದಾರೆ.

ಫೆ.23 ರಿಂದ ಮೂಲಗರ್ಭಗುಡಿ ದರ್ಶನ: ಸರ್ಕಾರಿ ಉತ್ತನಹಳ್ಳಿ ದೇವಾಲಯದ ಪುನರ್ ನಿರ್ಮಾಣ ಕಾರ್ಯವು ಚಾಲ್ತಿಯಲ್ಲಿದ್ದರಿಂದ ಮೂಲ ಗರ್ಭಗುಡಿಗೆ ಜನರಿಗೆ ಪ್ರವೇಶವಿರಲಿಲ್ಲ. ಫೆ.23 ರಿಂದ ಮೂಲ ಗರ್ಭಗುಡಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಫೆ.28 ರಂದು ಉತ್ತನಹಳ್ಳಿ ಜಾತ್ರೆ: ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವವು ಫೆ.28 ರಂದು ನಡೆಯಲಿದೆ. ಅಂದು ರಾತ್ರಿ 9 ಗಂಟೆಗೆ ಗ್ರಾಮದಲ್ಲಿ ಕನ್ಯಾಕನ್ನಡಿ ಉತ್ಸವ ನಡೆಯಲಿದೆ. ಮಾ.1, 2 ರಂದು ದೇವಾಲಯದಲ್ಲಿ ಹಲವು ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

Related Articles

ಪ್ರತಿಕ್ರಿಯೆ ನೀಡಿ

Latest Articles