ಏರು ಜಾರು

* ಜಿ.ಎಚ್.ಮಳಗಿ

ನೀನಿರುವಲ್ಲಿ  ಸಂತಸ  ಹರಿದಿದೆ 
ಸಂತಸವಿರುವಲ್ಲಿ ಜೀವನ ತುಂಬಿದೆ 

ನೀರು ತುಂಬದ ಕಣ್ಣುಗಳ ನಗೆ ವ್ಯರ್ಥ
ಕಥೆಯಾಗದ ಯೌವನದ ಮುದಕಿಲ್ಲ ಅರ್ಥ

ಜೀವನವೆಲ್ಲಾ ನೀರಸ ಕಳೆದೆಯಲ್ಲಾ
ಪ್ರೀತಿಸಬಾರದೇ ಅರೆಕ್ಷಣ ಕಣ್ಣು ತೆರೆದೆಲ್ಲಾ

ಸಂತಸದ ಕ್ಷಣ ದಿನ ವರ್ಷಗಳು ಓಡುತ್ತ ಕಳೆದುಹೋಗುತ್ತವೆ

ದುಃಖದ ಕ್ಷಣಗಳು ತೆವಳುತ್ತಲೇ ಇರುತ್ತವೆ
ಹೋಗುವುದಿಲ್ಲ ಕಳೆಯುವುದಿಲ್ಲ 

ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಅವಳು ಪ್ರಶ್ನೆಯಾಗುತ್ತಲೇ ಹೋದಳು

ನನ್ನ ಪ್ರಶ್ನೆಗಳು ಬೆಳೆದಂತೆ ಅವಳು ದೂರವಾಗುತ್ತಲೇ ಮನದಿ ಉಳಿದಳು

ಹೃದಯದ ಮಾತನ್ನು ಕೇಳದ ಬುದ್ಧಿ
ಗೋಳಾಡಿ ಅತ್ತಂತೆ ನನ್ನ ನಿನ್ನ ಸುದ್ದಿ

ಈ ದಾರಿಗಳೇಕಿವೆ ಅಂಕುಡೊಂಕು
ತಿಳಿದೂ  ಜನವೇಕೆ ಆಡುವರು ಕೊಂಕು

ಹರೆಯ ತುಂಬ ಗೋಜಲೆಂದು ತಿಳಿದೂ
ಯೌವನಿಗರೇಕೆ ಜಾರುವರು ಎಲ್ಲ ಕಳೆದೂ

ಅವಳನ್ನೊಮ್ಮೆ ನೋಡಿದ್ದಕ್ಕೇ ಹುಚ್ಚನಾದೆ
ಅವಳು ನನ್ನನ್ನು ನಿತ್ಯವೂ ನೋಡಲು ಬರುತ್ತಾಳೆ ಅವಳಿಗೇನೂ ಆಗಿಲ್ಲ ಎಚ್ಚರವಾದೆ

ಇಲ್ಲಿ ನಾನೊಬ್ಬನೇ ಅಂದುಕೊಂಡರೆ ಅವಳಿಂದ ಹುಚ್ಚರಾದವರು ನೂರಿದ್ದಾರೆ.

Related Articles

2 COMMENTS

  1. ಕಾವ್ಯಗಳಿಗೆ ಅವಕಾಶಕೊಟ್ಟ ಸಾಹಿತ್ಯ ಪ್ರೀತಿಗೆ ಧನ್ಯವಾದ….

ಪ್ರತಿಕ್ರಿಯೆ ನೀಡಿ

Latest Articles