ಬೆಂಗಳೂರು: ಕೌಟಿಲ್ಯನ ಅರ್ಥಶಾಸ್ತ್ರ ಒಂದು ಅಧ್ಯಯನ (ಭಾರತೀಯ ಸಾಮಾಜಿಕ ರಾಜಕೀಯ ತತ್ತ್ವಗಳ ಅವಲೋಕನ) ಕುರಿತು ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್ ನಡೆಯಲಿದೆ. ಒಟ್ಟು32 ಗಂಟೆಗಳು:
ಕೋರ್ಸ್ನಲ್ಲಿ ಚರ್ಚಿಸಲ್ಪಡುವ ವಿಷಯಗಳು: ಗ್ರಂಥದ ಪ್ರಮುಖಾಂಶಗಳು, ಹಿನ್ನಲೆ ಇತಿಹಾಸ, ಮೂಲಗಳು, ತತ್ತ್ವಗಳ ಸಾಂದರ್ಭಿಕ ಅನ್ವಯ, ವಿವಿಧ ಕಾಲಘಟ್ಟಗಳಲ್ಲಿ ಅರ್ಥಶಾಸ್ತ್ರೀಯ ವ್ಯವಸ್ಥೆ, ಆಧುನಿಕ ಸಾಂವಿಧಾನಿಕಾ0ಶಗಳೊಡನೆ ಒಂದು ತುಲನಾತ್ಮಕ ಅಧ್ಯಯನ.
ಸಂಸ್ಕೃತ ಮತ್ತು ಭಾರತೀಯ ಶಾಸ್ತ್ರಗಳಲ್ಲಿ ಪರಿಣಿತಿ ಹೊಂದಿರುವ ಆಧ್ಯಾತ್ಮ ಚಿಂತಕಿ ಡಾ.ಆರತೀ ವಿ.ಬಿ. ಹಾಗೂ ಅರ್ಜುನ ಭಾರದ್ವಾಜ್ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಅಲ್ಲದೇ ಅತಿಥಿ ಉಪನ್ಯಾಸಕರಾಗಿ ಕಶ್ಯಪ್ ನಾಯಕ್, ವಿಕ್ರಮ್ ಫಡ್ಕೆ, ಹರಿ ರವಿಕುಮಾರ್ ಭಾಗವಹಿಸಲಿದ್ದಾರೆ.
ಆಸಕ್ತರು ಫೆ. 25 ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು.
ತರಗತಿಗಳು ಫೆ.27ರಿಂದ ಆರಂಭಗೊಳ್ಳಲಿದೆ. ಶನಿವಾರ ಮಾತ್ರ ತರಗತಿಗಳು ನಡೆಯಲಿದ್ದು, ಸಂಜೆ 6ರಿಂದ ರಾತ್ರಿ 8 ರವರೆಗೆ ಇರಲಿದೆ.
ಹೆಚ್ಚಿನ ಮಾಹಿತಿಗೆ: 9611131760 / 9480318113