ಇಂದು ಶ್ರೀ ವ್ಯಾಸರಾಜ ಕರಾರ್ಚಿತ ಅವತಾರತ್ರಯ ಬಾಂಡ್ರಾವಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

*ತೀರ್ಥಹಳ್ಳಿ ಅನಂತ ಕಲ್ಲಾಪುರ 

ಚಿತ್ರದುರ್ಗ:  ಬಾಂಡ್ರಾವಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವವು  ಫೆ.26 ರಿಂದ 28 ರವರೆಗೆ  ಶ್ರೀ ಆಂಜನೇಯಸ್ವಾಮಿ ಸೇವಾಟ್ರಸ್ಟ್ (ರಿ) ಶ್ರೀ ಹನುಮ  ಭೀಮ  ಮಧ್ವ  ಸೇವಾ ಟ್ರಸ್ಟ್ (ರಿ)  ಇವರ ಸಹಯೋಗದೊಂದಿಗೆ ನಡೆಯಲಿದೆ.

ಫೆ.27ರಂದುರಥೋತ್ಸವ ಪ್ರಯುಕ್ತ ಬೆಳಗ್ಗೆ 6 ಗಂಟೆಗೆ ಪ್ರಾಣ ದೇವರಿಗೆ ನಿರ್ಮಾಲ್ಯ ಪಂಚಾಮೃತಾಭಿಷೇಕಗೋ ಪೂಜ, ರಾಘವೇಂದ್ರ ಸ್ತೋತ್ರ ಸಹಿತ ಅಷ್ಟೋತ್ತರ, ಸ್ವಾಮಿಗೆ ಹರಿವಾಯುಸ್ತುತಿ ಪುನಃಶ್ಚರಣದೊಂದಿಗೆ ಮಧು ಅಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಪವನಾಮ ಹೋಮ ಏರ್ಪಡಿಸಲಾಗಿದೆ , ಬೆಳಗ್ಗೆ 11.30 ರಿಂದ  ಮಧ್ಯಾಹ್ನ 1 ರವರೆಗೆ ಹಾಗೂ ಸಂಜೆ 4 ರಿಂದ 6 ರವರೆಗೆ  ಶ್ರೀ ಸ್ವಾಮಿಯ  ಅವತಾರತ್ರಯ ಶ್ರೀ ಬಾಂಡ್ರಾವಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ   ಜರುಗಲಿದೆ. ರಥಾಂಗ ಹೋಮ   ಸತ್ಯನಾರಾಯಣ ಸ್ವಾಮಿ ಪೂಜೆ, ರಥಾಂಗ ಹೋಮ, ಪೂರ್ಣಹುತಿ ಸೇರಿದಂತೆ ನಾನಾ ಧಾರ್ಮಿಕ  ಕಾರ್ಯಕ್ರಮಗಳು  ಜರುಗಲಿವೆ. 

ಚಿತ್ರದುರ್ಗ ಸೀಮೆಯಲ್ಲಿ ಮಲೆನಾಡ ಸೆರಗಿನ ತುಣುಕೊಂದು ಜಾರಿ ಬಿದ್ದ ಹಾಗಿರುವ ಮೊಳಕಾಲ್ಮುರು ತಾಲೂಕಿನ ಬಾಂಡ್ರಾವಿ ಗ್ರಾಮ ದಲ್ಲಿ ನೆಲೆ ನಿಂತಿದ್ದಾರೆ ಹನುಮ – ಭೀಮ – ಮಧ್ವರು.ಏಕಶಿಲಾ ಮೂರ್ತಿಯಲ್ಲಿ ತ್ರಿಮೂರ್ತಿಗಳು ಐಕ್ಯರಾಗಿರುವ ವಿಶೇಷ ಸನ್ನಿಧಾನದಲ್ಲಿ ಶ್ರೀ ಜನಮೇಜಯನಿಂದ ಮೊದಲು ಪ್ರತಿಷ್ಠೆಯಾಗಿ ನಂತರ ವ್ಯಾಸರಾಜರಿಂದ ಪುನಃ ಪ್ರತಿಷ್ಠೆ ಆಗಿರುವ ಮೊಳಕಾಲ್ಮುರು ತಾಲೂಕಿನ ಸಂತೇಗುಡ್ಡ ಗ್ರಾಪಂ ವ್ಯಾಪ್ತಿಯ ಬಾಂಡ್ರಾವಿಯಲ್ಲಿ  ಪ್ರಾಣದೇವರ(ಆಂಜನೇಯಸ್ವಾಮಿ) ಬ್ರಹ್ಮ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ  ಶ್ರೀ ಕ್ಷೇತ್ರಕ್ಕೆ  ಬಂದು ಪ್ರಾರ್ಥನೆ ಸಲ್ಲಿಸಿದ  ಭಕ್ತರ – ಸಮಸ್ಯೆ ಬಗೆಹರಿಸಿ ಅವರ ಇಷ್ಟಾರ್ಥಗಳು ನೆರೆವೇರಿಸುತ್ತಾ  ನೆಲೆನಿಂತಿದ್ದಾನೆ ಬಾಂಡ್ರಾವಿ ಆಂಜನೇಯಸ್ವಾಮಿ.

 ದೇವಾಲಯದ ಬಗ್ಗೆ 

ll ಬಾಂಡ್ರಾವಿ ವಾಸಿನಂ/ ರಾಮಂಭಜತಾಂ ಭಾಗ್ಯದಂ / ಪ್ರಭುಂಸವ೯ದುಃಖ ನಿಹಂತಾರಂ/ಆಂಜಿನೇಯಂ ಉಪಾಸ್ಮಹೇll

ಸನ್ಯಾಸಿಯಾಗಿದ್ದುಕೊಂಡು ವಿಜಯನಗರ ಸಾಮ್ರಾಜ್ಯವನ್ನೂ ಆಳಿದ ಯತಿ ಶ್ರೀ ವ್ಯಾಸರಾಜರು ಲೋಕ ಕಲ್ಯಾಣಾರ್ಥ ಭಾರತದಾದ್ಯಂತ 734 ಸ್ಥಳಗಳಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿದ್ದರು.  ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದ್ದ ಹನುಮ –  ಭೀಮ – ಮಧ್ವ ”  ರು ಏಕಾ ಶಿಲಾ ಮೂರ್ತಿ ಸನ್ನಿಧಾನದಲ್ಲಿ ಅವತಾರತ್ರಯ ಬಾಂಡ್ರಾವಿ ಆಂಜನೇಯಸ್ವಾಮಿ ದೇವಸ್ಥಾನ . ಇದು ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ.

ಐತಿಹಾಸಿಕ  ಹಿನ್ನಲೆ  ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ವರುಷಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಕ್ಕೆ ನಾಡಿನ ಭಕ್ತರು ಬಂದು ಶ್ರೀ ಸ್ವಾಮಿಯ ದರ್ಶನ ಪಡೆದು ಪಾವನರಾಗುತ್ತಾರೆ.ಆಂಜನೇಯ ಮೂಲ ವಿಗ್ರಹದೊಂದಿಗೆ  ಶ್ರೀ ಕ್ಷೇತ್ರದಲ್ಲಿ ನರಹರಿ ತೀರ್ಥರಿಂದ ಪ್ರತಿಷ್ಠಾಪಿತಗೊಂಡ ಗರುಡ ಸಮೇತ ಶ್ರೀ ಸೀತಾರಾಮಚಂದ್ರ  ಹಾಗೂ ಲಕ್ಷ್ಮಣ  ದೇವರಿರುವುದು ವಿಶೇಷ.

ಶ್ರೀ ಕ್ಷೇತ್ರ ಬಾಂಡ್ರಾವಿಯು ರಕ್ಷಿತಾರಣ್ಯದಿಂದ ಸುತ್ತುವರಿಯಲ್ಪಟ್ಟಿದ್ದು, ಶ್ರೀ ಪ್ರಾಣದೇವರು ಪೂರ್ವಾಭಿಮುಖವಾಗಿ ಇದೆ. ಈ ಪುರಾತನವಾದ ದೇವಾಲಯವು ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿದ್ದು ಯಾರ ಕಾಲದೆಂದು ಖಚಿತ ಮಾಹಿತಿ ಇಲ್ಲ, ಇಲ್ಲಿ ಕೆಲವು ಶಿಲಾ ಶಾಸನಗಳು ದೊರಕಿದ್ದು ಅದರ ಬಗ್ಗೆ ಸಂಶೋಧನೆಯ ಅಗತ್ಯವಿದೆ, ಈ ದೇವಾಲಯದಲ್ಲಿ ಬಾವಿ ಇದ್ದು,  ದೇವರ ಪೂಜೆ ಅಭಿಷೇಕ ಹಾಗೂ ಇನ್ನಿತರ ಬಳಕೆಗೆ ಇದೇ ಜಲಮೂಲವಾಗಿದೆ. 

ಜೀರ್ಣೋದ್ಧಾರ 

ಈ ಪುರಾತನ ದೇವಾಲಯವು ಕೆಲವೊಂದು ಭಾಗವು ಶಿಥಿಲವಾದ ಕಾರಣ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಹಾಗೂ ದಾನಿಗಳ ಸಹಕಾರದಿಂದ 2000 ನೇ ಇಸವಿಯಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭವಾಗಿದ್ದು ಎಲ್ಲರ ಸಹಕಾರದಿಂದ ರಾಜ ಗೋಪುರವು ನಿರ್ಮಾಣವಾಗಿದ್ದು ಮಂತ್ರಾಲಯದ ಪೀಠಾಧಿಪತಿಗಳಿಂದ ರಾಜಗೋಪುರದ ಉಧ್ಘಾಟನೆ ಆಗಿರುತ್ತದೆ. 2016 ರಲ್ಲಿ ಶ್ರೀ ಸೀತಾ ರಾಮಚಂದ್ರ ದೇವರ ಹಾಗೂ ಶ್ರೀ ಪ್ರಾಣದೇವರ ಶಿಖಾ ಗೋಪುರದ ನಿರ್ಮಾಣವಾಗಿದ್ದು ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ .

Related Articles

ಪ್ರತಿಕ್ರಿಯೆ ನೀಡಿ

Latest Articles