`ರಂಗ ಸಂಭ್ರಮ’ – ನವೋತ್ಸಾಹದಲ್ಲಿ ನಲಿದ ಯುವ ಕಲಾವಿದರು

ಕಳೆದ ಒಂದು ವರ್ಷದಿಂದ ಸ್ಥಗಿತವಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಒಂದೊ0ದಾಗಿ ಗರಿಗೆದರಿ ಹೊರ ಹೊಮ್ಮುತ್ತಿವೆ. ನೃತ್ಯ, ಸಂಗೀತ, ನಾಟಕಗಳು ಬರಡಾದ ಬದುಕಿಗೆ ಜೀವನ ಚೈತನ್ಯವನ್ನು ತುಂಬುವುದು. ಈ ದಿಶೆಯಲ್ಲಿ ರಂಗಭೂಮಿಯ ಕಲಾವಿದರಿಗೆ ಪ್ರತಿವರ್ಷ ಹೊಸಹೊಸ ಅವಕಾಶಗಳನ್ನು ಕಲ್ಪಿಸಿಕೊಟ್ಟು ಕಲಾವಿದರಲ್ಲಿ ಹಾಗೂ ಕಲಾಪ್ರೇಮಗಳಿಗೆ ಸಾಂಸ್ಕೃತಿಕ ರಸದೌತಣವನ್ನು ನೀಡುತ್ತಾ ಬಂದಿರುವುದು ಶ್ರೀ ವಿವೇಕಾನಂದ ಕಲಾ ಕೇಂದ್ರದ ಹೆಗ್ಗಳಿಕೆ. ವಿದ್ಯಾಪೀಠದ ಐ.ಟಿ.ಐ. ಬಡಾವಣೆಯಲ್ಲಿ ಶ್ರೀ ವಿವೇಕಾನಂದ ಕಲಾ ಕೇಂದ್ರವು ನಿರ್ಮಿಸಿರುವ ಸಂಸ್ಕೃತಿ ಸದನ’ ಸಭಾಂಗಣದಲ್ಲಿ, ರಂಗ ಸಂಭ್ರಮ’ ನಾಟಕೋತ್ಸವವನ್ನು ವೈಭವವಾಗಿ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬಂದು ಜನಪ್ರಿಯವಾಗಿದೆ.

ಈ 9 ದಿನಗಳ 'ನವಯುವ ರಂಗೋತ್ಸವ'ವನ್ನು ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ವತಿಯ ಸಹಕಾರದಿಂದ ಸಂಸ್ಥೆ ಈ ನಾಟಕಕೋತ್ಸವವನ್ನು ಹಮ್ಮಿಕೊಂಡಿದೆ. ಸಾಮಾಜಿಕ, ರಾಜಕೀಯ, ಪೌರಾಣಿಕ ಹಾಗೂ ಐತಿಹಾಸಿಕ ವಸ್ತುಗಳನ್ನು ಒಳಗೊಂಡ ವೈವಿಧ್ಯಮಯ ನಾಟಕಗಳು ರಂಗಾಸಕ್ತರಿಗೆ ಮನರಂಜನೆಯನ್ನು ನೀಡುವುದು. ಜೊತೆಗೆ ರಂಗಭೂಮಿಯ ಬಗ್ಗೆ ಆಸಕ್ತಿಯನ್ನುಂಟು ಮಾಡುವ ಉದ್ದೇಶದಿಂದ ಚಾಲನೆಗೊಂಡ ಈ ರಂಗೋತ್ಸವದಲ್ಲಿ ರಂಗಭೂಮಿಯ ಹಿರಿಯ ಕಲಾವಿದರಾದ ಎಂ.ತಿಮ್ಮಣ್ಣಗೌಡರ್,ಡಾ. ಗುರುರಾಜ ಪೋಶೆಟ್ಟಿ ಹಳ್ಳಿ, ರಂಗ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮಂಜುಳ ಸಿದ್ಧರಾಜು ಹಿರಿಯ ಪತ್ರಕರ್ತ ಹಾಗೂ ಚಿತ್ರ ಕಲಾವಿದರರಾದ ಶಶಿಧರ್‌ರವರು ಹಾಗೂ ಕಲಾಕೇಂದ್ರದ ಸ್ಥಾಪಕರಾದ ಡಾ. ವಿ. ನಾಗರಾಜ್, ನೃತ್ಯ ವಿದೂಷಿ ಡಾ. ಶ್ವೇತ, ಹಾಗೂ ಕರ್ನಾಟಕ ಕಲಾಶ್ರೀ ಶ್ರೀಮತಿ ಎಂ. ಕೆ. ಜಯಶ್ರೀ ರವರು ಉಪಸ್ಥಿತರಿದ್ದರು.

ಸ್ವಾಮಿ ವಿವೇಕಾನಂದರ ಸಿಂಹವಾಣಿ ಪ್ರಸ್ತುತ ಪಡಿಸಿದ ಮಾಸ್ಟರ್ ದೈವೀಕ್ ಹಾಗೂ ಉತ್ತಮ ಅಭಿನಯ ಮತ್ತು ಸಂಭಾಷಣಾ ಚತುರತೆಯಿಂದ ಎಂ. ತಿಮ್ಮಣ್ಣಗೌಡರ್ ಎಲ್ಲರ ಮನರಂಜಿಸಿದರು. ಮೊದಲನೆಯ ನಾಟಕವಾಗಿ ಜಾನಪದ ಎಳೆಯ ಹಂದರದಿ0ದ ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿರವರು ರಾಮಾಯಣದಿಂದ ನೇಯ್ದ ರಂಗರೂಪ ಚಿತ್ರಪಟ ‘ಮಾಲ್ತೇಶ್ ಬಡಿಗೇರ’ ರವರ ನಿರ್ದೇಶನದಲ್ಲಿ ಮೂಡಿಬಂದು ಕಲಾರಸಿಕರ ಮನಗೆದ್ದಿತು. ನೂತನ ರಂಗಸಜ್ಜಿಕೆ, ಉತ್ತಮ ಸಂಭಾಷಣೆ, ಆಕರ್ಷಕ ವೇಷಭೂಷಣಗಳು ಹಾಗೂ ಸಿದ್ಧಯ್ಯರವರ ಸುಶ್ರಾವ್ಯ ಗೀತೆಗಳು ನಾಟಕಕ್ಕೆ ವಿಶೇಷ ಕಳೆಕೊಟ್ಟವು. ಒಟ್ಟಾರೆ ಇದೊಂದು ಯಶಸ್ವಿ ಪ್ರಯೋಗವಾಗಿತ್ತು.


ಡ್ರಾಮಾಟಿಕ್ಸ್ ತಂಡದವರು ಎರಡನೆಯ ದಿನ ಪ್ರಸ್ತುತಪಡಿಸಿದ ನಾಟಕ ಬೀ.ಚಿ. ರಸಾಯನ ಹಾಸ್ಯಮಯವಾಗಿದ್ದು, ಅದರಲ್ಲೂ ಬಾಬು ಹಿರಣಯ್ಯರವರ ಸ್ಮರಣೀಯ ಅಭಿನಯ ಕಲಾ ರಸಿಕರೆಲ್ಲರನ್ನು ರಂಜಿಸಿತು. ಪ್ರತಿಯೊಬ್ಬ ಪಾತ್ರಧಾರಿಯೂ ಅವರವರಿಗೆ ವಹಿಸಿದ್ದ ಪಾತ್ರಗಳ ಔಚಿತ್ಯವನ್ನರಿತು ಅದಕ್ಕನುಗುಣವಾದ ಸಂಭಾಷಣಾ ಭಾಷಾಶೈಲಿಗೆ ತುಂಬಿದ ಸಭಾಂಗಣ ನೀಡಿದ ಪ್ರತಿಕ್ರಿಯೆ ಮೆಚ್ಚುವಂತಹದ್ದಾಗಿತ್ತು.

ಕಲಾವಿದರ ಅದ್ಭುತ ಪ್ರತಿಭೆಯ ಪ್ರದರ್ಶನಕ್ಕೆ ಪ್ರೇಕ್ಷಕರು ಸಹರ್ಷದಿಂದ ಸ್ಪಂದಿಸಿದ್ದು ಕಲಾವಿದರೆಲ್ಲರಿಗೆ ನವ ಉತ್ಸಾಹವನ್ನು ತುಂಬಿದೆ ಎಂದು, ಇಂತಹ ಒಂದು ಸದವಕಾಶವನ್ನು ಹಲವಾರು ರಂಗತ0ಡಗಳಿಗೆ ಕಲ್ಪಿಸಿಕೊಡುತ್ತಿರುವ ಶ್ರೀ ವಿವೇಕಾನಂದ ಕಲಾಕೇಂದ್ರದವರೆಲ್ಲರ ಪ್ರಯತ್ನ ಶ್ಲಾಘನೀಯವೆಂದು ಬಾಬು ಹಿರಣಯ್ಯರವರು ಕಲಾಕೇಂದ್ರ ಗೌ. ಕಾರ್ಯದರ್ಶಿ ಡಾ. ಶ್ರೀ ವಿ. ನಾಗರಾಜ್ ಅವರನ್ನು ಅಭಿನಂದಿಸಿದರು.


ನಾಟಕದ ವಸ್ತು, ನಾಟಕದ ಸಂಭಾಷಣಾ ಶೈಲಿ ಕನ್ನಡ ಭಾಷೆಯ ಸಿರಿತನವನ್ನು ಪ್ರದರ್ಶಿಸಿ ವಿದ್ಯಾರ್ಥಿಗಳೂ ಹಾಗೂ ಮಕ್ಕಳಿಗೂ ಸ್ಫೂರ್ತಿದಾಯಕವಾಗಿದೆಯೆಂದು ಕೃಷ್ಣಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಉಷಾ ಕುಮಾರಿ ರವರು ಕಲಾವಿದರನ್ನೂ ಹಾಗೂ ವಿದ್ಯಾಪೀಠ ಬಡಾವಣೆಯಲ್ಲಿ ಇಂತಹ ಮೌಲ್ಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಶ್ರೀ ವಿವೇಕಾನಂದ ಕಲಾಕೇಂದ್ರದವರೆಲ್ಲರನ್ನೂ ಮನಸಾರೆ ಅಭಿನಂದಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles