ಕನಸು ನನಸಾಗುವುದೇ? ಯಾವ ಕನಸು ಬಿದ್ದರೆ ಏನರ್ಥ?

ಪುರಾಣ, ಉಪನಿಷತ್ತುಗಳಲ್ಲೂ ಕನಸಿನ ಸಾಕಷ್ಟು ಉಲ್ಲೇಖಗಳಿವೆ. ರಾಮಾಯಣದಲ್ಲಿ ತ್ರಿಜಟೆಗೆ ಬಿದ್ದ ಕನಸು ನಿಜವಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಪೂರ್ವದಲ್ಲಿ ಪರಮಾತ್ಮನು ತನ್ನ ಭಕ್ತರ ಉದ್ಧಾರಕ್ಕಾಗಿ ಅವರ ಮನವರಿಕೆಗಳನ್ನು ಪೂರ್ತಿಗೊಳಿಸಲು ಆಗಾಗ್ಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಅನೇಕ ಮಹತ್ವದ ವಿಷಯವನ್ನು ಹೇಳಿರುವುದನ್ನು ನಾವು ಅನೇಕ ಪುರಾಣಗಳಲ್ಲಿ ಕೇಳಿದ್ದೇವೆ.
ಜ್ಯೋತಿಷ್ಯಶಾಸ್ತ್ರದಲ್ಲಿ ಸ್ವಪ್ನಫಲ ಶಾಸ್ತ್ರವೂ ಒಂದು ಭಾಗವಾಗಿದೆ. ಸ್ವಪ್ನಫಲವು ನಮಗೆ ಮುಂದೆ ಸಂಭವಿಸಬಹುದಾದ ಸುಖ ದುಃಖಗಳನ್ನು ಖಂಡಿತ ತಿಳಿಸುತ್ತವೆ ಎಂಬುದು ಅನುಭವಿಗಳ ಅಭಿಪ್ರಾಯ. ಎಚ್ಚರದಲ್ಲಿ ಕಂಡದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ಬಯಸಿ ಪಡೆಯದ್ದನ್ನು, ಮನಸ್ಸಿನ ಕಲ್ಪನೆಗಳನ್ನು ಕಾಣುವುದು ಸ್ವಪ್ನವೆನಿಸುವುದು. ಮುಂದಾಗುವುದನ್ನು ಮುಂಚಿತವಾಗಿ ಕನಸಿನಲ್ಲಿ ಕಾಣುವುದು, ಫಲ ಕೊಡುವಂತಹುದು. ಅಜೀರ್ಣ ಮುಂತಾದ ರೋಗಬಾಧೆಯಿಂದ ಉಂಟಾಗುವ ಸ್ವಪ್ನಕ್ಕೆ ಅರ್ಥ ಕಲ್ಪಿಸಿಕೊಳ್ಳಬಾರದು.
ಸ್ವಪ್ನಫಲಗಳನ್ನು ಈ ರೀತಿಯಾಗಿ ಜ್ಯೋತಿಷ್ಯಾಸ್ತ್ರದಲ್ಲಿ ತಿಳಿಸಿರುತ್ತಾರೆ. ನೋಡೋಣ⬇
* ಸ್ವಪ್ನದಲ್ಲಿ ನಮ್ಮ ನೆಚ್ಚಿನ ದೈವ, ಮುತ್ತೈದೆಯರು, ಬಿಳಿ ವಸ್ತುಗಳು, ನದಿಗಳು, ಪುಣ್ಯಕ್ಷೇತ್ರಗಳು, ತುಳಸಿ ಗಿಡ, ಕಂಡರೆ ಶುಭಫಲಗಳುಂಟಾಗುತ್ತವೆ.
* ಕನಸಿನಲ್ಲಿ ಬೆಂಕಿಯ ಜ್ವಾಲೆಯನ್ನು ಕಂಡರೆ ಭೋಗ ಸಂಪತ್ತು ಲಭಿಸುತ್ತದೆ.
*ಅನ್ನವನ್ನು ಕಂಡರೆ ಕೈಗೊಂಡ ಕಾರ್ಯ ನೆರವೇರುವುದು.
* ಸತ್ತವರು ಬದುಕಿಬಂದಂತಾದರೆ ಮರಣಭಯ ಉಂಟಾಗುತ್ತದೆ.
* ಕನಸಿನಲ್ಲಿ ಹಾವು ಕಂಡರೆ ಅಪಮೃತ್ಯು ಭಯವೆಂದು ಹೇಳುತ್ತಾರೆ. ಆದರೆ ಮನಸ್ಸಿನಲ್ಲಿ ಲೈಂಗಿಕ ಆಸಕ್ತಿಗಳಿದ್ದಾಗ ಹಾವು ಕನಸಿನಲ್ಲಿ ಬೀಳುವುದೆಂದು ಮನೋವಿಜ್ಞಾನಿಗಳು ತಿಳಿಸಿರುತ್ತಾರೆ.
*ಬಾಳೆಹಣ್ಣು, ಮಾವಿನಹಣ್ಣು ಮುಂತಾದ ಹಣ್ಣನ್ನು ಕಂಡರೆ ಸಂತಾನಪ್ರಾಪ್ತಿಯಾಗುವುದು. ಇಲ್ಲವೆ ಕೈಗೊಂಡ ಕಾರ್ಯಗಳು ನೆರವೇರುವುವು.
*ಸ್ವಪ್ನದಲ್ಲಿ ಭೋಜನ ಮಾಡಿದಂತೆ ಕಂಡರೆ ರೋಗಭಯ.
* ಸ್ವಪ್ನದಲ್ಲಿ ಮಲವನ್ನು ಕಂಡರೆ ಧನಪ್ರಾಪ್ತಿ ಎಂದು ತಿಳಿಯಬೇಕು.
* ಮಳೆ ಬಂದಂತೆ ಕಂಡರೆ ಪ್ರಯಾಣ.
* ಹಾರಿಕೊಂಡು ಹೋದಂತೆ ಕಂಡರೆ ಸ್ಥಾನ ಪಲ್ಲಟ.
* ಕೆಂಪು ಇಲ್ಲವೆ ಕಪ್ಪು ಬಣ್ಣದ ವಸ್ತುಗಳನ್ನು ಕಂಡರೆ ಕೇಡು.
* ಕನಸಿನಲ್ಲಿ ಶೀತ, ನೆಗಡಿಯಾದರೆ ಮನೆಗೆ ನೆಂಟರು ಬರುವರು.
* ಸಂಗೀತ ಕೇಳಿದರೆ ಸಾಲ ಮಾಡುವ ಪ್ರಸಂಗ ಬಂದೊದಗಬಹುದು.
* ಜಗಳ ಮಾಡುತ್ತಿರುವುದನ್ನು ಕಂಡರೆ ತೊಂದರೆ.
* ದೇವರ ಪೂಜೆ ಮಾಡುತ್ತಿದ್ದಂತೆ ಕಂಡರೆ ಮಾಡಿದ್ದ ಸಾಲ ಪರಿಹಾರವಾಗುವುದು.
* ವಿಧವೆಯರು, ಸನ್ಯಾಸಿ, ಬೆತ್ತಲೆ ಇದ್ದವರನ್ನು ಕಂಡರೆ ದುಃಖಕರ.
* ಮದ್ಯ, ಹೆಂಡಗಳನ್ನು ಕಂಡರೆ ಶುಭಸೂಚಕ.
* ಹಲ್ಲು ಬಿದ್ದಂತೆ ಸ್ವಪ್ನವಾದರೆ ವ್ಯಸನ.
* ಸೂರ್ಯ ಚಂದ್ರರನ್ನು ಕಂಡರೆ ರೋಗನಾಶ.
* ಹೆಣವನ್ನು ಕಂಡರೆ, ತಾನೇ ಸತ್ತಂತೆ ಕಂಡರೆ ದೀರ್ಘಾಯುಷಿ.
* ಸತ್ತವರು ಬಂದು ಅಪ್ಪಿದರೆ ಸಾವು
*ಹೆಣ್ಣು ಕಂಡರೆ ಶುಭಸೂಚಕ
ಮಿಂಚುಳ್ಳಿ ಅಥವಾ ಕೊಕ್ಕರೆಯ ಕನಸು ಬಿದ್ದರೆ ಗೌರವ ಹೆಚ್ಚಾಗುತ್ತದೆ ಮತ್ತು ಕೆಲವೇ ದಿನಗಳಲ್ಲಿ ಹಣ ಬರುತ್ತದೆ. 
*ಕದಮ್ ಮರವು ಕನಸಿನಲ್ಲಿ ಕಂಡರೆ ಒಳ್ಳೆಯ ಆರೋಗ್ಯ, ಗೌರವ ಮತ್ತು ಸಂಪತ್ತು ಬರುವ ಸೂಚನೆ. *ನೆಲ್ಲಿಕಾಯಿ ಮತ್ತು ತಾವರೆ ಕಂಡರೆ ಕೆಲವೇ ದಿನಗಳಲ್ಲಿ ಹಣ ಬರುತ್ತದೆ. 
*ನೀವೇ ಕಿವಿಯೋಲೆಯನ್ನು ಧರಿಸಿಕೊಂಡಂತೆ ಕನಸು ಬಿದ್ದರೆ ಹಣ ಬರುತ್ತದೆ. 
*ರೈತರು ಕೃಷಿ ಭೂಮಿಯಲ್ಲಿ ಕೆಲಸ ಮಾಡುವಂತೆ ಕನಸು ಕಂಡರೆ ಅಪರಿಚಿತ ಮೂಲದಿಂದ ಹಣ ಬರುತ್ತದೆ. 
*ದೀಪದ ಬಗ್ಗೆ ಕನಸು ಬಿದ್ದರೆ ನಿಮಗೆ ಯಾವುದೋ ಒಂದು ರೀತಿಯಿಂದ ಆಶೀರ್ವಾದ ಸಿಗುತ್ತದೆ. 
ಕನಸಿನಲ್ಲಿ ಚಿನ್ನ ಕಂಡರೆ ಸಂಪತ್ತು ಪಡೆಯುವ ಸೂಚನೆಯಾಗಿದೆ. 
*ನೀವು ಬೆರಳಿಗೆ ಉಂಗುರ ಹಾಕುತ್ತಿದ್ದಂತೆ ಕನಸು ಕಂಡರೆ ಐಶ್ವರ್ಯವನ್ನು ಸೂಚಿಸುತ್ತದೆ. 
*ಅರಮನೆ ಕಂಡರೆ ಅಧಿಕ ಪ್ರಮಾಣದಲ್ಲಿ ಹಣ ಬರುವ ಸೂಚನೆ. 
*ಹಾಲು ಕರೆಯುವ ದೃಶ್ಯ ಕಂಡರೆ ಹಣ ಬರುತ್ತದೆ ಎಂದು ಪರಿಗಣಿಸಲಾಗಿದೆ. 
*ಬೇರೆಯವರು ಹಾಲು ಕರೆಯುತ್ತಿರುವ ದೃಶ್ಯ ಕಂಡರೂ ಹಠಾತ್ ಆಗಿ ಹಣ ಬರುತ್ತದೆ. 
*ಕನಸಿನಲ್ಲಿ ಬಿಳಿ ಕುದುರೆ ಕಂಡರೆ ಭವಿಷ್ಯದಲ್ಲಿ ಸಂತಸದ ದಿನಗಳು ಇವೆ ಹಾಗೂ ಐಶ್ವರ್ಯ ವೃದ್ಧಿಸುತ್ತದೆ ಎಂಬ ಸೂಚನೆ 
*ಆನೆ ಕಂಡರೆ ಯಾವುದೋ ಮೂಲದಿಂದ ಸಂಪತ್ತು ಬರುತ್ತದೆ. 
*ಹಸು ಕಂಡರೆ ಮಂಗಳಕರ ಸೂಚನೆಯಾಗಿದ್ದು, ಐಶ್ವರ್ಯ, ವೈಭವ ಮತ್ತು ಅದ್ಭುತಗಳು ಉಂಟಾಗುತ್ತವೆ. 
*ಹಾಲು ಮತ್ತು ತುಪ್ಪದ ಕನಸು ಕಂಡರೂ ಹಣ ಬರುತ್ತದೆ. 
*ಇಲಿಗಳು ಕಂಡರೆ ಮನೆಗೆ ಸಂಪತ್ತು ಬರುತ್ತದೆ. 
*ಕಪ್ಪು ಚೇಳು ಕಂಡರೆ ಸಂಪತ್ತನ್ನು ಸೂಚಿಸುತ್ತದೆ. 
*ಹೆಡೆ ಎತ್ತಿದ ಹಾವು ಕಂಡರೆ ಸಂಪತ್ತಿನ ಜತೆಗೆ ಸಮಸ್ಯೆಗಳೂ ಎದುರಾಗುತ್ತವೆ. 
*ಬಿಲದಲ್ಲಿ ಹಾವು ಕಂಡರೆ ಹಠಾತ್ ಆಗಿ ಹಣ ಬರುತ್ತದೆ. 
*ಸತ್ತ ಪಕ್ಷಿ ಕಂಡರೆ ಚಿಂತಿಸಬೇಡಿ. ಹಠಾತ್ ಹಣ ಬರುವ ಲಕ್ಷಣವಿದು. 
*ಗಿಳಿ ಕಂಡರೆ ಹಣ ಬರುತ್ತದೆ ಎಂಬ ಪ್ರಬಲವಾದ ಸೂಚನೆ ಇದು. 
*ಮಾವಿನಹಣ್ಣು ಕಂಡರೆ ವಜ್ರ ಮತ್ತು ಚಿನ್ನಾಭರಣ ಸಿಗುತ್ತದೆ ಎಂಬ ಸೂಚನೆ. 
*ಜೇನುಗೂಡುಗಳು ಕಂಡರೆ ಹಣ ಪಡೆಯುವ ಸೂಚನೆ. 
*ಬಿಳಿ ಇರುವೆ ಕೂಡ ಹಣ ಬರುವ ಸೂಚನೆ. 
*ನೀವೇ ಸ್ವತಃ ಮರ ಹತ್ತುವ ಹಾಗೆ ಕಂಡರೆ ಹಣ ಸಂಪಾದನೆ ಮಾಡುತ್ತೀರಿ. 
*ಬೆಟ್ಟ, ಗುಡ್ಡಗಳನ್ನು ಹತ್ತುತ್ತಿರುವಂತೆ ಕಂಡರೆಯೂ ಹಣ ಸಂಪಾದನೆ ಮಾಡುತ್ತೀರಿ. 
*ಮರದ ತುಂಬಾ ಹಣ್ಣುಗಳು ಇರುವ ಕನಸು ಕಂಡರೆ ಹಣ ಹಾಗೂ ಶ್ರೀಮಂತಿಕೆಯ ಸೂಚನೆ. 

ಸ್ವಪ್ನ ಫಲ
ಕನಸುಗಳು ರಾತ್ರಿ 9ಗಂಟೆಯಿಂದ 12ಗಂಟೆಯೊಳಗೆ ಬಿದ್ದರೆ ಒಂದು ತಿಂಗಳೊಳಗಾಗಿ ಫಲ ಕಂಡುಬರುತ್ತದೆ. ರಾತ್ರಿ 12 ಗಂಟೆಯಿಂದ 3 ಗಂಟೆಯೊಳಗಾಗಿ ಬಿದ್ದ ಸ್ವಪ್ನಕ್ಕೆ ಒಂದು ವಾರದೊಳಗಾಗಿ ಫಲ ಕಂಡು ಬರುವುದು. ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯ ಒಳಗಾಗಿ ಬಿದ್ದ ಸ್ವಪ್ನಕ್ಕೆ ಮೂರು ದಿವಸಗಳೊಳಗಾಗಿ ಫಲ ಕಂಡುಬರುವುದು. ಸೂರ್ಯೋದಯದ ವೇಳೆಯಲ್ಲಿ ಬಿದ್ದ ಸ್ವಪ್ನವು ಅದೇ ದಿನದಲ್ಲಿ ಫಲ ಕಂಡುಬರುವುದು.


ದುಸ್ವಪ್ನ ಪರಿಹಾರಕ್ಕಾಗಿ ಮಂತ್ರ

‘ಅಗಸ್ತ್ಯೋ ಮಾಧವಶ್ಚೈವ ಮುಚ್ಚುಕುಂದೋ ಮಹಾಮುನಿಃಕಪಿಲೋ ಮುನಿರಾಸ್ತೀಕಃ ಪಂಚೈತೇ ಸುಖಶಾಯಿನಃ ‘ ಈ ಮಂತ್ರವನ್ನು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಹೇಳಿಕೊಂಡಲ್ಲಿ ದುಸ್ವಪ್ನಗಳು ಬೀಳುವುದಿಲ್ಲ.

ಸಂಗ್ರಹ: ಎಚ್ ಎಸ್ ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles