ಶಿವ ಚಿಂತನೆಯ ಅನುಸಂಧಾನ

  • ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಮಾಘ ಮಾಸದ ಕೃಷ್ಣಪಕ್ಷದ 13ನೇ (ಅಥವಾ 14ನೇ) ದಿನ ಶಿವರಾತ್ರಿ ಹಬ್ಬ. ಇಂದು ಕೆಲವು ಭಕ್ತರು ಒಂದು ಹನಿ ನೀರನ್ನೂ ಸೇವಿಸುವುದಿಲ್ಲ. ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ಪ್ರತಿ ಮೂರು ಗಂಟೆೆಗಳಿಗೊಮ್ಮೆ ಶಿವಲಿಂಗವನ್ನು ಹಾಲು, ಮೊಸರು, ಜೇನುತುಪ್ಪ, ಗುಲಾಬಿ ನೀರು ಇತ್ಯಾದಿಗಳಿಂದ ಪೂಜಿಸುತ್ತಾರೆ. ಓಂ ನಮಃ ಶಿವಾಯ ಎಂಬ ಮಂತ್ರವೂ ಮೊಳಗುತ್ತಿರುತ್ತದೆ. ಈ ವೇಳೆ ಲಿಂಗಕ್ಕೆ ಅರ್ಪಿಸಲಾಗುವ ಬಿಲ್ವಪತ್ರೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.

ಅದಕ್ಕೊಂದು ಕತೆಯಿದೆ. ಮಹಾಭಾರತದ ಶಾಂತಿಪರ್ವದಲ್ಲಿ, ಭೀಷ್ಮನು ಶರಮಂಚದಲ್ಲಿ ಮಲಗಿ, ಧರ್ಮಪಾಲನೆ ಮಾಡುತ್ತಿರುವಾಗ ರಾಜ ಚಿತ್ರಭಾನುವಿನ ಮಹಾ ಶಿವರಾತ್ರಿಯ ಪಾಲನೆಯನ್ನು ಉಲ್ಲೇಖಿಸುತ್ತಾನೆ. ಇಕ್ಷಾ÷್ವಕ್ಷÄ ರಾಜವಂಶದ ರಾಜ ಚಿತ್ರಭಾನು ತನ್ನ ಪತ್ನಿಯೊಂದಿಗೆ ಮಹಾ ಶಿವರಾತ್ರಿಯ ದಿನ ಉಪವಾಸ ವ್ರತ ಕೈಗೊಂಡಿರುತ್ತಾನೆ. ಅಂದೇ ಅಷ್ಟಾವಕ್ರ ಮುನಿಗಳು ರಾಜನ ಆಸ್ಥಾನಕ್ಕೆ ಆಗಮಿಸುತ್ತಾರೆ.
ಮುನಿ ಕೇಳುತ್ತಾರೆ, ಓ ದೊರೆಯೇ! ನೀವೇಕೆ ಉಪವಾಸ ಮಾಡುತ್ತಿದ್ದೀರಿ? ಈ ಪ್ರಶ್ನೆಗೆ ರಾಜ ಚಿತ್ರಭಾನು ಉತ್ತರಿಸುತ್ತಾನೆ. ಅವನಿಗೆ ತನ್ನ ಪೂರ್ವಜನ್ಮದ ಘಟನೆಗಳನ್ನು ನೆನಪಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ.

‘ನನ್ನ ಪೂರ್ವಜನ್ಮದಲ್ಲಿ ನಾನು ವಾರಾಣಸಿಯಲ್ಲಿ ಬೇಟೆಗಾರನಾಗಿದ್ದೆ. ನನ್ನ ಹೆಸರು ಸುಸ್ವರ ಎಂದಾಗಿತ್ತು. ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಹುಡುಕುತ್ತಾ ಕಾಡಿನಲ್ಲಿ ಅಲೆದಾಡುತ್ತಿದ್ದೆ. ಮುಂದೆ ಹೋದಂತೆ, ಕತ್ತಲೆ ಆವರಿಸಿಕೊಂಡಿತು. ಆಶ್ರಯಕ್ಕಾಗಿ ಮರವೊಂದನ್ನು ಹತ್ತಿ ಕುಳಿತೆ. ಅದು ಬಿಲ್ವ ಮರವಾಗಿತ್ತು. ಅಂದು ನಾನು ಜಿಂಕೆಯೊ0ದನ್ನು ಬೇಟೆಯಾಡಿದೆಯಾದರೂ, ಅದನ್ನು ಮನೆಗೆ ಕೊಂಡೊಯ್ಯಲು ಸಮಯ ಸಿಗಲಿಲ್ಲ. ಹಾಗಾಗಿ, ಆ ಜಿಂಕೆಯನ್ನು ಸುತ್ತಿ, ಕಟ್ಟಿ, ಮರದ ಕೊಂಬೆಯೊ0ದಕ್ಕೆ ನೇತುಹಾಕಿದೆ. ನನಗೆ ಹಸಿವು ಹಾಗೂ ದಾಹ ತೀವ್ರವಾಗಿದ್ದರಿಂದ, ರಾತ್ರಿಯಿಡೀ ಎಚ್ಚರವಾಗಿಯೇ ಇದ್ದೆ. ಹಸಿವಿನಿಂದ ಬಳಲುತ್ತಿರುವ ಹಾಗೂ ನನ್ನ ಬರುವಿಕೆಗಾಗಿ ಕಾಯುತ್ತಿರುವ ನನ್ನ ಹೆಂಡತಿ-ಮಕ್ಕಳನ್ನು ನೆನೆಯುವಾಗ ನನ್ನ ಕಣ್ಣಾಲಿಗಳು ತುಂಬಿದವು. ಆ ರಾತ್ರಿಯನ್ನು ಹೇಗಾದರೂ ಕಳೆಯಬೇಕೆಂದು ಮರದ ಎಲೆಗಳನ್ನು ಒಂದೊ0ದಾಗಿ ಕೀಳುತ್ತಾ, ಕೆಳಕ್ಕೆ ಹಾಕುತ್ತಿದ್ದೆ.
ಮಾರನೇ ದಿನ ಬೆಳಗ್ಗೆ ನಾನು ಕೆಳಗಿಳಿದು ಮನೆಗೆ ವಾಪಾಸಾದೆ. ಜಿಂಕೆಯನ್ನು ಮಾರಾಟ ಮಾಡಿದೆ. ಕುಟುಂಬಕ್ಕೆ ಸ್ವಲ್ಪ ಆರಾಹವನ್ನು ಖರೀದಿಸಿ ತಂದೆ. ಇನ್ನೇನು ಉಪವಾಸ ಮುರಿಯಲು ಮುಂದಾಗುತ್ತಿದ್ದ0ತೆ, ಒಬ್ಬ ಅಪರಿಚಿತ ವ್ಯಕ್ತಿ ಬಳಿ ಬಂದು, ಆಹಾರಕ್ಕಾಗಿ ಬೇಡಿದ. ಮೊದಲು ಅವನಿಗೆ ಆಹಾರ ಕೊಟ್ಟು, ನಂತರ ನಾನು ಸೇವಿಸಿದೆ. ಸಾವಿನ ಸಮಯದಲ್ಲಿ, ಶಿವದೇವರ ಇಬ್ಬರು ಸಂದೇಶವಾಹಕರು ನನ್ನ ಮುಂದಿದ್ದರು. ನನ್ನ ಆತ್ಮವನ್ನು ಶಿವನ ಆವಾಸಸ್ಥಾನಕ್ಕೆ ಕೊಂಡೊಯ್ಯಲೆ0ದು ಅವರನ್ನು ಕಳುಹಿಸಲಾಗಿತ್ತು. ಆ ಶಿವರಾತ್ರಿಯ ದಿನದಂದು ಅರಿವಿಲ್ಲದಂತೆಯೇ ನಾನು ಶಿವನನ್ನು ಪೂಜಿಸಿದ್ದೇ ನನಗೆ ವರವಾಗಿ ಪರಿಣಮಿಸಿತು ಎಂದು ಅಂದೇ ನನಗೆ ಗೊತ್ತಾಗಿದ್ದು. ಅಂದು ಮರದ ಕೆಳಗೆ ಲಿಂಗವೊ0ದಿತ್ತು. ನಾನು ಕೆಳಕ್ಕೆ ಹಾಕುತ್ತಿದ್ದ ಬಿಲ್ವಪತ್ರೆಗಳು ಆ ಶಿವಲಿಂಗವನ್ನು ತಾಕುತ್ತಿದ್ದವು. ನಾನಂದು ಹಾಕಿದ ಕಣ್ಣೀರು ಶಿವಲಿಂಗವನ್ನು ತೊಳೆಯುತ್ತಿತ್ತು. ಇಡೀ ಹಗಲು, ಇಡೀ ರಾತ್ರಿ ಉಪವಾಸ ಮಾಡಿದ ಕಾರಣ, ನಾನಂದು ಪ್ರಜ್ಞಾಪೂರ್ವಕವಲ್ಲದೆ ಶಿವನನ್ನು ಪೂಜಿಸಿದ್ದೆ. ಅಂದಿನಿ0ದ ದೀರ್ಘಕಾಲ ನಾನು ಭಗವಂತನ ಆವಾಸದಲ್ಲಿ ಸಂತೋಷದಿ0ದ ಬದುಕಿದೆ ಹಾಗೂ ದೈವಿಕಾನಂದಕ್ಕೆ ಪಾತ್ರನಾದೆ. ನಂತರ ಈಗ ನಾನು ಚಿತ್ರಭಾನುವಾಗಿ ಮರುಹುಟ್ಟು ಪಡೆದೆ.


ಲೌಕಿಕದ ಬೇಟೆಗಾರ ಅಧ್ಯಾತ್ಮದ ಬೆಳಗು ಕಾಣುವ ರಾತ್ರಿ
ಇದೊಂದು ಸಾಂಕೇತಿಕ ಕಥೆ. ಇಲ್ಲಿ ಬೇಟೆಗಾರನು ಬೇಟೆಯಾಡಿದ ಕಾಡಿನ ಕ್ರೂರ ಪ್ರಾಣಿಗಳು ಆತನ ಲಾಲಸೆ, ಕೋಪ, ದುರಾಸೆ, ವ್ಯಾಮೋಹ, ಅಸೂಯೆ ಮತ್ತು ದ್ವೇಷವನ್ನು ಸೂಚಿಸುತ್ತವೆ. ಇಲ್ಲಿ ಅರಣ್ಯವೆಂದರೆ ಚತುರ್ಗುಣವುಳ್ಳ ಮನಸ್ಸನ್ನು, ಅಂದರೆ ಸುಪ್ತಮನಸ್ಸು, ಬುದ್ಧಿ, ಅಹಂ ಮತ್ತು ಪ್ರಜ್ಞೆಯುಳ್ಳ ಮನಸ್ಸನ್ನು ಒಳಗೊಂಡಿರುವAಥದ್ದು. ಈ ಮನಸ್ಸಿನಲ್ಲೇ ಆ ಕ್ರೂರ ಪ್ರಾಣಿಗಳು ಮುಕ್ತವಾಗಿ ಸಂಚರಿಸುತ್ತಿರುತ್ತವೆ. ಅವುಗಳನ್ನು ಕೊಲ್ಲಲೇಬೇಕು. ಇಲ್ಲಿ ಬೇಟೆಗಾರನು ಯೋಗಿಯಾದ ಕಾರಣ, ಆ ಕೆಲಸವನ್ನು ಪೂರೈಸುವಲ್ಲಿ ಯಶಸ್ವಿಯಾದ. ನೀವು ಕೂಡ ಯೋಗಿ ಆಗಬೇಕೆಂದರೆ, ಈ ದುರ್ಗುಣಗಳ ವಿರುದ್ಧ ಹೋರಾಡಿ ಗೆಲ್ಲಬೇಕು.
ವ್ಯಕ್ತಿಯು ಯಮ ಮತ್ತು ನಿಯಮವನ್ನು ಪಾಲಿಸುತ್ತಿದ್ದರೆ, ತನ್ನ ದುರ್ಗುಣಗಳ ವಿರುದ್ಧ ಸೆಣಸುತ್ತಿದ್ದರೆ, ಆತನಲ್ಲಿ ಯೋಗಿಯ ನಿರ್ದಿಷ್ಟವಾದ ಬಾಹ್ಯ ಲಕ್ಷಣಗಳು ಗೋಚರಿಸತೊಡಗುತ್ತವೆ. ಮೊದಲ ಲಕ್ಷಣವೆಂದರೆ, ಶರೀರವು ಹಗುರವಾಗುವುದು, ಆರೋಗ್ಯ, ಸ್ಥಿರತೆ, ಮುಖಚರ್ಯೆಯಲ್ಲಿ ಸ್ಪಷ್ಟತೆ ಮತ್ತು ಹಿತವಾದ ಧ್ವನಿ ಈ ಹಂತವನ್ನು ಶ್ವೇತಾಶ್ವರ ಉಪನಿಷತ್‌ನಲ್ಲಿ ತಿಳಿಸಲಾಗಿದೆ. ಬೇಟೆಗಾರ ಅಥವಾ ಯೋಗಿಯು ಹಲವು ವರ್ಷಗಳಿಂದ ಯೋಗವನ್ನು ಅಭ್ಯಾಸ ಮಾಡಿಯೇ ಆತ ಮೊದಲ ಹಂತವನ್ನು ತಲುಪಿರುತ್ತಾನೆ.
ಬಿಲ್ವ ಮರವು ಬೆನ್ನುಮೂಳೆಯ ಕಂಬವನ್ನು ಪ್ರತಿನಿಧಿಸುತ್ತದೆ. ಎಲೆಗಳು ಮೂರುಪಟ್ಟಾಗಿದ್ದು, ಅವುಗಳು ಇಡ, ಪಿಂಗಳ ಮತ್ತು ಸುಷಮ್ನ ನಾಡಿಗಳನ್ನು ಪ್ರತಿನಿಧಿಸುತ್ತವೆ. ಇವುಗಳು ಕ್ರಮವಾಗಿ ಚಂದ್ರ, ಸೂರ್ಯ ಮತ್ತು ಅಗ್ನಿಯ ಚಟುವಟಿಕೆಗಳ ಪ್ರದೇಶಗಳಾಗಿದ್ದು, ಇವುಗಳನ್ನು ಶಿವನ ಮೂರು ಕಣ್ಣುಗಳೆಂದೂ ಗುರುತಿಸಬಹುದಾಗಿದೆ. ಇಲ್ಲಿ ಮರವನ್ನು ಏರುವುದೆಂದರೆ, ಕುಂಡಲಿನಿ ಶಕ್ತಿಯನ್ನು ಆರೋಹಣ ಮಾಡಿದಂತೆ. ಈ ಸರ್ಪಾಕಾರದ ಶಕ್ತಿ ಅಂದರೆ, ನರವ್ಯೂಹದ ಅತ್ಯಂತ ಕೆಳಗಿನ ಕೇಂದ್ರವಾದ ಮೂಲಾಧಾರದಿಂದ ಆಜ್ಞ ಚಕ್ರದವರೆಗೆ ಏರುವುದು ಎಂದರ್ಥ. ಇದುವೇ ಯೋಗಿಯ ಕೆಲಸ.
ಮರದ ಮೇಲೆ ಆತ ಏಕ್ರಾಗತೆ ಮತ್ತು ಧ್ಯಾನವನ್ನು ಅಭ್ಯಸಿಸುತ್ತಾನೆ. ಅವನು ನಿದ್ದೆಗೆ ಜಾರುತ್ತಾನೆ ಎಂದರೆ, ಆತ ತನ್ನ ಪ್ರಜ್ಞೆಯನ್ನು ಕಳೆದುಕೊಂಡಾಗ, ಗಾಢ ನಿದ್ದೆಗೆ ಶರಣಾಗುತ್ತಾನೆ. ಅವನ ಪತ್ನಿ ಮತ್ತು ಮಕ್ಕಳು ಎಂದರೆ ಇಲ್ಲಿ ಈ ಪ್ರಪಂಚವೇ ಹೊರತು ಬೇರೇನೂ ಅಲ್ಲ. ಯಾರು ಭಗವಂತನ ಕೃಪೆಯನ್ನು ಬಯಸುತ್ತಾರೋ, ಅವರು ಮೊದಲು ಪ್ರೀತಿಯ ಸಾಕಾರ ಮೂರ್ತಿಗಳಾಗಬೇಕು. ಎಲ್ಲರನ್ನೂ ಬರಸೆಳೆಯುವಂತಹ ಕರುಣೆ ಅವರಲ್ಲಿರಬೇಕು. ಇಲ್ಲಿ ಆತನ ಕಣ್ಣೀರು ಸಾರ್ವತ್ರಿಕ ಪ್ರೀತಿಯ ಸಂಕೇತ. ಯೋಗದಲ್ಲೂ ಕೂಡ, ಭಗವಂತನ ಕೃಪೆಯಿಲ್ಲದೆ ಜ್ಞಾನೋದಯ ಆಗದು. ಸಾರ್ವತ್ರಿಕ ಪ್ರೀತಿಯನ್ನು ಅಭ್ಯಸಿದವನಿಗೆ, ದೇವಕೃಪೆ ಸಾಧ್ಯವಿಲ್ಲ.
ಮನುಷ್ಯನನ್ನು ಪೀಡಿಸುವ ಎರಡು ಅತಿದೊಡ್ಡ ನೈಸರ್ಗಿಕ ಶಕ್ತಿಗಳೆಂದರೆ, ರಜಸ್ (ಸಹಾನುಭೂತಿಯ ಚಟುವಟಿಕೆಯ ಗುಣ) ಮತ್ತು ತಮಸ್ (ಜಡತ್ವ). ಈ ಎರಡನ್ನೂ ಸರಿಯಾಗಿ ನಿಯಂತ್ರಿಸಿಕೊಳ್ಳುವುದೇ ಶಿವರಾತ್ರಿ ವ್ರತದ ಉದ್ದೇಶ. ಆ ಇಡೀ ದಿನವನ್ನು ಭಗವಂತನ ಪಾದದಡಿ ಕಳೆಯಲಾಗುತ್ತದೆ. ನಿರಂತರವಾಗಿ ದೇವಸ್ತುತಿ ಮಾಡಬೇಕಾದ್ದರಿಂದ ದೇವಾಲಯದಲ್ಲಿ ಭಕ್ತನ ಸ್ಥಿರವಾದ ಉಪಸ್ಥಿತಿಯಿರುತ್ತದೆ. ಚಲನೆಯು ನಿಯಂತ್ರಣಕ್ಕೆ ಬರುತ್ತದೆ. ರಜಸ್‌ನಿಂದ ಹುಟ್ಟಿದ ಲಾಲಸೆ, ಕೋಪ ಮತ್ತು ಅಸೂಯೆಯಂತಹ ಕೆಡುಕುಗಳು ನಿರ್ಲಕ್ಷö್ಯಕ್ಕೊಳಗಾಗಿ, ದಮಕ್ಕೀಡಾಗುತ್ತವೆ. ರಾತ್ರಿಯಿಡೀ ಭಕ್ತನು ಎಚ್ಚರದಿಂದಿರುವ ಮೂಲಕ ತಮಸ್ ಅನ್ನೂ ಸೋಲಿಸುತ್ತಾನೆ. ನಿರಂತರ ಹಾಗೂ ಸ್ಥಿರ ನಿಗಾವು ಮನಸ್ಸನ್ನು ಆವರಿಸುತ್ತದೆ. ಹೀಗಾಗಿ, ಶಿವರಾತ್ರಿ ಎನ್ನುವುದು ಅತ್ಯಂತ ಸೂಕ್ತವಾದ ವ್ರತ.
ಔಪಚಾರಿಕ ಆರಾಧನೆಯು ಭಗವಂತನನ್ನು ಜಳಕ ಮಾಡಿಸುವುದನ್ನು ಒಳಗೊಂಡಿದೆ. ಶಿವ ದೇವರನ್ನು ಬೆಳಕಿನ ಸ್ವರೂಪ (ಶಿವಲಿಂಗವೂ ಇದನ್ನೇ ಪ್ರತಿನಿಧಿಸುತ್ತದೆ)ವೆಂದು ಪರಿಗಣಿಸಲಾಗುತ್ತದೆ. ಶಿವನು ಸಂಯಮದ ಬೆಂಕಿಯಲ್ಲಿ ಉರಿಯುತ್ತಿರುತ್ತಾನೆ. ಹೀಗಾಗಿ, ಆತನನ್ನು ತಣ್ಣೀರ ಸ್ನಾನದಿಂದ ಶಾಂತಗೊಳಿಸಲಾಗುತ್ತದೆ. ಲಿಂಗವನ್ನು ಸ್ನಾನ ಮಾಡಿಸುವಾಗ ಭಕ್ತರು ಪ್ರಾರ್ಥಿಸುತ್ತಾರೆ: ಓ ಭಗವಂತನೇ, ನಾನು ನಿನ್ನನ್ನು ನೀರು, ಹಾಲು ಇತ್ಯಾದಿಗಳಿಂದ ಜಳಕ ಮಾಡಿಸುತ್ತೇನೆ. ಅಂತೆಯೇ, ನೀನು ನನಗೆ ಜ್ಞಾನದ ಹಾಲಿನಿಂದ ಸ್ನಾನ ಮಾಡಿಸುತ್ತೀಯಾ. ದಯವಿಟ್ಟು, ನೀನು ನನ್ನ ಎಲ್ಲ ಪಾಪಗಳನ್ನು ತೊಳೆದುಬಿಡು. ನನ್ನನ್ನು ದಹಿಸುತ್ತಿರುವ ಲೌಕಿಕತೆಯ ಬೆಂಕಿಯು ಆಗ ಸಂಪೂರ್ಣವಾಗಿ ಅಳಿದು ಹೋಗಲ. ನಾನು ಒಂದು ಕ್ಷಣವೂ ಕಾಯದೇ ನಿನ್ನನ್ನು ಸೇರಿಬಿಡುತ್ತೇನೆ.


ನೀಲಕಂಠನ ಪಾಠಗಳು
* ಸಮುದ್ರ ಮಥನ ಸಂದರ್ಭದಲ್ಲಿ ಎಲ್ಲರೂ ಭೋಗಾಪೇಕಗಷೆಯ ವಸ್ತುಗಳಿಗೆ ಆಸೆ ಪಟ್ಟರು. ಆದರೆ ಶಿವನೋ ಲೋಕ ಕಲ್ಯಾಣಕ್ಕಾಗಿ ಕಾಲಕೂಟ ವಿಷವನ್ನೇ ಕುಡಿಯಲು ಯತ್ನಿಸುತ್ತಾನೆ. ಇದರಿಂದ ನಾವು ಕಲಿಯಬೇಕಾದ ಅಂಶವೆ0ದರೆ, ನಕಾರಾತ್ಮಕ ಅಂಶಗಳನ್ನು ನೀಡಬೇಕು. ಅಂದರೆ ನಮ್ಮ ನಡಾವಳಿಗಳು ಸಕಾರಾತ್ಮಕವಾಗಿರಬೇಕು.
* ಶಿವ ತ್ರಿಶೂಲಧಾರಿಯಾಗಿದ್ದಾನೆ. ಇಲ್ಲಿ ತ್ರಿಶೂಲವು ಸ್ವಯಂ ನಿಯಂತ್ರಣದ ಸಂಕೇತ. ಹೌದು, ಪ್ರತಿಯೊಬ್ಬರ ಬದುಕು ಈಷ್ಯೇ, ಸ್ವಾರ್ಥಪರ ಚಿಂತನೆಯಿ0ದ ಹಾಳಾಗುತ್ತದೆ. ಅಂತಹ ಗುಣಗಳಿಗೆ ನಾವು ಅಂಕೆಯನ್ನಿಡಬೇಕು. ಸತ್ವ, ತಮ, ರಜೋ ಗುಣ(ತ್ರಿಶೂಲ)ಗಳಿಂದ ಆವೃತ್ತವಾದ ಮನಸ್ಸನ್ನು ಏಕೀಕೃತಗೊಳಿಸುವಂತೆ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು.
* ಶಿವನ ಜಟೆಯಿಂದ ಗಂಗೆ ಧುಮ್ಮಿಕುತ್ತಾಳೆ. ಗಂಗೆ ಪವಿತ್ರತೆಯ ಸಂಕೇತ. ಜೀವರಾಶಿಗೆ ಆಕೆ ಉಲ್ಲಾಸದ ಕಾರಂಜಿ. ತಲೆಯಿಂದ ಹೊರಹೊಮ್ಮುವ ಉಲ್ಲಾಸ ಜ್ಞಾನದ ಸಂಕೇತ. ಅಂದರೆ, ಮನಸ್ಸಿಗೆ ಕವಿದ ಮಂಕುತನವನ್ನು ಕಳೆದುಕೊಳ್ಳಬೇಕು. ಅಲ್ಲಿ ಜ್ಞಾನದ ಕಾರಂಜಿ ಪುಟಿಯುವಂತೆ ಮಾಡಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles