ಮಾರ್ಚ್ 11 ರಂದು ಶ್ರೀ ವರಸಿದ್ದಿ ಮಂಜುನಾಥೇಶ್ವರ ಸನ್ನಿಧಿಯಲ್ಲಿ ರುದ್ರಾಭಿಷೇಕ

ಬನಶಂಕರಿ 3 ನೇ ಹಂತದ ಹೊಸಕೇರಿಹಳ್ಳಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಮಾರ್ಚ್ 11 ರಂದು ಮಹಾ ಶಿವರಾತ್ರಿ  ಪ್ರಯುಕ್ತ ಮುಂಜಾನೆ  8.30ಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ  ಮಧ್ಯಾಹ್ನ 12  ಗಂಟೆಗೆ ಮಹಾಮಂಗಳಾರತಿ ಜರುಗಲಿದೆ. ಸಂಜೆ  6 ಗಂಟೆಗೆ ರುದ್ರಾಭಿಷೇಕ  ರಾತ್ರಿ  8 ಗಂಟೆಗೆ  ರಂಗ ಪೂಜೆ  – ದೀಪಾರಾಧನೆ  ನಡೆಯಲಿದೆ , ಮಾರ್ಚ್ 12 ರ  ಶುಕ್ರವಾರ  ಬೆಳಗ್ಗೆ  9 ರಿಂದ  12 ರ ವರೆಗೆ ರುದ್ರಯಾಗವನ್ನು  ಹಮ್ಮಿಕೊಳ್ಳಲಾಗಿದ್ದು ನಂತರ  ಭಕ್ತರಿಗೆ ಅನ್ನದಾನ ಸೇವೆ ನಡೆಯಲಿದೆ.

ಕ್ಷೇತ್ರ ಪರಿಚಯ: ಈದೇವಾಲಯದಲ್ಲಿ ರುದ್ರಾಂತರ್ಗತ ಶ್ರೀ ಲಕ್ಷ್ಮೀ  ನರಸಿಂಹ  ಸದಾಶಿವ  ಮಂಜುನಾಥ , ಸ್ವಯಂವರ ಶ್ರೀ  ಪಾರ್ವತಿ ದೇವಿ ಹಾಗೂಶ್ರೀ  ಮಹಾಗಣಪತಿ  ಸನ್ನಿಧಾನವಿದೆ. ಚೌಕಾಕಾರ ವಿನ್ಯಾಸದಲ್ಲಿರುವ ದೇವಾಲಯದ ಮುಂಭಾಗದಲ್ಲಿ ಗರುಡಗಂಬವಿದ್ದು ದೇವಾಲಯದ ಪ್ರಮುಖ ದ್ವಾರದ ಮೇಲ್ಭಾಗದಲ್ಲಿ ಶಿವ  ಪಾರ್ವತಿ ಮತ್ತು ಗಣಪತಿ ಇದ್ದು ರಾಜ ಗೋಪುರವಿದೆ.

ಸಂತಾನ ಭಾಗ್ಯಕ್ಕೆ ಪ್ರದಕ್ಷಿಣೆ ಸೇವೆ :

ಶ್ರೀ ಕ್ಷೇತ್ರದಲ್ಲಿ ಪ್ರದಕ್ಷಿಣೆ ರೂಪದಲ್ಲಿ ಸೇವೆ ಸಲ್ಲಿಸಿ ಅನೇಕ ದಂಪತಿಗಳು ಸಂತಾನ ಪಡೆದಿದ್ದಾರೆ. ಉದ್ಯೋಗ  ಸಮಸ್ಯೆ ಇದ್ದರೆ  ಹಾಗೂ  ನೂತನ ಉದ್ಯೋಗದ  ಹುಡುಕಾಟದಲ್ಲಿಇದ್ದರೆ ಇಲ್ಲಿ ಬೇಡಿದರೆ  ಉದ್ಯೋಗ ವನ್ನು  ಭಗವಂತ ದಯಪಾಲಿಸುತ್ತಾನೆ ಆದರಿಂದ ಶ್ರೀ ಕ್ಷೇತ್ರ ಕ್ಕೆ  ಶ್ರೀ ವರಸಿದ್ದಿ ಮಂಜುನಾಥೇಶ್ವರ ಎಂಬ  ಹೆಸರು, ಸಣ್ಣ ಮಕ್ಕಳಿಗೆ ಆಗುವ ಭಯ ಭೀತಿ ನಿವಾರಿಸಲು ಶ್ರೀ ಸ್ವಾಮಿಯ ಸನ್ನಿಧಾನದಲ್ಲಿ ಯಂತ್ರ ಮಾಡಿ ಕೊಡಲಾಗುತ್ತದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಪುರೋಹಿತರಾದ ವೇದ ಗಿರಿ ಭಟ್.

 ಸನ್ನಿಧಿಯಲ್ಲಿ ನಡೆಯುವ ಸೇವೆಗಳು: ಪಂಚಾಮೃತ, ಕ್ಷೀರಾಭಿಷೇಕ,  ಅರ್ಚನೆ, ರುದ್ರಯಾಗ (ಸಾಮೂಹಿಕ) ಸೇವೆ, ರಂಗಪೂಜೆ,ದೀಪಾರಾಧನೆ, ಪ್ರದೋಷ ಪೂಜೆ, ಎಳನೀರು ಅಭಿಷೇಕ, ರುದ್ರಾಭಿಷೇಕ, ಏಕಾದಶ ರುದ್ರಾಭಿಷೇಕ, ಸಂಪೂರ್ಣ ರುದ್ರಾಭಿಷೇಕ ಸೇವೆ, ಸಂಪೂರ್ಣ ರುದ್ರಯಾಗ ಸೇವೆ ಹಾಗೂ ಅನ್ನದಾನ ಸೇವೆ ನಡೆಯಲಿದೆ. ದೇವಾಲಯವು ಬೆಳಗ್ಗೆ 6 ರಿಂದ 12 ರವರೆಗೆ, ಸಂಜೆ 5 ರಿಂದ ರಾತ್ರಿ 8.30ರ ವರೆಗೆ ತೆರೆದಿರುತ್ತದೆ.  

ಮಾಹಿತಿ: ಅನಂತ ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles