*ಸ್ವಾಮಿ ಜಪಾನಂದ
`ಶಿವ’ ಎಂಬ ಪವಿತ್ರ ನಾಮದ ಅರ್ಥ ಮಂಗಳಕರನು, ಶುಭಕರನು, ಸ್ವೀಕರನೂ ಅವನೆ. ಪರಬ್ರಹ್ಮನೇ ಪರಮೇಶ್ವರ, ಲಯಕಾರಕ ಶಿವ, ರುದ್ರ. ರುದ್ರಪ್ರಶ್ನದಲ್ಲಿ ಶಿವನ ಬಹುವಿಧವಾದ ನಾಮಾಂಕಿತಗಳನ್ನು ಕಾಣಬಹುದಾಗಿದೆ. ಋಗ್ ವೇದದಲ್ಲಿ ಶಿವ ಎಂಬ ನಾಮಾಂಕಿತದಿಂದ ಸುಪ್ರಸಿದ್ದನಾಗಿದ್ದಾನೆ ಈ ಪರಮೇಶ್ವರ. ಈ ರುದ್ರನಿಗೆ ಮತ್ತೆ ನಾನಾ ರೀತಿಯ ನಾಮಾಂಕಿತಗಳಿವೆ. ಶಿವ, ಶಂಕರ, ಪಶುಪತಿ, ಈಶ್ವರ, ಮುಕ್ಕಣ್ಣ, ಶಶಿಧರ, ನೀಲಕಂಠ, ನಂಜುಂಡ, ಮಹೇಶ್ವರ, ನಾಗರಾಜ, ಕೈಲಾಸಪತಿ, ಹರ, ವಿಶೇಷಣಗಳಿಂದ ಕೂಡಿದ ‘ಶಿವ’ನನ್ನು ಪೂಜಿಸುವ, ಅರ್ಚಿಸುವ ಮಹತ್ತರವಾದ ದಿನವೆಂದರೆ “ಮಹಾಶಿವರಾತ್ರಿ”. ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ತರವಾದ ಹಬ್ಬವೆಂದೆನಿಸಿಕೊಳ್ಳುತ್ತದೆ ‘ಮಹಾಶಿವರಾತ್ರಿ’.
ಇನ್ನು ‘ಶಿವ’ ಎಂದರೆ ‘ಮಾಯೆ’ ಎಂದೂ ಅರ್ಥೈಸಲ್ಪಟ್ಟಿದೆ. ನಿರಾಕಾರ ನಿರ್ಗುಣ ಬ್ರಹ್ಮನನ್ನು ಸ್ತುತಿಸುವುದಾಗಿದೆ. ‘ಶಿವನ ಮೂಲಕವೇ ಶಬ್ದದ ಸ್ತುತಿಸಲಾಗುವುದು. ಶನ್, ಶಿನ್, ಶಿವ್ ಎಂಬ ಬೀಜಾಕ್ಷರ ‘ಶಿವ’ ಮೂಲ ಎನ್ನುತ್ತಾರೆ. ಸಾಯಣರು ‘ರುದ್ರ’ ಎಂಬ ಪದಕ್ಕೆ ಆರು ಅರ್ಥಗಳನ್ನು ತಿಳಿಸುತ್ತಾರೆ. ಹಾಗೆಯೇ ಐದು – ಮಂತ್ರಗಳಿಂದಾಗಿ ‘ಶಿವ’ನ ರೂಪ ಬಂದಿವೆ ಎಂದು ತಿಳಿಸಲಾಗುತ್ತದೆ. ಅವುಗಳೇ ಸದ್ಯೋಜಾತ, ವಾಮದೇವ, ಅಘೋರ, ತತ್ ಪುರುಷ ಮತ್ತು ಈಶಾನ. ‘ಈಶಾನ’ ಎಂದರೆ ಮನುಷ್ಯನ ದೃಷ್ಟಿಗೆ ಸಿಲುಕದವನು ಎಂರ‍್ರ÷್ಥ. ಇನ್ನು ‘ಸದ್ಯೋಜಾತ’ ಎಂದರೆ ಮೂಲ ತತ್ವಗಳಲ್ಲಿ ಒಂದದ ‘ಭೂಮಿ’, ಎಂದರೆ ‘ಗಂಧವತಿ ಧರತಿ’ ಮಂದಾರ ಎಂಬೆಲ್ಲಾ ಅರ್ಥ ಬರುತ್ತದೆ. ವಿಷ್ಣು ಧರ್ಮೋತ್ತರ ಪುರಾಣದಲ್ಲಿ ತಿಳಿಸಿರುವಂತೆ ಪಂಚ ತತ್ತ÷್ವಗಳಾದ ಸಧ್ಯೋಜಾತ-ಭೂಮಿ, ಪರಮದೇವ, ಜಲ, ಅಘೋರ, ಅಗ್ನಿ, ತತ್ ಪುರುಷ, ವಾಯು, ಈಶಾನ, ಆಕಾಶ, ಹೀಗೆ ಪರಮೇಶ್ವರನು ಈ ಐದು ಪಂಚಭೂತಗಳ ಪ್ರತೀಕವೆಂದೂ ಆರಾಧಿಸಲ್ಪಡುತ್ತಾನೆ. ಈ ಐದೂ ತತ್ತ÷್ವಗಳನ್ನು ಹೊಂದಿರುತ್ತಾನೆ ಹಾಗೂ ಪ್ರತಿನಿಧಿಸಲ್ಪಡುವ ಭಗವದಂಶವೇ “ಸದಾಶಿವ” ಎನಿಸಿಕೊಳ್ಳುತ್ತಾನೆ. ಈ ಐದೂ ತತ್ತ÷್ವಗಳ ಏಕಮುಖವೇ ಪರಮೇಶ್ವರ ಎಂದೂ ತಿಳಿಯಬೇಕು.
ನಿರಾಕಾರ ಪರಬ್ರಹ್ಮ
ಇನ್ನು ‘ಲಿಂಗ’ದ ಮೂಲಕ ಆರಾಧಿಸಲ್ಪಡುವ ಪರಮೇಶ್ವರ ನಿರಾಕಾರ, ನಿರ್ಗುಣ ಪರಬ್ರಹ್ಮ ವಸ್ತು ಎಂದೆನಿಸಿಕೊಳ್ಳುತ್ತಾನೆ. ಹಾಗಾದಲ್ಲಿ ಈ ನಿರಾಕಾರ ಪರಬ್ರಹ್ಮ ವಸ್ತುವೇ ಐದು ಅವತಾರಗಳನ್ನೆತ್ತಿ ಈ ಸೃಷ್ಟಿ, ಸ್ಥಿತಿ, ವಿನಾಶಕ್ಕೆ ಮೂಲ ಶಕ್ತಿಯಾಗಿ ಕಾಣಬರುತ್ತಾನೆ. ಭೈರವ, ನಟರಾಜ, ದಕ್ಷಿಣಾಮೂರ್ತಿ, ಸೋಮಸ್ಕಾಂತ, ಪಿನಾಕಧರ ಎಂದು ಈ ಐದು ಅವತಾರಗಳಲ್ಲಿ ಮಹಾದೇವ ಅವತಾರವೆತ್ತಿದ ಎಂದೂ ತಿಳಿಯಬಹುದು. ಇದೇ ರೀತಿಯಲ್ಲಿ ಪರಮೇಶ್ವರನನ್ನು ಅನಾದಿ, ಅನಂತ ಎಂದೂ ಅರಾಧಿಸುವುದುಂಟು. ಅನಾದಿ ಎಂದರೆ ಆರಂಭವಿಲ್ಲದ, ಅಂತ್ಯವೇ ಇಲ್ಲದ ಭಗವದ್ ಶಕ್ತಿ ಎಂದರ್ಥ, ಹಾಗೆಯೇ ‘ಅನಂತ’ ಎಂದರೆ ಯಾವುದೇ ರೀತಿಯ ಜನನ-ಮರಣಗಳ ಚಿತ್ರದಲ್ಲಿ ಸಿಲುಕದೆ ಅರ‍್ರಿಮಿತವಾಗಿ ಸದಾ ವಿರಾಜಮಾನನಾಗಿರುವುದೇ ‘ಅನಂತ’ ಎಂದರ್ಥ.
ನೂರಾರು ಹೆಸರು ಶಿವನಿಗೆ
ಇದಲ್ಲದೆ ‘ಪರಮೇಶ್ವರ’ನನ್ನು ‘ಮುಕ್ಕಣ’, ‘ತ್ರಿನೇತ್ರ’ ಎಂತಲೂ ಆರಾಧಿಸಲ್ಪಡುತ್ತಾನೆ. ಕಾರಣ ಈ ಜಗತ್ತಿನ ದುಃಖಕ್ಕೆ ಮೂಲ ಕಾರಣವಾದ ‘ಕಾಮ’, ‘ಆಸೆ’ಗಳನ್ನೇ ಸಂಪೂರ್ಣವಾಗಿ ದಹಿಸಿ ನಿಃಷ್ಕಾಮನಾದ ಈಶ್ವರ ಎಂದು ಭಕ್ತರಿಂದ ಅರ್ಚಿಸಲ್ಪಡುತ್ತಾನೆ. ಇನ್ನು ‘ನೀಲಕಂಠ’ ಎಂದು ಪೂಜಿಸುವನಾದ ಪರಮೇಶ್ವರನು ಇಡೀ ವಿಶ್ವವನ್ನೇ ಸಂಪೂರ್ಣವಾಗಿ ನಾಶಪಡಿಸಬಹುದಾದ ಘೋರಮಯವಾದ ವಿಷ-ಹಾಲಾಹಲ ಸಮುದ್ರ ಮಥನದಿಂದ ಮೇಲೇಳುವಾಗ ಇಡೀ ವಿಶ್ವವೇ ನಾಶವಾಗುವ ಘೋರ ‘ವಿಷ’ ಎಲ್ಲೆಡೆ ಪಸರಿಸುವಾಗ ಬೇರಾವ ದೇವತೆಗಳಿಗೂ ಸಾಧಿಸಲಾಗದ ಈ ಜಗತ್ತನ್ನು ರಕ್ಷಿಸುವುದಕ್ಕೋಸ್ಕರ ಆ ‘ಹಾಲಾಹಲ’ವನ್ನೇ ತನ್ನ ಕಂಠದಲ್ಲಿಟ್ಟು ಜಗದ್ ರಕ್ಷಕನಾದವನೇ ಜಗದೇಕನಿಗೆ ಮತ್ತೊಂದು ಹೆಸರು “ನೀಲಕಂಠ” ಎಂದು ಈ ಸುಂದರಮೂರ್ತಿಗೆ ಮತ್ತೊಂದು ಆಕರ್ಷಣೆ ತರುವಂತಹ ನಾಮವೇ ‘ಚಂದ್ರಶೇಖರ’. ಚಂದ್ರನನ್ನೇ ತನ್ನ ಮುಕುಟದಲ್ಲಿ ಕಿರೀಟಪ್ರಾಯದಂತರಿಸಿಕೊAಡಿರುವವನೇ ಚಂದ್ರಶೇಖರ. ರುದ್ರ-ಶಿವ ಎಂಬೀ ನಾಮಾಂಕಿತಗಳಿಗೆ ಸೋಮ-ರುದ್ರ ಎಂದೂ ಗುರುತಿಸಲ್ಪಡುತ್ತದೆ.
ಇನ್ನು ಪರಮಶಿವನ ಮತ್ತೊಂದು ಅದ್ಭುತವಾದ ರೂಪವೇ ‘ಜಟಾಧಾರಿ’ ಕಪರ್ದಿನ ಎಂದೂ ಕರೆಯಿಸಲ್ಪಡುವ ಪರಮೇಶ್ವರ ಅತ್ಯಂತ ಸುಂದರವಾಗಿ ಭಕ್ತರಿಗೆ ಗೋಚರಿಸುತ್ತಾನೆ. ಇನ್ನು ‘ಗಂಗಾಧರ’ ಎಂದೆನಿಸಿಕೊ0ಡು ಈ ಭೂಮಿಗೆ ಭಾಗೀರಥಿಯನ್ನು ಧರೆಗಿಳಿಸಿದ ‘ಗಂಗಾಧರ’. ಕೋಟ್ಯಾಂತರ ಜೀವರಾಶಿಗಳಿಗೆ ಜೀವನಾಡಿಯಾಗಿ ಹರಿಯುವ ಗಂಗೆ ಪರಮೇಶ್ವರನ ಶಿರದಲ್ಲಿ ರಾರಾಜಿಸುತ್ತಿದ್ದಾಳೆ. ಭಗೀರಥ ದೇವಾನುದೇವತೆಗಳಿಗೆ ಮೊರೆಹೊಕ್ಕಿ ಭೂಮಿಯ ಜೀವರಾಶಿಗಳಿಗೆ ಪುನರ್ಜನ್ಮ ನೀಡುವಂತಹ ಹಾಗೂ ಪರಮಪವಿತ್ರಳಾದ ಗಂಗೆಯನ್ನು ಧರೆಗಿಳಿಸುವ ಪ್ರಯತ್ನದಲ್ಲಿ ಸಫಲನಾಗುತ್ತಾನೆ. ಆದರೆ ಆ ಸ್ವರ್ಗದಿಂದ ಅಮರ್ಥ್ಯದಿಂದ ಮರ್ಥ್ಯಲೋಕಕ್ಕೆ ಗಂಗೆ ಧಾವಿಸುವ ಆ ಸಂದರ್ಭದಲ್ಲಿ ಆ ಮಹಾನ್ ಶಕ್ತಿಯ ರಭಸವನ್ನು ತಡೆಯಲು ಯಾರೂ ಮುಂದೆ ಬರಲಿಲ್ಲವಾದ ಕಾರಣ, ಪರಮೇಶ್ವರನನ್ನೇ ಮೊರೆ ಹೊಕ್ಕಿದಾಗ ದೇವಲೋಕದಿಂದ ಧುಮ್ಮಿಕ್ಕಿ ಬರುತ್ತಿದ್ದ ಗಂಗೆಯನ್ನೂ ತನ್ನ ಶಿರದಲ್ಲಿ ನಿಯಂತ್ರಿಸಿದ ಮಹಾನ್ ಶಕ್ತಿಯೇ ‘ಗಂಗಾಧರ’ ಎಂದೆನಿಸಿಕೊAಡು ಜಗತ್ತಿನಲ್ಲಿ ಆರಾಧಿಸಲ್ಪಡುತ್ತಿದ್ದಾನೆ.
ಇನ್ನು ‘ಭಸ್ಮಧಾರಿ’ ಪರಮೇಶ್ವರ ಎಂದರೆ ವೈರಾಗ್ಯದ ಚಿನ್ಹೆಯೇ ಭಸ್ಮ, ಸ್ಮಶಾನವಾಸಿ, ಎಂದೆಲ್ಲಾ ಕರೆಯಲ್ಪಡುವ ‘ಶಿವ’ ವೈರಾಗ್ಯ ಮೂರ್ತಿಯಾಗಿ ಸಾಧಕರಿಗೆ, ಸಂನ್ಯಾಸಿಗಳಿಗೆ ವೈರಾಗ್ಯ ನೀಡುವಂತಹ ರೂಪ ಧರಿಸಿದವನೇ ಭಸ್ಮಾಂಗ. ವ್ಯಾಘ್ರ ಚರ್ಮದ ಮೇಲೆ ಆಸೀನರಾದವನೇ ಪರಮೇಶ್ವರ ಕಾರಣ – ಬ್ರಹ್ಮಋಷಿಗಳ ಆಸನವೇ ವ್ಯಾಘ್ರ ಚರ್ಮ ಎಂದರೆ ಬ್ರಹ್ಮ ಋಷಿಗಳಿಗೂ ಸಹ ಆರಾಧ್ಯ ಮೂರ್ತಿಯಾಗಿರುವವನೇ ಪರಮೇಶ್ವರ ಎಂದರ್ಥ. ಇನ್ನು ‘ನಂದೀಶ್ವರ’ ಪಶುಪತಿ, ರುದ್ರದೇವನನ್ನು ‘ಪಶುಪತಿ’ ಎಂದೂ ಅರ್ಚಿಸುವುದು ಹಾಗೂ ನಂದಿಯನ್ನು ತನ್ನ ವಾಹನವನ್ನಾಗಿಸಿಕೊಂಡಿರುವವನೇ ಪಶುಪತಿ.
ಶಕ್ತಿಯ ಸ್ವರೂಪವೇ ಪರಮಶಿವ
ಹೀಗೆ ನಾನಾ ರೀತಿಯಲ್ಲಿ ಭಕ್ತರಿಗೆ ಕೃಪೆ ನೀಡುವ ಪರಮೇಶ್ವರನು ಈ ಜಗತ್ತಿನಲ್ಲಿ ಮತ್ತೊಂದು ಅದ್ಭುತ ನಾಮಾಂಕಿತವನ್ನು ಪಡೆದಿದ್ದಾನೆ. ಅದೇ ‘ನಟರಾಜ’ – ಸಂಗೀತ, ಸಾಮ, ಡಮರುಗಳ ಹಿನ್ನೆಲೆಯಲ್ಲಿ ಜಗತ್ತನ್ನು ನಿಬ್ಬೆರಗಾಗಿಸುವ ರೀತಿಯಲ್ಲಿ ನೃತ್ಯಗೈಯ್ಯುವ ನೃತ್ಯ ಮೂರ್ತಿ, ನಟರಾಜ. ನಾಟ್ಯ ಶಾಸ್ತçಗಳ ಪ್ರವೀಣ, ವೇದಪುರುಷ, ಓಂಕಾರೇಶ್ವರ, ನರ್ತನ ಚತುರ ಎಂಬೆಲ್ಲಾ ನಾಮಾಂಕಿತವನ್ನು ಪಡೆದ ಮಹಾನ್ ಶಕ್ತಿಯ ಸ್ವರೂಪವೇ ಪರಮಶಿವ.
‘ಶಿವರಾತ್ರಿ’ ಈ ದಿನದಂದು ಪರಮಶಿವನನ್ನು ಪ್ರಾರ್ಥಿಸುವ, ಆರಾಧಿಸುವ, ಅರ್ಚಿಸುವ ಮಹತ್ತರವಾದ ಸಂದರ್ಭ. ಹಾಗಾಗಿ ನಾವು ಪೂಜೆಗೈಯ್ಯುವ ದೈವಶಕ್ತಿಯ ಬಗ್ಗೆ ತಿಳಿದಿದ್ದೂ ನಮ್ಮ ಹೃದಯಾಂತರ್ಯದಲ್ಲಿ ಭಕ್ತಿಯು ಇಮ್ಮಡಿ, ಮುಮ್ಮಡಿಯಾಗುತ್ತದೆ. ಈ ಕಾರಣದಿಂದಲೇ ಈ ಲೇಖನ ರಚಿಸಿರುವುದು. ನಾವು ಕೇವಲ ‘ಶಿವ’ ‘ಈಶ್ವರ’ ಎಂದೆಲ್ಲಾ ನಾಮಾಂಕಿತದಿAದ ಪೂಜಿಸುವ ಬದಲು ಈ ಮಹಾನ್ ಶಕ್ತಿಯ ನಾಮಾಂಕಿತಗಳ ಹಿನ್ನೆಲೆಯ ಅರ್ಥ ಮತ್ತು ಅವುಗಳ ಹಿಂದೆ ಇರುವ ಮಹಾನ್ ತತ್ತ÷್ವಗಳನ್ನು ಅರಿತಾಗ ನಮ್ಮ ಭಕ್ತಿ ಮತ್ತೂ ವೃದ್ಧಿಯಾಗುತ್ತದೆ. ನಾವು ಆರಾಧಿಸುವ ಆ ಭಗವದ್ ಶಕ್ತಿಯ ಪಾರವಿಲ್ಲದ, ಮಿತಿಯಿಲ್ಲದ ಶಕ್ತಿಯನ್ನು ಅರಿತಾಗ ಖಂಡಿತಾ ನಮ್ಮ ಪೂಜೆ, ಅರ್ಚನೆ ಕೇವಲ ಯಾಂತ್ರಿಕ ರೀತಿಯಲ್ಲಿ ಸಾಗದೇ ಭಗವದ್ ಭಕ್ತಿ, ಶ್ರದ್ಧೆ, ನಿಷ್ಠೆಯಿಂದ ಸಾಗುತ್ತದೆ. ಜೊತೆಯಲ್ಲಿ ಪರಬ್ರಹ್ಮ ವಸ್ತುವಿನ ನಾನಾ ಆಯಾಮಗಳ ಪರಿಚಯ ನಮಗಾಗುವುದರಲ್ಲಿ ಸಂದೇಹವಿಲ್ಲ. ಕೇವಲ ಯಾಂತ್ರಿಕತೆಯ ಹಿನ್ನೆಲೆಯಿಂದ ಆರಾಧಿಸುವ ಬದಲು ಆಂತರ್ಯದಲ್ಲಿ ಪರಮೇಶ್ವರನನ್ನು ಧ್ಯಾನಿಸಿ, ಭಜಿಸಿ, ಆರಾಧಿಸಿದರೆ ಮಾತ್ರ ನಿಜವಾದ ಅರ್ಥದಲ್ಲಿ ಮಹಾಶಿವರಾತ್ರಿ ಆಚರಿಸಿದಂತೆಯೇ ಸರಿ.
ಸ್ವಾಮಿ ಜಪಾನಂದ ಅವರು
ಅಧ್ಯಕ್ಷರು, ಶ್ರೀರಾಮಕೃಷ್ಣ ಸೇವಾಶ್ರಮ,
ಪಾವಗಡ, ತುಮಕೂರು ಜಿಲ್ಲೆ