ಶಿವನು ಅತ್ಯಂತ ಸರಳ ಮನುಷ್ಯ. ಸರಳ ಪೂಜೆಯ ಮೂಲಕ ಆತನನ್ನು ಮೆಚ್ಚಿಸಬಹುದು. ನಾಳೆ ಶುಭ ಸೋಮವಾರ. ಸೋಮವಾರ ಶಿವನನ್ನು ಪೂಜಿಸುವ ವಿಶೇಷ ದಿನ. ಸೋಮವಾರದಂದು ಹೆಚ್ಚಿನ ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ, ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಸೋಮವಾರ ಸರಳವಾಗಿ ಶಿವ ಪೂಜೆಯನ್ನು ಮಾಡುವುದು ಹೇಗೆ..? ಸೋಮವಾರ ಶಿವ ಪೂಜೆ ಮಾಡುವುದರಿಂದಾಗುವ ಪ್ರಯೋಜನವೇನು..? ಆರೋಗ್ಯದ ಸಮಸ್ಯೆಗಳ ನಿವಾರಣೆಗೆ, ಶನಿ ದೋಷ ನಿವಾರಣೆಗೆ ಹಾಗೂ ವೈವಾಹಿಕ ಸಮಸ್ಯೆಗಳ ನಿವಾರಣೆಗೆ ಸೋಮವಾರದ ಶಿವ ಪೂಜಾ ವಿಧಾನ ಇಲ್ಲಿದೆ.
ಶಿವನ ಪೂಜೆ ತಯಾರಿ:
1) ಹೆಚ್ಚಿನ ಭಕ್ತರು ಸೋಮವಾರದಂದು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಆದರೆ ನೀವು ಗಮನದಲ್ಲಿಡಬೇಕಾದ ಒಂದು ವಿಷಯವೆಂದರೆ. ಒಮ್ಮೆ ಸೋಮವಾರದ ಉಪವಾಸ ವ್ರತವನ್ನು ಕೈಗೊಂಡರೆ ಈ ವ್ರತವನ್ನು 16 ಸೋಮವಾರಗಳವರೆಗೆ ಮುಂದುವರೆಸಿಬೇಕು.
2) ಉಪವಾಸವನ್ನು ಆಚರಿಸುವವರು ಪ್ರತೀ ಸೋಮವಾರ ಮುಂಜಾನೆ ಬೇಗ ಎದ್ದು, ಸ್ನಾನ ಮಾಡಬೇಕು.
3) ಸ್ನಾನದ ನಂತರ ಶುದ್ಧರಾಗಿ ದೇವರ ಕೋಣೆಯನ್ನು ಅಥವಾ ದೇವರನ್ನು ಪೂಜಿಸುವ ಸ್ಥಳವನ್ನು ಸ್ವಚ್ಛಗೊಳಿಸಬೇಕು.
4) ದೇವರ ಕೋಣೆಯನ್ನು ಶುದ್ಧಗೊಳಿಸಿದ ನಂತರ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ.
5) ಚಂದನ ಮತ್ತು ವಿವಿಧ ಬಗೆಯ ಹೂವುಗಳನ್ನು ಬಳಸಿಕೊಂಡು ಶಿವ ಲಿಂಗವನ್ನು ಅಥವಾ ಶಿವನ ಫೋಟೋವನ್ನು ಅಲಂಕರಿಸಬೇಕು.
6) ಶಿವನಿಗೆ ಹೂವುಗಳನ್ನು ಅರ್ಪಿಸುವಾಗ ತಪ್ಪದೇ ‘ ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸುತ್ತಿರಬೇಕು.
7) ಶಿವನ ಪೂಜೆಯನ್ನು ಮುಕ್ತಾಯಗೊಳಿಸುವ ಮುನ್ನ, ಶಿವನಿಗೆ ನೀವು ವೀಳ್ಯದೆಲೆಯನ್ನು, ತೆಂಗಿನ ಕಾಯಿಯನ್ನು, ತಾಜಾ ಹಣ್ಣುಗಳನ್ನು ಮತ್ತು ಸಿಹಿ ಖಾದ್ಯವನ್ನು ಅರ್ಪಿಸಬೇಕು.
8) ಶಿವನಿಗೆ ಅರ್ಪಿಸುವ ಖಾದ್ಯ ಯಾವಾಗಲು ಅಸ್ಪೃಶ್ಯವಾಗಿರಬೇಕು. ಶಿವನಿಗೆ ನೀಡುವ ನೈವೇದ್ಯವನ್ನು ನೀವು ಸ್ನಾನ ಮಾಡಿದ ನಂತರವೇ ತಯಾರಿಸಬೇಕು. ಶಿವನಿಗೆ ಅದನ್ನು ಅರ್ಪಿಸದೇ ಎಂಜಲು ಮಾಡಬಾರದು.
ಪೂಜಾ ವಿಧಾನ
ಪೂಜೆಗೆ ಬೇಕಾಗುವ ಸಾಮಾಗ್ರಿಗಳು ಮತ್ತು ಪೂಜೆ ಮಾಡುವ ವಿಧಾನ:ಒಂದು ವೇಳೆ ನಿಮಗೆ ಸೋಮವಾರದಂದು ಉಪವಾಸ ವ್ರತ ಮಾಡಲು ಸಾಧ್ಯವಾಗದಿದ್ದರೆ ನೀವು ಶಿವನಿಗೆ ಪ್ರಾರ್ಥನೆಯನ್ನು ಸಲ್ಲಿಸಬಹುದು. ಹೀಗೆ ಮಾಡುವುದಾದರೆ ಕಾರ್ಯವಿಧಾನಗಳು ಸ್ವಲ್ಪ ಭಿನ್ನವಾಗಿದೆ.
1) ಶಿವನನ್ನು ಪ್ರಾರ್ಥಿಸಲು ಶಿವಲಿಂಗ, ಹಾಲು, ಜೇನುತುಪ್ಪ, ನೀರು, ಮೊಸರು, ತುಪ್ಪ, ಸಕ್ಕರೆ, ಬಿಲ್ವ ಪತ್ರೆ, ಚಂದನ, ಹೂವುಗಳು, ವಿಭೂತಿ, ಎಣ್ಣೆ, ದೀಪ ಮತ್ತು ಧೂಪ ದ್ರವ್ಯಗಳು ಅವಶ್ಯಕವಾಗಿರುತ್ತದೆ.
2) ಶಿವ ಪ್ರಾರ್ಥನೆಯನ್ನು ಆರಂಭಿಸುವ ಮೊದಲು ನಾವು ನಮ್ಮನ್ನು ಸಂಪೂರ್ಣವಾಗಿ ಶುದ್ಧೀಕರಿಸಿಕೊಳ್ಳಬೇಕು.
3) ಶಿವನಿಗೆ ಪ್ರಾರ್ಥನೆಯನ್ನು ಸಲ್ಲಿಸುವಾಗ ಶಿವ ಬೀಜ ಮಂತ್ರವನ್ನು, ಮಹಾ ಮೃತ್ಯುಂಜಯ ಮಂತ್ರವನ್ನು ಸೇರಿದಂತೆ ಶಿವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬೇಕು.
4) ಶಿವನ ಪೂಜೆಯಲ್ಲಿ ಮೊದಲು ದೀಪ, ಧೂಪವನ್ನು ಹಚ್ಚಬೇಕು.
5) ನಂತರ ಶಿವ ಲಿಂಗವನ್ನು ಅಥವಾ ಶಿವನ ಫೋಟೋವನ್ನು ಹೂವುಗಳಿಂದ ಅಲಂಕರಿಸಿ, ತಾಜಾ ಹಣ್ಣುಗಳನ್ನು ಅರ್ಪಿಸಿ.
6) ಮಂತ್ರದೊಂದಿಗೆ ಶಿವನ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತಾಭಿಷೇಕ ಮಾಡಿ.
7) ಅಂತಿಮವಾಗಿ ಕುಟುಂಬದ ಸರ್ವ ಸದಸ್ಯರಿಗೂ ಪಂಚಾಮೃತವನ್ನು ಪ್ರಸಾದವಾಗಿ ವಿತರಿಸಿ.
ಪೂಜೆಯಿಂದಾಗುವ ಪರಿಣಾಮ
1) ಸೋಮವಾರದ ಶಿವ ಪೂಜೆಯಿಂದ ಶಿವನು ನಕಾರಾತ್ಮಕತೆಯನ್ನು ದೂರಾಗಿಸುತ್ತಾನೆ. ಮತ್ತು ಶನಿಯಿಂದಾಗುವ ಸಮಸ್ಯೆಗಳನ್ನು ದೂರಾಗಿಸುತ್ತಾನೆ.
2) ಉತ್ತಮ ಆರೋಗ್ಯಕ್ಕಾಗಿ ಸೋಮವಾರ ಶಿವನ ಪೂಜೆಯನ್ನು ಮಾಡಬೇಕು. ಈ ಪೂಜೆಯಿಂದ ಆರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ.
3) ನಾವು ನಮ್ಮ ವೃತ್ತಿ ಜೀವನದಲ್ಲಿ ಸರಳವಾಗಿ ಮುನ್ನಡೆಯನ್ನು ಸಾಧಿಸಬಹುದು.
4) ಅವಿವಾಹಿತ ಮಹಿಳೆಯರು 16 ಸೋಮವಾರ ಉಪವಾಸವನ್ನು ಮಾಡುವುದರಿಂದ ನಿಮ್ಮ ಇಚ್ಛೆಯ ವರನನ್ನು ಪಡೆಯಬಹುದು.
5) ಎಲ್ಲಾ ಕಾರ್ಯಗಳಲ್ಲೂ ಬೆಂಬಲ ಮತ್ತು ಶಕ್ತಿಯನ್ನು ನೀಡುವನು. ಹಾಗೂ ಜಗತ್ತನ್ನು ಎದುರಿಸಲು ಧೈರ್ಯವನ್ನು ನೀಡುವನು.
6) ನಿಯಮಿತವಾಗಿ ಸೋಮವಾರ ಶಿವನನ್ನು ಪೂಜಿಸುವುದರಿಂದ ಮರಣಾ ನಂತರ ಮೋಕ್ಷವನ್ನು ಪಡೆಯಬಹುದು.
7) ವೈವಾಹಿಕ ಸಮಸ್ಯೆಗಳಿಂದ ಹೊರಬರಲು ಸೋಮವಾರದಂದು ತಪ್ಪದೇ ಶಿವ ಪೂಜೆಯನ್ನು ಮಾಡಬೇಕು.
8) ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಸೋಮವಾರ ಶಿವನನ್ನು ಪೂಜಿಸಬೇಕು.
ಸೋಮವಾರ ಶಿವನ ಪೂಜೆಯನ್ನು ಮಾಡುವುದರಿಂದ ನಾವು ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಶಿವನ ಪೂಜೆಯಿಂದ ಜೀವನದಲ್ಲಿ ಮೋಕ್ಷವನ್ನು ಪಡೆಯಬಹುದು. ಸೋಮವಾರದಂದು ಅವಿವಾಹಿತ ಮಹಿಳೆಯರು ಶಿವನ ಪೂಜೆ ಮಾಡಿದರೆ ನಿರ್ವಿಘ್ನವಾಗಿ ಅವರ ವಿವಾಹವಾಗುವುದು.
ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು