ಶ್ರೀ ರಾಘವೇಂದ್ರ ಸ್ವಾಮಿಗಳವರು ಸನ್ಯಾಸಾಶ್ರಮವನ್ನು ಸ್ವೀಕರಿಸಿ- ಪಟ್ಟಾಭಿಷೇಕವಾದದ್ದು, ಈ ದಿನ ಮಾರ್ಚ್ 15 ರಂದು 400 ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ರಾಯರ ಬೃಂದಾವನಕ್ಕೆ “ಸಹಸ್ರ ಕಳಸ” ಕ್ಷೀರಾಭಿಷೇಕ ನೆರವೇರಿಸಲಾಯಿತು.
ನಂತರ ವಿಶೇಷವಾಗಿ “ಸ್ವರ್ಣ ಸಿಂಹಾಸನ” ಮಧ್ಯದಲ್ಲಿ ಶ್ರೀ ರಾಯರ ಪಾದುಕೆಗಳಿಗೆ ಪುಷ್ಪ ವೃಷ್ಟಿಯಿಂದ “ಪಟ್ಟಾಭಿಷೇಕ” ಮಹೋತ್ಸವವು ಭಕ್ತರ ಸಹಕಾರದೊಂದಿಗೆ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಹಾಗೂ ಧರ್ಮಾಧಿಕಾರಿಗಳಾದ ಜಿ.ಕೆ.ಆಚಾರ್ಯರು ನೆರವೇರಿಸಿದರು. ತದನಂತರ “ಟೀಕಾಚಾರ್ಯರ” ತೈಲವರ್ಣದ ಭಾವಚಿತ್ರವನ್ನು ಅನಾವರಣಗೊಳಿಸಿ ಗಜವಾಹನ ಉತ್ಸವ ರಥೋತ್ಸವ ಕನಕಾಭಿಷೇಕ ಮಹಾಮಂಗಳಾರತಿಯೊಂದಿಗೆ ಅನ್ನದಾನ ನೆರವೇರಿತು.
ಸಂಜೆ -5-30 ರಿಂದ ಪ್ರವಚನ, ಶ್ರೀ ಹರಿಭಜನೆ ಹಾಗೂ ಕುಮಾರಿ ದಿವ್ಯಶ್ರೀ ರಂಗನಾಥ್ ವೃಂದದಿಂದ “ಸ್ಯಾಕ್ಸೋಫೋನ್ ವಾದನದೊಂದಿಗೆ ಶ್ರೀರಾಯರ 400ನೇ ಪಟ್ಟಾಭಿಷೇಕ ಮಹೋತ್ಸವದ ಕಾರ್ಯಕ್ರಮವು ವಿಶೇಷವಾಗಿ ಜರಗಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು ಎಂದು ಪ್ರಧಾನ ಪುರೋಹಿತರಾದ ಕಿಶೋರ್ ಆಚಾರ್ಯರು ತಿಳಿಸಿದರು