ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಆರಾಧನೆ, ಸಾಧಕರಿಗೆ ಸನ್ಮಾನ

ಮೈಸೂರಿನಲ್ಲಿ ನ್ಯಾಯಾಮೃತಂ ಕಲ್ಚರಲ್ ಹೆರಿಟೇಜ್ ಮತ್ತು ಎಜುಕೇಷನಲ್ ಫೌಂಡೇಶನ್ (ರಿ) ಟ್ರಸ್ಟ್
ವತಿಯಿಂದ ಮಾ 31, ಏ.1 , 2 ರಂದು ಶ್ರೀ ವ್ಯಾಸರಾಜ ಗುರುಸಾರ್ವಭೌಮರ 482 ನೇ ಆರಾಧನಾ ಮಹೋತ್ಸವವನ್ನು ಮೈಸೂರಿನ ಶ್ರೀನಗರ ಬಡಾವಣೆಯ ಶ್ರೀನಗರ ಕ್ಷೇಮಾಭಿವೃದ್ಧಿ ಸಂಘದ ಹತ್ತಿರದಲ್ಲಿ ಆಯೋಜಿಸಿದೆ.

ಶ್ರೀ ವಿದ್ಯಾಮನೋಹರ ತೀರ್ಥರು ಶ್ರೀ ವಿದ್ಯಾಸಿಂಧು ಮಾಧವತೀರ್ಥರು

ಶ್ರೀ ಶ್ರೀ ವಿದ್ಯಾಮನೋಹರ ತೀರ್ಥರು ಶ್ರೀ ವ್ಯಾಸರಾಜ ಮಠ (ಸೋಸಲೆ) ಹಾಗೂ ತಂಬಿಹಳ್ಳಿ ಶ್ರೀ ಮಾಧವತೀರ್ಥರ ಶ್ರೀಮಠದ ಶ್ರೀ ವಿದ್ಯಾಸಿಂಧು ಮಾಧವತೀರ್ಥರ ಉಪಸ್ಥಿತಿಯಲ್ಲಿ ಪೂಜಾ ಕೈಂಕರ್ಯಗಳು, ಪಂಡಿತರ ಪ್ರವಚನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮಾ. 31ರಂದು ಶ್ರೀ ವ್ಯಾಸರಾಜರ ಮೂಲ ಮೃತ್ತಿಕಾ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ. ನಂತರ 10 ಗಂಟೆಗೆ ಮಂತ್ರಾಲಯ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ ಅವರಿಂದ ಕಾರ್ಯಕ್ರಮದ ಉದ್ಘಾಟನೆ. ಮೈಸೂರಿನ ವಿದ್ವಾಂಸ ಪ್ರಭಂಜನ ಭಾರದ್ವಾಜ್ ಅವರಿಂದ ಪ್ರವಚನ.

ಪ್ರಭಂಜನ ಭಾರದ್ವಾಜ್ ಬಿ.ಆರ್. ಶ್ರೀನಿಧಿ ಆಚಾರ್ಯ
ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ‘ಧರ್ಮ ಪ್ರಚಾರಕ ಪಯೋನಿಧಿ’ ಪ್ರಶಸ್ತಿ ಪ್ರದಾನ. ಸಂಜೆ 5.30 ಕ್ಕೆ ವಿದ್ವಾನ್ ಬಿ.ಆರ್. ಶ್ರೀನಿಧಿ ಆಚಾರ್ಯರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ಮತ್ತು ‘ಸಂಗೀತ ಪ್ರಸನ್ನ’ ಪ್ರಶಸ್ತಿ ಪ್ರದಾನ.

ಮಧ್ಯಾರಾಧನೆ ಕಾರ್ಯಕ್ರಮ

ಏ.1 ರಂದು ಬೆಳಗ್ಗೆ ಶ್ರೀ ವ್ಯಾಸರಾಜ ಮೂಲ ಮೃತ್ತಿಕಾ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ ಸಂಜೆ 5.30ಕ್ಕೆ ಸಭಾ ಕಾರ‍್ಯಕ್ರಮದಲ್ಲಿ ಪ್ರವಚನ ವಿದ್ವಾನ್ ಶ್ರೀ ಸತ್ಯನಾರಾಣಾಚಾರ್ಯರು, ಬಳ್ಳಾರಿ, ‘ಶ್ರೀ ವ್ಯಾಸರಾಜರ ಅವತಾರ ಮಹಿಮೆ’ ಮಧ್ವ ವೇದಾಂತ ವಾರಿಧಿ’ ಪ್ರಶಸ್ತಿ ಪ್ರದಾನ.

ಕಲ್ಲಾಪುರ ಪವಮಾನಾಚಾರ್ಯ ಸತ್ಯನಾರಾಣಾಚಾರ್ಯ

ವಿದ್ವಾನ್ ಶ್ರೀಕಲ್ಲಾಪುರ ಪವಮಾನಾಚಾರ್ಯರಿಂದ ‘ಶ್ರೀವ್ಯಾಸರಾಜರ ವೈಭವ’ ಕುರಿತು ಪ್ರವಚನ, ನಂತರ ಅವರಿಗೆ ‘ವ್ಯಾಸ ದಾಸ ಪ್ರವಚನ ರತ್ನಾಕರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿರುತ್ತಾರೆ.
ವಿವರಗಳಿಗೆ: 9242013392 .

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles