ಜೀವನ ಚೈತ್ರದ ಸಂಭ್ರಮ ಯುಗಾದಿಹಬ್ಬ

*ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಯುಗಾದಿ ಮತ್ತೊಮ್ಮೆ ಬಂದಿದೆ… ಶಾಲಿವಾಹನ ಗತಶಕ 1938, ದುರ್ಮುಖಿ ನಾಮ ಸಂವತ್ಸರ, ಚೈತ್ರ ಶುಕ್ಲ ಪಕ್ಷ, ಪಾಡ್ಯ ನೂತನ ಸಂವತ್ಸರದ ಮೊದಲ ದಿನ ಯುಗಾದಿ. ಪ್ರತಿ ವರುಷ ಚೈತ್ರ ಮಾಸ, ಶುಕ್ಲಪಕ್ಷದ ಪಾಡ್ಯದ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ವಸಂತ ಋತು ಆರಂಭವಾಗುವುದು ಇದೇ ದಿನ.

ಹಿಂದು ಹಬ್ಬಗಳಲ್ಲಿ ಬಹುಮುಖ್ಯವಾದವುಗಳಲ್ಲಿ ಯುಗಾದಿಯೂ ಒಂದು. ಏಕೆಂದರೆ ಆ ದಿನ ಹಿಂದುಗಳಿಗೆ ಹೊಸ ವರ್ಷದ ಆರಂಭದ ದಿನವಾಗಿದೆ. ಯುಗಾದಿಯು ಕೃತಯುಗದ ಚೈತ್ರ ಶುದ್ಧ ಪಾಡ್ಯದಂದು ಪ್ರಾರಂಭವಾಯಿತು. ಬ್ರಹ್ಮದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆ0ಬ ಪ್ರತೀತಿ ಇದೆ ಹಾಗೂ ವರ್ಷ ಋತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳನ್ನು ಸೃಷ್ಟಿಸಿದನೆಂದು ನಂಬಿಕೆಯೂ ಸಹ ಇದೆ. ಯುಗಾದಿ ಎಂಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ.

ಯುಗಾದಿಯಲ್ಲಿ ಎರಡು ವಿಧ.
1. ಚಾಂದ್ರಮಾನ ಯುಗಾದಿ: ಅಂದರೆ ಹುಣ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಮಾಸ ಆರಂಭವಾಗುತ್ತದೆ. ಉದಾಹರಣೆಗೆ ಚಿತ್ತ ನಕ್ಷತ್ರ, ಚೈತ್ರ ಮಾಸ, ವಿಶಾಖ ನಕ್ಷತ್ರಗಳ ಹೆಸರಿನಿಂದ ಕರೆಯುತ್ತಾರೆ. ಎಲ್ಲವೂ ಚಂದ್ರಗ್ರಹದಿ0ದ ನಿರ್ಧಾರ ಮಾಡುವುದರಿಂದ ಇದಕ್ಕೆ ಚಂದ್ರಮಾನ ಯುಗಾದಿ ಎನ್ನುತ್ತಾರೆ ಹಾಗೂ ಚಾಂದ್ರಮಾನ ಅನುಸಾರವಾಗಿ ಪಂಚಾ0ಗವನ್ನು ಮಾಡುತ್ತಾರೆ. ಈ ಚಾಂದ್ರಮಾನ ಯುಗಾದಿ ಕರ್ನಾಟಕ ಮತ್ತು ಮಹಾರಾಷ್ಟçದಲ್ಲಿ ಹೆಚ್ಚು ಬಳಕೆಯಲ್ಲಿದೆ.
೨. ಸೌರಮಾನ ಯುಗಾದಿ: ಅಂದರೆ ಸೌರಮಾನ ಯುಗಾದಿ ಎಂದರೆ ರವಿಗ್ರಹವು ಒಂದು ಕ್ರಾಂತಿಯಿ0ದ ಮತ್ತೊಂದು ರಾಶಿಯ ಕ್ರಾಂತಿಯವರೆಗೆ ಭ್ರಮಣ ಮಾಡಲು ಹತ್ತುವ ಕಾಲಕ್ಕೆ ಒಂದು ಮಾನ ಎನ್ನುವರು. ಅಂದರೆ ರವಿಯು ಅಮಾವಾಸ್ಯೆ ದಿನ ಮೇಷರಾಶಿಯಲ್ಲಿದ್ದರೆ ಆ ಮಾಸವನ್ನು ಚೈತ್ರಮಾಸ ಎನ್ನುವರು. ಹೀಗೆ ಹನ್ನೆರಡು ಮಾಸಗಳು ಬರುತ್ತವೆ. ಎಲ್ಲವೂ ರವಿಗ್ರಹದಿಂದ ಲೆಕ್ಕಾಚಾರ ಮಾಡುವುದು. ಚಾಂದ್ರಮಾನ ಯುಗಾದಿಗೂ, ಸೌರಮಾನ ಯುಗಾದಿಗೂ ಸುಮಾರು 15 ದಿನಗಳ ಅಂತರ ಇರುತ್ತದೆ. ಈ ಸೌರಮಾನ ಯುಗಾದಿಯು ಹೆಚ್ಚಾಗಿ ಚೆನ್ನೆöÊ ಮತ್ತು ಕೋಲ್ಕೊತ್ತಾದಲ್ಲಿ ಬಳಕೆಯಲ್ಲಿದೆ.

ಹಬ್ಬದ ಮಹತ್ವ


ಈ ಯುಗಾದಿ ಹಬ್ಬದಲ್ಲಿ ಒಂದು ವಿಶೇಷತೆ ಇದೆ. ಸಿಹಿಯಾದ ಬೆಲ್ಲ ಮತ್ತು ಕಹಿಯಾದ ಬೇವು. ಇವುಗಳ ಮಿಶ್ರಣವನ್ನು ಆ ದಿನ ಸೇವಿಸುತ್ತೇವೆ. ಇದರಲ್ಲಿ ಸಿಹಿಯನ್ನು ಸುಖಕರ ಎಂದು ಕಹಿಯನ್ನು ದುಃಖಕರ ಎಂದು ಹೇಳುವರು. ಹೆಚ್ಚಾಗಿ ಸಿಹಿಯನ್ನು ಅಪೇಕ್ಷಿಸುವವರು ಕಹಿಯನ್ನು ಅಪೇಕ್ಷಿಸುವುದು ಕಮ್ಮಿ. ಅಂದರೆ ನಮ್ಮ ಜೀವನದಲ್ಲಿ ಯಾವಾಗಲೂ ಸುಖ ಇರಲಿ, ಎಂದೂ ದುಃಖವು ಬರದಿರಲಿ ಎಂಬ ಆಶಯ. ಆದರೂ ಯುಗಾದಿ ದಿನ ಬೇವು ಬೆಲ್ಲದ ಮಿಶ್ರಣವನ್ನು ಸೇವಿಸುವ ಪದ್ಧತಿ ಹಿಂದಿನಿ0ದಲೂ ಬಂದಿದೆ. ಪ್ರಪಂಚವೂ ಸಹ ಆನಂದ ಎಂಬ ಸಿಹಿಯಿಂದಲೂ, ದುಃಖ ಎಂಬ ಕಹಿಯಿಂದಲೂ ಕೂಡಿರುತ್ತದೆ. ಈ ಸುಖ ದುಃಖಕರವಾದ ಪ್ರಪಂಚವೂ ಆಸ್ತಿ, ಭ್ರಾಂತಿ, ಪ್ರಿಯನಾಮ ರೂಪಿ ಎಂಬ 5 ಅಂಶಗಳಿ0ದ ಕೂಡಿದೆ. ಇದರಲ್ಲಿ ಅಸ್ಥಿ, ಭ್ರಾಂತಿ ಮತ್ತು ಪ್ರಿಯ ಪರಮಾತ್ಮನ ಅಂಶವಾಗಿದೆ. ಉಳಿದ ಎರಡು ನಾಮ ಮತ್ತು ರೂಪಗಳು ಮಾಯೆಯ ಅಂಶವಾಗಿದೆ. ಅಂದರೆ ಈ ಪ್ರಪಂಚವೂ ಮಾಯೆ ಮತ್ತು ರೂಪಗಳಿಂದ ಕೂಡಿದೆ ಎಂದು ಆಯಿತು. ನಾಮ ರೂಪಿಗಳು ಅನಿತ್ಯ ಎಂದು ಹೇಳಬಹುದು. ಈ ಪರಮಾತ್ಮನು ಸತ್ಯನು, ನಿತ್ಯನೂ ಆಗಿರುವನು.
ಅಸತ್ಯಗಳಾದ ನಾಮ ರೂಪಗಳೇ ದುಃಖಕರವಾಗಿದೆ. ಸುಖ ದುಃಖಗಳಿಂದ ಕೂಡಿದೆ ಅಂದರೆ ಸಿಹಿ ಮತ್ತು ಕಹಿ ಮಿಶ್ರಣದಿಂದ ಈ ಪ್ರಪಂಚ ಆಗಿದೆ. ನಾವು ಬೇವು ಬೆಲ್ಲವನ್ನು ಒಟ್ಟಿಗೆ ಸೇವಿಸುವಾಗ ಬೆಲ್ಲದ ಸಿಹಿಯ ಕಡೆಗೆ ಗಮನವನ್ನು ಕೊಟ್ಟರೆ ಆಗ ಬೇವಿನ ಕಹಿಯು ನಮಗೆ ಗೊತ್ತಾಗುವುದಿಲ್ಲ. ಆಗ ನಮಗೆ ಸಿಹಿಯೊಂದೇ ತೋರುವುದು. ಅದೇ ರೀತಿ ಬೇವಿನ ಕಡೆಗೆ ಸಿಹಿಯ ಅಂಶವು ಮರೆಯಾಗಿ ಬರೀ ಸುಖವನ್ನು ಅನುಭವಿಸಬೇಕು. ಕಷ್ಟವು ಬೇಡವೆಂದು ಹೇಳಿದರೆ ಅದು ಆಗುವುದಿಲ್ಲ. ಎರಡನ್ನೂ ಸಮವಾಗಿ ಸ್ವೀಕರಿಸಬೇಕು. ಒಂದು ಸಮಯದಲ್ಲಿ ಸುಖ ಬಂದಾಗ ಇನ್ನೊಂದು ಸಮಯದಲ್ಲಿ ದುಃಖ ಬರುವುದು. ಆದ್ದರಿಂದ ಈ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ.

ಬ್ರಹ್ಮಸೃಷ್ಟಿ ದಿನವಿದು: ಪುರಾಣಗಳು ಪ್ರತಿಪಾದಿಸುವಂತೆ, ಮಹಾ ಜಲಪ್ರಳಯದ ನಂತರ ಬ್ರಹ್ಮದೇವ ಯುಗಾದಿಯಂದೇ ಲೋಕದ ಸೃಷ್ಟಿಕಾರ್ಯ ಮೊದಲ ಕಿರಣವನ್ನು ಭೂಮಿಗೆ ಹರಿಸಿದ ಎಂಬ ಮಾತೂ ಇದೆ. ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮ, ರಾವಣನನ್ನು ಸೋಲಿಸಿ, ಅಯೋಧ್ಯೆಗೆ ಮರಳಿ, ಯುಗಾದಿಯ ದಿನದಂದೇ ಪುನಃ ರಾಜ್ಯಭಾರ ಆರಂಭಿಸಿದ ಎಂಬ ಹೇಳಿಕೆಯೂ ಇದೆ. ಅದೇ ರೀತಿ ಮಹಾವಿಷ್ಣು ಮತ್ಸಾö್ಯವತಾರ ತಾಳಿದ್ದು ಇದೇ ದಿನ. ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ, ಶಾಲಿವಾಹನ ಶಕೆಯನ್ನು ಇಂದೇ ಆರಂಭಿಸಿದ ಎನ್ನುತ್ತವೆ ಚರಿತ್ರೆ.

ಪಂಚಾಂಗ ಶ್ರವಣ, ರಾಶಿಫಲದ ಹೂರಣ: ಹಬ್ಬದ ದಿನ ಮನೆಯನ್ನು ಸ್ವಚ್ಛಗೊಳಿಸಿ ತಳಿರು-ತೋರಣ ಕಟ್ಟಿ ಮನೆಯ ಮುಂದಿನ ಅಂಗಳದಲ್ಲಿ ರಂಗೋಲಿ ಹಾಕಲಾಗುತ್ತದೆ. ಮುಂಜಾನೆಯೇ ಅಭ್ಯಂಜನ ಸ್ನಾನ ಮಾಡಿ, ಪುಣ್ಯಾಹ, ಮಂತ್ರಗಳನ್ನು ಉಚ್ಛರಿಸಿ, ಮಾವಿನ ಎಲೆಯಿಂದ ಕಳಸದ ನೀರನ್ನು ಎಲ್ಲಾ ಕಡೆ ಸಿಂಪಡಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಈ ದಿನ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಸೂರ್ಯ ನಮಸ್ಕಾರ, ನೂತನ ಪಂಚಾಂಗ ಶ್ರವಣ, ಬೇವು-ಬೆಲ್ಲ ಹಂಚುವುದು, ಹಬ್ಬದ ಸಂಪ್ರದಾಯಕ ಆಚರಣೆಗಳಲ್ಲಿ ಪ್ರಮುಖ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನೂತನ ಪಂಚಾಂಗ ಶ್ರವಣ, ಹಬ್ಬದ ಆಚರಣೆಯ ಆಕರ್ಷಣೆ.

ಯುಗಾದಿ ಹಬ್ಬದ ದಿನ ಕೆಳಗಿನ ಶ್ಲೋಕವನ್ನು ಹೇಳಿಕೊಂಡು ಬೇವು ಬೆಲ್ಲವನ್ನು ಸ್ವೀಕರಿಸಬೇಕು.
ಶತಾಯುರ್ವಜ್ರ ದೇಹಾಯ, ಸರ್ವ ಸಂಪತ್ಕರಾಯ ಚ
ಸರ್ವಾರಿಷ್ಟ ವಿನಾಶಾಯ ನಿಂಬಕ0 ದಳ ಭಕ್ಷಣಂ ||
ನೂರು ವರ್ಷ ಪೂರ್ತಿ ಆಯಸ್ಸು ಸಮೃದ್ಧಿ ಆರೋಗ್ಯ ಸಕಲ ಸಂಪತ್ತುಗಳು ಪ್ರಾಪ್ತಿಗಾಗಿಯೂ ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇವೆ.

ಕಷ್ಟ-ಸುಖಗಳ ಸಮ್ಮಿಲನ
ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆಂದು ವಾಗ್ದಾನ ಮಾಡುವುದೇ ಹಬ್ಬದ ವಿಶೇಷ.
ನೂರು ವರ್ಷಗಳ ಕಾಲ ಆಯುಷ್ಯ, ಸದೃಢ ಆರೋಗ್ಯ, ಸಂಪತ್ತು ಪ್ರಾಪ್ತಿ. ಸಂಕಷ್ಟಗಳ ನಿವಾರಣೆಗಾಗಿಯೂ ಬೇವು-ಬೆಲ್ಲ ಸವಿಯುವ ಸುದಿನ. ನಿಜವಾಗಿಯೂ ಬೇವಿನಲ್ಲಿರುವ ಶಕ್ತಿ ಬೆಲ್ಲದಲ್ಲಿಲ್ಲ. ಬೆಲ್ಲವನ್ನು ತಿಂದ ಮೇಲೆ ಹೊಟ್ಟೆಯೊಳಗೆ ಉರಿ, ಶಾಖವನ್ನುಂಟು ಮಾಡುತ್ತದೆ. ಆದರೆ ಬೇವು ಉರಿಯ ಶಮನಕಾರಿ.

ಯುಗಾದಿಗೆ ಹೋಳಿಗೆ (ಒಬ್ಬಟ್ಟು)ಯೇ ಪ್ರಮುಖ ಭಕ್ಷ. ‘ಹಣ ಇದ್ದರೆ ಯುಗಾದಿ. ಇಲ್ಲದಿದ್ದರೆ ತಗಾದಿ’ ಉಳ್ಳವರ ಮತ್ತು ಇಲ್ಲದವರ ಅಂತರ ಹೇಳುವಂಥ ಗಾದೆ. ಸಂಭ್ರಮವನ್ನು ಹಣದಲ್ಲೂ ಅಳೆಯುವ ರೀತಿಗೆ ಈ ಗಾದೆ ಸಾಕ್ಷಿ. ಯುಗಾದಿಗೂ ಪ್ರಕೃತಿಗೂ ಅವಿನಾಭಾವ ಸಂಬ0ಧ. ಪ್ರಕೃತಿಯಲ್ಲಿ ಯುಗಾದಿ ಕಾಲಕ್ಕೆ ಅಪೂರ್ವ ಬದಲಾವಣೆ ಕಾಣುತ್ತದೆ. ಹಣ್ಣೆಲೆ ಉದುರಿ ಹಸಿರೆಲೆ ಚಿಗುರೊಡೆದು ನಳನಳಿಸುತ್ತವೆ. ವಿಶಿಷ್ಟ ಆಕರ್ಷಣೆಯ ಬಣ್ಣಗಳಿಗೆ ತಿರುಗಿ ಹೊಸ ವರ್ಷಕ್ಕೆ ಸ್ವಾಗತಿಸುವ ಪ್ರಕೃತಿ ತನ್ನ ಅಂತರಾಳವನ್ನು ತೆರೆದಿಡುವ ಸಂಗಮ ಕಾಲ.
ಸೌರಮಾನ ಪಂಚಾಂಗ ಸೂರ್ಯನ ಚಲನೆಯಾಧಾರಿತ. ಎಲ್ಲಾ ವಿರೋಧಿಗಳನ್ನು ಮೆಟ್ಟಿನಿಂತು ಹೊಸ ವರುಷಕೆ ನವ ಚೈತನ್ಯ ತುಂಬುವ, ಹೊಸ ಸಂವತ್ಸರ ಸ್ವಾಗತಿಸುವ ‘ಬಿಸು ಪರ್ವ’ . ಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರಪ್ರದೇಶ, ಮಹಾರಾಷ್ಟçದವರು ಚಂದ್ರಮಾನ ಪರಿಪಾಲಕರಾದರೆ ಕರ್ನಾಟಕದ ದಕ್ಷಿಣ ಕರಾವಳಿ, ಕೇರಳ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಲ, ಅಸ್ಸಾಂ, ಹಿಮಾಚಲ ಪ್ರದೇಶ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು.

Related Articles

ಪ್ರತಿಕ್ರಿಯೆ ನೀಡಿ

Latest Articles