ಯುಗಾದಿ ಸಂಕಲ್ಪ

- ಡಾ. ಸುದರ್ಶನ್ ಭಾರತೀಯ

ನವ ವರುಷ ಮತ್ತೆ ಬಂದಿದೆ 
ನವ ಹುರುಪು ಸಂತಸ ತಂದಿದೆ‌.        ||ಪ||

ಯುಗದ ಆದಿ ಇದಿರು ನಿಂತಿದೆ 
ಚೈತ್ರ ಅರಳಿ ಚಿಗುರು ಸೂಸಿದೆ 
ಶುಕ ಪಿಕ ಸಮೂಹ ಹಾರಿದೆ 
ನವ ವರುಷ ಮತ್ತೆ ಬಂದಿದೆ              ||1||

  ಹಿಂದರಿಯದ ಜೀವ ಸಾಗರ 
  ಮುಂದರಿಯದ  ಬವಣೆಯಾಗರ 
  ಅವನೊಲುಮೆಯ ಬದುಕೆ  ಸಾಕಾರ 
  ಅರಿತು ನಡೆಯೆ ಬಾಳೆ ಗೋಪುರ             ||2||

ಹಸಿರೇ ಹೊನ್ನು ನೀರೇ ಬೆಳ್ಳಿ 
ಉಸಿರು ಉಸಿರಲಿ ಪ್ರಾಣಾಯಾಮ 
ಶುದ್ಧ ಕಾಯಾ ವಾಚಾ ಮನಸೇ 
ಸದ್ಯ ತಪವು ಪರಮ ಪದವು.             ||3||

Related Articles

ಪ್ರತಿಕ್ರಿಯೆ ನೀಡಿ

Latest Articles