ಸಾಲಿಗ್ರಾಮ ದೇವಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಉಡುಪಿ: ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಆಂಜನೇಯ ದೇವಳದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ವಿವರ:

ಏಪ್ರಿಲ್ 13ನೇ ಮಂಗಳವಾರ ಮೇಷ ಸಂಕ್ರಮಣದಂದು ಬೆಳಗ್ಗೆ ಗಣಹೋಮ, ಉತ್ಸವಬಲಿ, 12-30ಕ್ಕೆ ರಜತ ರಥೋತ್ಸವ.

14ನೇ ಬುಧವಾರ ಸೌರಮಾನ ಯುಗಾದಿ, ಸಂಜೆ 4-30ರಿಂದ ಪ್ಲವನಾಮ ಸಂವತ್ಸರ ಪಂಚಾಂಗ ಪೂಜೆ, ಯುಗಾದಿ ಫಲ ಶ್ರವಣ.

ಏಪ್ರಿಲ್ 21ನೇ ಬುಧವಾರ ಶ್ರೀರಾಮ ನವಮೀ, ವಿಶೇಷ ಪೂಜೆ. ಏ. 27ನೇ ಮಂಗಳವಾರ ಶ್ರೀ ಆಂಜನೇಯ ಜಯಂತಿ ಬೆಳಗ್ಗೆ 6 ರಿಂದ ಸುಂದರಕಾಂಡ ಪಾರಾಯಣ, ಮಹಾಪಂಚಾಮೃತಾಭಿಷೇಕ, ಪಂಚವಿಂಶತಿ ಕಲಾಶಾಭಿಷೇಕ, ಮಹಾಪೂಜೆ ಸಂಜೆ 6 ರಿಂದ ಮಹಾರಂಗಪೂಜೆ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೋವಿಡ್ ನಿಯಾಮಳಿಯನ್ನು ಅನುಸರಿಸಿ ಮಾಡಲಾಗುತ್ತಿದ್ದು ಭಕ್ತಾದಿಗಳು ಸಹಕರಿಸಬೇಕಾಗಿ ಅಧ್ಯಕ್ಷರು ಮತ್ತು ಸದಸ್ಯರು ಆಡಳಿತ ಮಂಡಳಿ ಭಕ್ತರಲ್ಲಿ ವಿನಂತಿ ಮಾಡಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles