ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಯರ ಬೃಂದಾವನಕ್ಕೆ ತೈಲಾಭ್ಯಂಜನ, ಫಲಪಂಚಾಮೃತ, ಪಲ್ಲಕ್ಕಿ ಉತ್ಸವ ರಥೋತ್ಸವ, ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಬಂಗಾರದ ಕವಚದೊಂದಿಗೆ ಕಮಲದ ಹೂಗಳಿಂದ ಅಲಂಕಾರ ಮಹಾಮಂಗಳಾರತಿ ನೆರವೇರಿತು.
ಸಂಜೆ ವಿಶೇಷವಾಗಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಪ್ಲವನಾಮ ಸಂವತ್ಸರದ ಪಂಚಾಂಗ ಶ್ರವಣ, ಡಾ. ಜಗನ್ನಾಥ್ ಆಚಾರ್ಯರಿಂದ ಪ್ರವಚನವೂ ನೆರವೇರಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶ್ರೀ ಗುರುರಾಯರ ಉತ್ಸವ ಹಾಗೂ ಪಂಚಾಂಗ ಶ್ರವಣದಲ್ಲಿ ಭಾಗವಹಿಸಿ ಶ್ರೀಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಶ್ರೀ ಮಠಕ್ಕೆ ಆಗಮಿಸಿದ ಭಕ್ತರಿಗೆ ತರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್,ಸ್ಕ್ವಯರ್ ಬಾಕ್ಸ್ ಮುಂತಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು ಎಂದು ಕಿಶೋರ್ ಆಚಾರ್ಯರು ತಿಳಿಸಿದರು.