- ಡಾ. ಸುದರ್ಶನ ಭಾರತೀಯ
ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಕುಂಬಳಗೋಡು ಕಳೆದ ನಾಲ್ಕೆöÊದು ವರುಷಗಳಿಂದ ಜಗನ್ಮಾತೆ ಮೂಕಾಂಬಿಕೆಯ ಸನ್ನಿಧಿಯಾಗಿ ಹೆಸರುವಾಸಿಯಾಗಿದೆ. ಹಸಿರು ವನಸಿರಿಯ ಮಡಿಲಲ್ಲಿ ನೆಲೆಯಾಗಿರುವ ಶ್ರೀದೇವಿ ಮೂಕಾಂಬಿಕೆಯ ವಾರ್ಷಿಕ ಮಹೋತ್ಸವ ಏಪ್ರಿಲ್ 17 ರಂದು ಬಹಳ ಸಡಗರದಿಂದ ಜರುಗಿತ್ತು.
ಪ್ರತೀ ವರ್ಷ ನಡೆಯುವಂತೆ ವಾಸ್ತು ಆರಾಧನೆ, ತತ್ವ ಕಲಾವೃದ್ಧಿ ಹೋಮ ಸಹಿತ ಚಂಡಿಕಾ ಹೋಮ, ಕುಂಭಾಭಿಷೇಕ ನಡೆದು ಜಗನ್ಮಾತೆಯ ದಿವ್ಯ ದರ್ಶನ ನೆರೆದ ಸದ್ಭಕ್ತರನ್ನು ಪುಳಕಿತಗೊಳಿಸಿತ್ತು. ಮುಂಜಾನೆಯಿ0ದ ಶ್ರದ್ಧಾ- ಭಕ್ತಿಗಳಿಂದ ಸಂಪನ್ನವಾದ ಸಾಲು ಸಾಲು ಸೇವೆಯಿಂದ ಸಂತುಷ್ಟ ತಾಯಿಯ ವಿಗ್ರಹವೇ ಹಸನ್ಮುಖಿಯಾಗಿ ಉತ್ಸುಕ ಭಕ್ತಸಮೂಹಕ್ಕೆ ಗೋಚರವಾದದ್ದು ತಾಯಿಯ ಸಾನ್ನಿಧ್ಯ ಇಲ್ಲಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಸಾಬೀತಾಯಿತು.
ಜಗನ್ಮಾತೆಯ ಸಾನ್ನಿಧ್ಯವನ್ನು ಸಂಸ್ಥಾಪಿಸಿ ಸುಮಾರು ಹತ್ತು ವರುಷಗಳಿಂದ ಇಲ್ಲಿನ ಭಕ್ತ ಸಮೂಹಕ್ಕೆ ಶ್ರೀದೇವಿಯ ಅನುಗ್ರಹ ಲಭಿಸುವಂತಾಗಲು ಕಾರಣ ಪುರುಷರಾದ ವೇದ ವಿದ್ವಾನ್ ಶ್ರೀ ಅರವಿಂದ ಭಟ್ಟರು ಪೂರ್ಣಾಹುತಿಯ ಆ ನಂತರ ಭಕ್ತರನ್ನುದ್ದೇಶಿಸಿ ನೀಡಿದ ಆಶೀರ್ವಚನಗಳಿವು-
ಹಣದಿಂದ ಅಂಗಡಿಯ ವಸ್ತುಗಳನ್ನು ಮನುಷ್ಯರು ತೆಗೆದುಕೊಳ್ಳಬಹುದು. ಗುರು ಹಿರಿಯರ ಆಶೀರ್ವಾದ, ದೇವತಾ ಅನುಗ್ರಹ ಇದ್ದರೆ ಮಾತ್ರ ಇಂತಹ ದರ್ಶನ ಪಡೆಯಲು ಸಾಧ್ಯ;
ದೇವರ ನಾಮ ಸ್ಮರಣೆ ಮಾಡಬೇಕಾದರೆ ಶಿಲ್ಪಿಯ ಉಳಿಯ ಏಟನ್ನು ತಿಂದು ಕಲ್ಲು ವಿಗ್ರಹ ಆದಂತೆ ನಾವುಗಳೂ ಪರಿಶ್ರಮ ಶ್ರದ್ಧೆ ಭಕ್ತಿ ನಂಬಿಕೆ ಇಟ್ಟು ನಿಷ್ಕಾಮ ಕರ್ಮ ಮಾಡಿದರೆ ದೇವರ ಅನುಗ್ರಹ ಆಗುತ್ತದೆ. ಎಲ್ಲರಿಗೂ ಜಗನ್ಮಾತೆ ಆಯುರಾರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ !
ಬೆಂಗಳೂರಿನ ಬಹುತೇಕ ಮಂದಿಗೆ ಇನ್ನೂ ಅಪರಿಚಿತವಾಗಿಯೇ ಉಳಿದಿರುವ ಈ ತಾಣ ರಾಜ್ಯಾದ್ಯಂತ ಭಕುತಜನರನ್ನು ಕೈಬೀಸಿ ಕರೆಯುತ್ತಿದೆ. ಶ್ರೀ ರಾಮಕೃಷ್ಣ ಪರಮಹಂಸರ ನುಡಿಯಂತೆ… “ನಾವು ಮೂರು ಹೆಜ್ಜೆ ದೇವಿಯೆಡೆಗೆ ನಡೆದದ್ದೇ ಆದರೆ, ದೇವಿ ಆರು ಹೆಜ್ಜೆ ಧಾವಿಸಿ ನಮ್ಮನ್ನು ರಕ್ಷಿಸುವಳು’ ಎಂಬುದು ಈ ತಾಯಿ ಮೂಕಾಂಬಿಕೆಯ ದರುಶನ ಮಾತ್ರದಿಂದ ಫಲಿಸುತ್ತಿದೆ.
ಮಾಹಿತಿಗೆ: ಅರವಿಂದ ಭಟ್ಟ- 9448067570, 7899072569.