ಸನ್ನತಿ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಪ್ರಮುಖ ಶಕ್ತಿಪೀಠ ಹಾಗೂ ಧಾರ್ಮಿಕ ಕೇಂದ್ರ ಶ್ರೀ ಕ್ಷೇತ್ರ ಸನ್ನತಿ ಶ್ರೀ ಚಂದ್ರಲಾಪರಮೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 26 ರಿಂದ ಮೇ 5 ರವರೆಗೆ ನಡೆಯಬೇಕಾಗಿದ್ದ ಜಾತ್ರಾಮಹೋತ್ಸವದ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ.
ಸರಕಾರದ ಕೋವಿಡ್ 19 ನಿಯಮಾವಳಿಗಳ ಪ್ರಕಾರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ದಂಡಾಧಿಕಾರಿಗಳಾದ ಚಿತ್ತಾಪುರ್ ತಹಸಿಲ್ದಾರರು ಏಪ್ರಿಲ್ 20 ರಂದು ಶ್ರೀಕ್ಷೇತ್ರದಲ್ಲಿ ಸಭೆ ನಡೆಸಿ, ಕರೋನವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನದಲ್ಲಿ ಎಂದಿನಂತೆ ಕೇವಲ ಪೂಜಾಕೈಂಕರ್ಯ ಮಾತ್ರ ಮುಂದುವರಿಸಿಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಯಾವುದೇ ರೀತಿಯಿಂದ ಜನಸಂದಣಿಯಾಗದಂತೆ ಸರ್ಕಾರಿ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ ಕಾರಣ ಶ್ರೀ ಚಂದ್ರಲಾಂಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ಸಮೂಹ ಸಾಂಕೇತಿಕವಾಗಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದ್ದು, ಶ್ರೀಕ್ಷೇತ್ರದ ಭಕ್ತಾದಿಗಳಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಈ ವರ್ಷವೂ ಸಹ ತಾವುಗಳು ತಮ್ಮ ತಮ್ಮ ಮನೆಯಲ್ಲಿಯೇ ಶ್ರೀದೇವಿಯ ಪೂಜಾ ಸೇವಾ ನೈವೇದ್ಯಗಳನ್ನು ಸಮರ್ಥಿಸಿ ಶ್ರೀದೇವಿಯನ್ನು ಪ್ರಾರ್ಥಿಸಲು ಕೋರಲಾಗಿದೆ. ಭಕ್ತಾದಿಗಳೆಲ್ಲರೂ ಸರಕಾರದ ಮುಂದಿನ ಆದೇಶ ಬರುವವರೆಗೆ ಸಹ ಕರಿಸುವಂತೆ ದೇವಸ್ಥಾನದ ಸೇವಾಸಂಘ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.