ಶಂಖವನ್ನು ದೈವೀಭಾವನೆಯಿಂದ ಪೂಜಿಸುತ್ತೇವೆ. ಮನೆಯಲ್ಲಿ ಶಂಖ ಇದ್ದರೆ ಸಕಾರಾತ್ಮಕ ಶಕ್ತಿ ಮನೆಯಲ್ಲಿ ತುಂಬಿರುತ್ತದೆ ಎನ್ನುವ ನಂಬಿಕೆ ನಮ್ಮದು.
ಶಂಖನಾದದಿಂದ ಓಂಕಾರನಾದ ಹೊಮ್ಮುತ್ತದೆ. ಆ ನಾದವು ಎಷ್ಟು ದೂರ ಕ್ರಮಿಸುತ್ತದೆಯೋ ಅಲ್ಲಿಯವರೆಗೇ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಸುಳಿಯುವುದಿಲ್ಲ. ಶಂಖವನ್ನು ಬಳಸುವಾಗ ಅದಕ್ಕೆ ನೀರನ್ನು ಪ್ರೋಕ್ಷಣೆ ಮಾಡಿಯೇ ಪೂಜಿಸಬೇಕು.
ಶಂಖವನ್ನು ಯಾವ ರೀತಿ ಉಪಯೋಗಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
- ಶಂಖನಾದ ಮಾಡಲು ಬಳಸುವ ಶಂಖದಿಂದ ದೇವರಿಗೆ ನೀರಿನ ಅಭಿಷೇಕ ಮಾಡಬಾರದು.
- ಗಂಗಾಜಲದಲ್ಲಿ ಶಂಖವನ್ನು ಪ್ರತಿದಿನ ಶುದ್ಧ ಮಾಡಬೇಕು. ನಂತರ ಅದನ್ನು ಬಿಳಿ ಅಥವಾ ಕೆಂಪು ಬಟ್ಟೆಯಲ್ಲಿ ಸುತ್ತಿಡಬೇಕು.
- ಶಂಖ ಮನೆಯಲ್ಲಿದ್ದರೆ ದಿನಕ್ಕೆ ಎರಡು ಬಾರಿ ಊದಬೇಕು.
- ಶಿವ ಹಾಗೂ ಸೂರ್ಯದೇವನಿಗೆ ಶಂಖದಿಂದ ಅರ್ಘ್ಯ ನೀಡಬಾರದು.