ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ, ಪೀಠಾಧಿಪತಿ ಪಟ್ಟಾಭಿಷೇಕ ಕಾರ್ಯಕ್ರಮಗಳು ನಾಳೆಯಿಂದ

ಉಡುಪಿ: ಉತ್ತರಕನ್ನಡ ಜಿಲ್ಲೆಯ ಸೋಂದಾ ಕ್ಷೇತ್ರದಲ್ಲಿ ನಡೆಸಲು ತೀರ್ಮಾನಿಸಿದ್ದ ಶೀರೂರು ಮಠದ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗಳನ್ನು ಕೊರೊನಾ-ಲಾಕ್‌ಡೌನ್ ಕಾರಣದಿಂದ ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ ನಡೆಸಲಾಗುತ್ತಿದೆ.

ಅದಮಾರು ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳಿಂದ ಆಶೀರ್ವಾದ ಪಡೆದ ಕ್ಷಣ

ಅನಿರುದ್ಧ ಅವರ ಸನ್ಯಾಸ ಸ್ವೀಕಾರ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳು ಮೇ 11 ರಿಂದ 14 ರವರೆಗೆ ನಡೆಯಲಿದೆ. ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸನ್ಯಾಸಾಶ್ರಮ, ಪೀಠಾಧಿಪತಿ ಪಟ್ಟಾಭಿಷೇಕ, ಪ್ರಣವ ಮಂತ್ರೋಪದೇಶಗಳನ್ನು ನೀಡಿ ಹರಸಲಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿರ್ಬಂಧ ಇರುವುದರಿಂದ ಯಾವುದೇ ಭಕ್ತಾದಿಗಳಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.

ಧರ್ಮಸ್ಥಳ ಸಮೀಪದ ನಿಡ್ಲೆ ಡಾ. ಉದಯಕುಮಾರ್ ಸರಳತ್ತಾಯರ ಪುತ್ರ ಅನಿರುದ್ಧ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು ವಟು, ಈಗಾಗಲೇ ಉಡುಪಿ ಶ್ರೀಗಳು ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರನ್ನು ಭೇಟಿ ಮಾಡಿ ಪ್ರಸಾದ ಮಂತ್ರಾಕ್ಷತೆಯನ್ನಯ ಪಡೆದಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಪೇಜಾವರ ಮಠಾಧೀಶರು ಹಾಗೂ ಪಲಿಮಾರು ಉಭಯ ಮಠಾಧೀಶರಿಂದ ಆಶೀರ್ವಾದ.
ಕೃಷ್ಣಾಪುರ ಹಾಗೂ ಕಾಣಿಯೂರು ಮಠದ ಶ್ರೀಗಳಿಂದ ಆಶೀರ್ವಾದ
ಸುಬ್ರಹ್ಮಣ್ಯದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರಿಂದ ಪ್ರಸಾದ ಮಂತ್ರಾಕ್ಷತೆ.



Related Articles

ಪ್ರತಿಕ್ರಿಯೆ ನೀಡಿ

Latest Articles