*ಜೆ.ಅರ್.ಶಿವಕುಮಾರ್, ಚಿತ್ರದುರ್ಗ
ವ್ಯಾಸರಾಜನು ನೀನಯ್ಯ ಶ್ರೀಪಾದರಾಜರ ಶಿಷ್ಯನಯ್ಯ ವಿಜಯನಗರದ ಗುರುವಾಗಿ ಧರ್ಮ ರಕ್ಷಣೆಯ ಮಾಡಿದೆಯಯ್ಯ ಕನ್ನಡ ಭಾಷೆಯ ಗೀತೆಯ ರಚಿಸಿ ಹೊಸ ಸಂಪ್ರದಾಯವ ಕೊಟ್ಟವರಯ್ಯ ಯಂತ್ರೋದ್ಧಾರಕ ಪ್ರಾಣದೇವನ ಪ್ರತಿಷ್ಠಾಪಿಸಿದ ಮಹಿಮರಯ್ಯ ಕನಕ,ಪುರಂದರ ರ ಗುರುವೆಂದು ಪ್ರಖ್ಯಾತಿಯನು ಪಡೆದವರೈಯ್ಯ ವೆಂಕಟರಮಣನ ಭಜಿಸುತಲಿ ಆನಂದವನು ಪಡೆದವರೈಯ್ಯ ವ್ಯಾಸರಾಯರ ಕೀರ್ತನೆಗಳಲಿ ಕೃಷ್ಣ ದೇವನ ಕಂಡವರಯ್ಯ ಶ್ರೀಕೃಷ್ಣ ನೆಂಬ ಅಂಕಿತ ನಾಮದಿ ಜನಮನದಲ್ಲಿ ನೆಲೆಸಿಹರಯ್ಯ.