ಆಡಿನ ಹಾಲುಂಡು ಹಾಸಿಗೆ ಹೊತ್ತು ಹೋಗುತ್ತಿದ್ದೇನು ನಿದ್ದೆಗೆ ಹನುಮ ದೇವರ ಕಟ್ಟೆಗೆ ಎಳೆಯರೆಲ್ಲ ಖಾಲಿಪಿಲಿ ಮಾತು ಮುಗಿಸಿ ಮಲಗುತ್ತಿದ್ದೇವು ಬೇವಿನ ಮರದ ತಂಗಾಳಿಗೆ ಎದ್ದು ನೋಡುತ್ತಿದ್ದೇವು ಬಿಸಿಲು ಮೈಮುಟ್ಟಿದಾಗ ಮತ್ತೆ ಮಲಗುತ್ತಿದ್ದೇವು ಮೈಮುರಿದು ಗಂಟೆನಾದ ಕಿವಿಕಚ್ಚಿದಾಗ ಬಿದ್ದಲ್ಲಿಯೆ ನೋಡುತ್ತಿದ್ದೇವು ಹನುಮ ಪೂಜೆ ಭಕುತಿಯಲಿ ಪೂಜಾರಿ ಹಿಡಿ ಶಾಪಕ್ಕೆ ಒಲ್ಲದ ಮನಸ್ಸಿನಲಿ ಎದ್ದು ಬಿದ್ದು ಮರುಳುತ್ತಿದ್ದೇವು ಬೀದಿ ರಾಜರಂತೆ ಮನೆಗೆ ಹಾಸಿಗೆ ಹೊರೆ ಹೊತ್ತು ಹೊಸ್ತಿಲಲ್ಲಿರುವಾಗ ಬೈಗುಳ ಆದರದಿಂದ ಸ್ವಾಗತಿಸುತ್ತಿದ್ದವು ರಾಜಾಧಿರಾಜರನ್ನು.
ಪಾರ್ಥವಿ (ಅರ್ಜುನ್ ಕಂಬೋಗಿ)
ಕ್ಷೇತ್ರ ಶಿಕ್ಷಣಾಧಿಕಾರಿಗಳು ,
ಸವದತ್ತಿ – ಬೆಳಗಾವಿ ಜಿಲ್ಲೆ