ಆಧುನಿಕ ಕಾಲ

ಜ್ಯೋತಿ ಸಿ ಕೋಟಗಿ

ಬೆಳದಿಂಗಳ ತೋರಿಸಿ ಕೈ ತುತ್ತು ಹಾಕುತ್ತಿದ್ದಳು ಅಮ್ಮ
ಆಗ
ಕೈಯ್ಯಲ್ಲಿ ಮೊಬೈಲ್ ಕೊಟ್ಟು ತುತ್ತು ಹಾಕುವಳು
ಅಮ್ಮ ಈಗ
ಯಾಕೆಂದರೆ ಆಧುನಿಕ ಕಾಲವೀಗ.

ಊರೂರ ಜಾತ್ರೆ ಮಾಡಿಸುತ್ತಿದ್ದರು ಅಪ್ಪ ಆಗ
ಮನೆಯಿಂದ ಕದಲಿಸಲ್ಲ ಅಪ್ಪ ಈಗ
ಯಾಕೆಂದರೆ ಆಧುನಿಕ ಕಾಲವೀಗ

ಅಂಗಳದಲಿ ಗೆಳೆಯರೊಂದಿಗೆ ಆಟ ಆಗ
ಮೊಬೈಲ್ನಲ್ಲಿ ಗೊಂಬೆಗಳೊ0ದಿಗೆ ಆಟ ಈಗ
ಯಾಕೆಂದರೆ ಆಧುನಿಕ ಕಾಲವೀಗ

ಅಜ್ಜಿ ಮನೆಯ ಸಿಹಿ ಸಿಹಿ ತಿಂಡಿ ಆಗ
ಬೇಕರಿಯ ಮುರುಕಲು ತಿಂಡಿ ಈಗ
ಯಾಕೆಂದರೆ ಆಧುನಿಕ ಕಾಲವೀಗ

ಎಣ್ಣೆಯ ಅಭ್ಯಂಜನ ಸ್ನಾನ ಆಗ
ಶಾಂಪೂ ಸೋಪಿನ ಸ್ನಾನ ಈಗ
ಯಾಕೆಂದರೆ ಆಧುನಿಕ ಕಾಲವೀಗ

ಹಬ್ಬದಡುಗೆಯ ಭಾರೀ ಭೋಜನ ಆಗ
ಪಾರ್ಟಿಯ ಎಣ್ಣೆ ಫಿಜ್ಜಾ ಬರ್ಗರ್ ಈಗ
ಯಾಕೆಂದರೆ ಆಧುನಿಕ ಕಾಲವೀಗ

ಹೊಟ್ಟೆ ಬಿರಿಯುವಷ್ಟುಂಡರೂ ಕಾಯಿಲೆ ಇಲ್ಲ ಆಗ,

ಅಳತೆ ಮಾಡಿ ಉಂಡರೂ ನೂರೆಂಟು ಖಾಯಿಲೆ ಈಗ
ಯಾಕೆಂದರೆ ಆಧುನಿಕ ಕಾಲವೀಗ

ಇದ್ದುದರಲ್ಲಿಯೇ ಸುಖ ಸಂತೃಪ್ತಿ ಇತ್ತು ಆಗ
ಎಷ್ಟಿದ್ದರೂ ದು:ಖ ಅತೃಪ್ತಿ ಇದೆ ಈಗ
ಎಲ್ಲ ಇದ್ದರೂ ಏನು ಇಲ್ಲದಾಯಿತು
ಯಾಕೆಂದರೆ ಆಧುನಿಕ ಕಾಲವೀಗ.

ಜ್ಯೋತಿ ಸಿ ಕೋಟಗಿ

ಜ್ಯೋತಿ ಸಿ ಕೋಟಗಿ
ಸಹ ಶಿಕ್ಷಕಿ
ಸರಕಾರಿ ಪ್ರಾಥಮಿಕ ಶಾಲೆ ತಲ್ಲೂರ
ತಾ: ಸವದತ್ತಿ ಜಿ: ಬೆಳಗಾವಿ

Related Articles

ಪ್ರತಿಕ್ರಿಯೆ ನೀಡಿ

Latest Articles