ಭರವಸೆಯೆಂಬುವ ಬುತ್ತಿಯ ನೆತ್ತಿಯ ನರದಲಿ ತುಂಬಿದ ಹೊಳೆಯುವ ಬೆಳಕಿದು ಹರಿಸುತ ನೂತನ ಚೇತನವೆಮ್ಮಲಿ ಮರೆಸಿತು ನೋವನು ಭರವಸೆ ಬೆಳಕಿದು//1 ನಂಬಿಕೆಯಿಂದಲಿ ಬದುಕುವ ಭರವಸೆ ಕುಂಭದ ರೂಪದಿ ಹೊರುತಲಿ ತಂದರು ಜಂಭವೆಯಿಲ್ಲದ ನಮ್ಮಯ ಅತಿಥಿಯು ಅಂಬರದಲ್ಲಿಯೆ ತೇಲಿಸಿ ಬಿಟ್ಟರು//2 ವಾಸ್ತವ ಬದುಕಿನ ನಾವೆಯನೇರುತ ಹಸ್ತವ ಚಾಚುತ ಸುಳಿಯನು ದಾಟಿಸಿ ಮಸ್ತಕದಲ್ಲಿಯ ಚಿಂತೆಯನಳಿಸುತ ಶಿಸ್ತಿನ ಜೀವನ ದಾರಿಯ ಸಾಗಿಸಿ//3 ನೊಂದಿಹ ಮನವನು ಸಂತೈಸುತ್ತಲಿ ಬಂದಿಹ ದುರಿತವನೆದುರಿಸಿ ನಡೆಯುವ ಮಂದಿರ ಮಠಗಳ ಸುತ್ತುವ ಬದಲಿಗೆ ನಿಂದನೆ ಮಾಡದೆ ನೋವಿಗೆ ಮಿಡಿಯುವ//4 ಮುಳ್ಳಿನ ನಡುವೆಯು ನಗುತಿದೆ ಹೂವದು ಬಳ್ಳಿಗಯಾಸರೆ ನೀಡಿದೆ ಮರುವದು ಉಳ್ಳವರೆಲ್ಲರು ಉದಾರ ಭಾವದಿ ಒಳ್ಳೆಯ ದಾನವ ಮಾಡಲು ಗುಣವದು//5
ಬಸಮ್ಮ ಏಗನಗೌಡ್ರ ಶಿಕ್ಷಕಿ,
ಹಾವೇರಿ ಜಿಲ್ಲೆ