ಜಾಗೃತಿ

ಅಜ್ಜಿ ಮನೆಗೆ ಹೋಗಲೇ ಇಲ್ಲ
ರಜೆಯಲ್ಲ ಕಳೆಯಿತಲ್ಲ
ರಜೆಯೋ ಸಜೆಯೋ ತಿಳಿಯದಲ್ಲ
ಇದು ಎಂತಹ ರುಜಿನ ಪೋಗದಲ್ಲ

ವರುಷ ಉರಿಳಿದರೂ ದೂರಾಗಲಿಲ್ಲ
ಮತ್ತೆ ಮತ್ತೆ ಕತ್ತ ಹಿಸುಕುತಿದೆಯಲ್ಲ
ನಿಶ್ಚಿಂತೆಯ ನಿಶೆಯಂತೂ ಇಲ್ಲವೇ ಇಲ್ಲ
ದಿನಗಳಂತೂ ಸಾಗುತಿವೆ ಎಲ್ಲ

ಕ್ರೂರಿಯ ಅರ್ಭಟದ ಅಂತ್ಯವೆಲ್ಲಿ
ಕೈ ಚೆಲ್ಲಿ ಕುಳಿತರೆ ಪರಿಹಾರವೆಲ್ಲಿ
ಸಾಗಿದೆ ಜೀವನ ದುಗುಡ ದುಮ್ಮಾನಗಳಲ್ಲಿ
ಬೇಕಿದೆ ಮನಕೆ ಭರವಸೆಯ ಜೆಲ್ಲಿ

ಸಂಕಟದ ಜೊತೆ ಸಂತೋಷವೂ ಅಡಗಿದೆ
ಸಂಕಟ ಬದಿಗೊತ್ತಿ ಸಂತೋಷ ಕಾಣಬೇಕಿದೆ
ಮರಿ ಪಿಳ್ಳೆಗಳ ಭವಿಷ್ಯಕ್ಕಾಗಿ
ಸುಂದರ ಸಧೃಢ ಸಮಾಜಕ್ಕಾಗಿ

ನವ ತರುಣರೇ ಜಾಗೃತರಾಗೋಣ ನಾವಿನ್ನು
ರಕ್ಷಿಸೋಣ ಭಾರತಾಂಬೆಯ ಮಣಿ ಮುಕಟವನ್ನು
ಭಯವೆಂಬ ಜಾಲದಿಂದ ಹೊರಬನ್ನಿ
ನಿರ್ಭಯದಿ ಹೋರಾಡಿ ಗೆಲ್ಲುವೆವು ಎನ್ನಿ

ಏನಿಲ್ಲದಿದ್ದರೂ ಸಾಗುವುದು ಜೀವನ
ಸಾಗಿಸಲೇ ಬೇಕು ಬಾಳಿನ ಹೂರಣ
ಯುದ್ದದಿ ಗೆಲುವು ನಮ್ಮದಾಗಿಸೋಣ
ಕನಸಿನ ಗೋಪುರವ ನನಸಾಗಿಸೋಣ.

ಜ್ಯೋತಿ .ಸಿ.

ಜ್ಯೋತಿ .ಸಿ. ಕೋಟಗಿ
ಸ.ಮಾ ಪ್ರಾ. ಶಾಲೆ ತಲ್ಲೂರ, ಬೆಳಗಾವಿ ಜಿಲ್ಲೆ.

Related Articles

ಪ್ರತಿಕ್ರಿಯೆ ನೀಡಿ

Latest Articles