ಶೃಂಗೇರಿ ಸಮೀಪದ ಕಿಗ್ಗದಲ್ಲೊಂದು ವಿಶಿಷ್ಟ ದೇಗುಲ

*ಶ್ರೀನಿವಾಸ ಮೂರ್ತಿ ಎನ್ ಎಸ್

ರಾಜ್ಯದಲ್ಲಿ ದೇವಾಲಯಗಳ ನಿರ್ಮಾಣದ ಕಾರ್ಯ ಹಲವು ರಾಜ ಮನೆತನಗಳಲ್ಲಿ ನಡೆದು ಬಂದಿದ್ದು ಮಲೆನಾಡಿನ ಭಾಗದಲ್ಲೂ ಕಾಣಬಹುದು. ಮಲೆನಾಡಿನ ದಟ್ಟ ಸೆರಗಿನಲ್ಲಿ ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಜಯನಗರ ಹಾಗು ಕೆಳದಿ ಕಾಲದ ಹಲವು ದೇವಾಲಯಗಳಿವೆ.
ವಿಜಯನಗರ ಕಾಲದಲ್ಲಿ ಸಾಕಷ್ಟು ದೇವಾಲಯಗಳು ಶೃಂಗೇರಿ ಸುತ್ತ ಮುತ್ತ ನೋಡಬಹುದು. ಅಂತಹ ದೇವಾಲಯಗಳಲ್ಲಿ ಶೃಂಗೇರಿ ತಾಲ್ಲೂಕಿನ ಕಿಗ್ಗದ ಋಷ್ಯಶೃಂಗ ದೇವಾಲಯವೂ ಒಂದು.

ಇತಿಹಾಸ ಪುಟದಲ್ಲಿ ಅಳುಪರ ಕಾಲದ 7 ನೇ ಶತಮಾನದ ಸುಮಾರು ಐದು ಶಾಸನಗಳು ಸಿಕ್ಕ
ಕಾರಣ ಇದು ಅಂದಿನಿಂದಲೂ ಪ್ರಮುಖ ಅಗ್ರಹಾರವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ರಿಷಿಯ
ಶೃಂಗಪುರ – ಮಾರ್ಕುಳ – ಋಷ್ಯಶೃಂಗಪುರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮ ಇಲ್ಲಿನ ಪ್ರಮುಖ
ಅಗ್ರಹಾರವಾಗಿಯೇ ಇದೆ.

ಸ್ಥಳೀಯ ಪುರಾಣ

ಇನ್ನು ಸ್ಥಳೀಯ ಪುರಾಣದಂತೆ ವಿಭಾಂಡಕರಿಗೆ ಇಲ್ಲಿ ಕೊಂಬು ಇದ್ದ ಪೂರ್ವ ನಿರ್ಧರಿತ ಮಗುವೊಂದು
ದೊರೆಯುತ್ತದೆ. ಅದರ ಹಿನ್ನೆಲೆ ಅರಿತ ವಿಭಂಡಕರು ಅದನ್ನು ಋಷ್ಯಶೃಂಗ ಎಂದು ಹೆಸರು ನೀಡಿ
ಸಂಸ್ಕಾರಯುತವಾಗಿ ಬೆಳೆಸುತ್ತಾರೆ. ಆ ಸಮಯದಲ್ಲಿ ಅಂಗ ದೇಶದ ದೊರೆಗೆ ಅಯೋಧ್ಯೆ
ಅರಸರಿಂದ ಶಾಂತ ಎಂಬ ಮಗು ದತ್ತು ಸಿಕ್ಕಿದ್ದು ಅವಳ ಹುಟ್ಟಿನ ನಕ್ಷತ್ರದ ಕಾರಣ ಭೀಕರ ಕ್ಷಾಮ
ಕಾಣಿಸುತ್ತದೆ. ಆಗ ಋಷ್ಯಶೄಂಗರ ಪಾದ ಸ್ಪರ್ಶದ ಕಾರಣ ಮಳೆ ಬರುತ್ತದೆ. ನಂತರ ಶಾಂತಳನ್ನು
ವರಿಸಿ ಅಯೋಧ್ಯೆಗೆ ತೆರೆಳಿ ಯಾಗ ಮಾಡಿಸಿ ಇಲ್ಲಿ ಬಂದು ತಪಸ್ಸು ಮಾಡಿ ದರ್ಶನ ನೀಡಿದ
ಚಂದ್ರಮೌಳೇಶ್ವರ ದೇವರಲ್ಲಿ ಲೀನವಾಗಿಸು ಎಂದು ಕೋರುವ ಬದಲಾಗಿ ನನ್ನಲ್ಲಿ ಲೀನವಾಗಿ ಎಂದು ಕೋರಿದರು ಹಾಗಾಗಿ ಚಂದ್ರಮೌಳೇಶ್ವರರು ಇವರಲ್ಲಿ ಐಕ್ಯರಾದರು. ವರ ಕೋರುವಲ್ಲಿ ಕಗ್ಗವಾದ
ಕಾರಣ ಆ ಹೆಸರು ಪಡೆದು ನಂತರ ಅದೇ ಕಿಗ್ಗವಾಯಿತು ಎಂಬ ನಂಬಿಕೆ ಇದೆ.

ದೇಗುಲ ವಿಶೇಷತೆ

ಸುಮಾರು 14 ನೇ ಶತಮಾನದಲ್ಲಿ ನಿರ್ಮಣವಾದ ಈ ದೇವಾಲಯ ಗರ್ಭಗುಡಿ, ಸುಖನಾಸಿ,
ನವರಂಗ ಹಾಗು ದೊಡ್ಡದಾದ ಪ್ರಾಕಾರವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಋಷ್ಯಶೃಂಗ ಎಂದು
ಕರೆಯುವ ಸುಮಾರು 5- 6 ಆಡಿ ಎತ್ತರದ ಶಿವಲಿಂಗವಿದೆ. ಲಿಂಗದಲ್ಲಿ ಜಿಂಕೆಯ ಕೊಂಬಿನ ಗುರುತ್ತಿದ್ದು
ಹಾಗು ನಂದಿಯ ಪಕ್ಕದಲ್ಲಿ ಸ್ತ್ರೀಯ ಕೆತ್ತನೆ ಇದೆ. ಇದು ಋಷ್ಯಶೃಂಗ ಹಾಗು ಆತನ ಪತ್ನಿಯದು
ಎಂಬ ನಂಬಿಕೆ ಇದೆ. ಬಲಭಾಗದಲ್ಲಿ ದ್ವಿಭಾಹು ಗಣಪತಿಯ ಶಿಲ್ಪವಿದ್ದರೆ ಎಡಭಾಗದಲ್ಲಿ
ಮಹಿಷಾಸುರನ ಶಿಲ್ಪವಿದೆ.

ನವರಂಗದಲ್ಲಿ ಸುಮಾರು 4 ಕಂಭಗಳಿದ್ದು ಒಂಬತ್ತು ಅಂಕಣಗಳಿವೆ. ಮೂರು ದಿಕ್ಕಿಗೆ
ಪ್ರವೇಶದ್ವಾರ ಹೊಂದಿರುವ ಇಲ್ಲಿನ ವಿತಾನದಲ್ಲಿ ಸುಂದರ ಪದ್ಮದ ಕೆತ್ತನೆ ಇದೆ. ಕಂಭದಲ್ಲಿ
ಉಗ್ರನರಸಿಂಹ, ಕಾಳಿಂಗಮರ್ಧನ, ಆಂಜನೇಯ, ರಾಮ ಮತ್ತು ಪರಿವಾರ, ಕೃಷ್ಣ ಮುಂತಾದ ಕೆತ್ತನೆ
ನೋಡಬಹುದು. ಪಲ್ಲಕಿಯಲ್ಲಿ ಋಷ್ಯಶೃಂಗರನ್ನ ಪಲ್ಲಕ್ಕಿಯಲ್ಲಿ ಕೊತ್ತು ಒಯ್ಯುವ ಕೆತ್ತನೆ ಇದೆ.
ಇನ್ನು ಕಾಳ ಮತ್ತು ಮಹಾ ಕಾಳ

ಮಹಾ ಕಾಳ ಎಂದು ಕರೆಯುವ ಶೈವ ದ್ವಾರ ಪಾಲಕರಿದ್ದಾರೆ.

ದೇವಾಲಯಕ್ಕೆ ಶಿಖರವಿದ್ದು ಹೊಸದಾದ ಲೋಹದ ಕಳಸವನ್ನು ಇರಿಸಲಾಗಿದೆ.  ಹತ್ತಿರದಲ್ಲಿ ಋಷ್ಯಶೃಂಗರ ಪತ್ನಿ ಶಾಂತಾದೇವಿಯ ದೇವಾಲಯವೂ ಇದೆ.  ಪ್ರಾಕಾರದಲ್ಲಿ ನಂದಿ ಹಾಗು ಮಲ್ಲಿಕಾರ್ಜುನ ಎಂದು ಕರೆಯುವ ಶಿವಲಿಂಗವಿದೆ.

ದೇವಾಲಯದ ಮುಂಭಾಗದಲ್ಲಿ ಅಪುರೂಪದ ಸ್ಥಳೀಯವಾಗಿ ಸಿಕ್ಕ ವೀರಗಲ್ಲಗಳು ಹಾಗು ಮಾಸ್ತಿ ಕಲ್ಲುಗಳನ್ನು ನೋಡಬಹುದು.  ದೇವಾಲಯಕ್ಕೆ ಚಿಕ್ಕದಾದ ರಾಜಗೋಪುರವನ್ನ ನಿರ್ಮಿಸಲಾಗಿದೆ.

ತಲುಪವ ಬಗ್ಗೆ : ಶೃಂಗೇರಿಯಿಂದ ಸುಮಾರು 8 ಕಿ ಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles