ನೀನಲ್ಲವೇ ಹರಿಯೇ …..

ಮುಂದಿನ  ಹೆಜ್ಜೆಯಲ್ಲೇ
ಬದುಕು  ಮುಗಿಯುವುದರಲಿತ್ತು ,
ನನಗೇ  ಅರಿವಿಲ್ಲದಂತೆ
ಹಿಂದೆ ಸೆಳೆದವನು  
ನೀನಲ್ಲವೇ ಹರಿಯೇ .....

ಬಿದ್ದು  ಪೆಟ್ಟಾದ  ಮನವು
ನಿನ್ನ  ಮೇಲೆಯೇ 
ಕೋಪಗೊಂಡಿತ್ತು ,
ನಾನು  ಮುಂದುವರಿಯಲು
ಬಿಡದಂತೆ
ನೀನೇ  ತಡೆಯುವೆಯಲ್ಲಾ ಎಂದು ......

ನಾಳೆ ಹೇಗೋ ಏನೋ
ಒಂದೂ  ನಾವರಿಯೆವು !!
ಇಂದಿನ  ದಿನ ಮಾತ್ರ  
ನನ್ನಿಚ್ಛೆಯಂತೆ  ನಡೆಯಲಿಲ್ಲ 
ಎಂದು 
ಅನುದಿನವೂ  ಕೊರಗುವೆವು ......

ಎಲ್ಲದರ  ಸೂತ್ರಧಾರನೇ 
ನೀನೆಂಬುದನ್ನು  
ಪ್ರತಿ ದಿನವೂ  ಮರೆಯುವೆವು ......

ಇಂದಿನ  ನೋವಿಗೆ ಕಾರಣವೇನು ,
ನಾಳೆಯ  ಹರುಷಕೆ  ಕಾರಣವೇನು  !!!

ಅರಿಯದೇ  ಬರಿಯ ಚಿಂತೆಯಲ್ಲೇ ತೊಳಲಾಡುವೆವು ,
ಎಲ್ಲವೂ ನನ್ನಂತೆಯೇ ನಡೆಯುವುದೆಂಬ  ಭ್ರಾಂತಿಯಲ್ಲೇ  ಬದುಕುವೆವು .....

ನಿನ್ನ  ಕಾರುಣ್ಯವ  ಅರಿಯದೇ
ಕುರುಡಾಗಿಹೆವು ,
ಬೇರೆ ದಾರಿ  ತೋರದಾದಾಗ
ನಿನ್ನ ಚರಣಕೆ ಶರಣಾಗುವೆವು ......

ಮನದ  ಭಾರವೆಲ್ಲವ
ನೀ  ಕರುಣೆಯಿಂದ  ಇಳಿಸಲು
ಆಗ
ನೆಮ್ಮದಿಯನ್ನು
ನಾವು  ಪಡೆಯುವೆವು ......

*ಗೀತಕೃಷ್ಣ ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles