ಮನ ಸೆಳೆದ ಭಕ್ತಿ ಗಾಯನ

ಹರಿದಾಸ ಸಾಹಿತ್ಯದ ತವರು ಜಿಲ್ಲೆಯಾದ ರಾಯಚೂರಿನ ಯುವ ಗಾಯಕ ಮಾಧವಾಚಾರ್ ಜೋಶಿ ಇವರ ಕಂಠಸಿರಿಯಲ್ಲಿ, ಜೂನ್ 13 ಭಾನುವಾರದಂದು ಸಂಜೆ ದಾಸವಾಣಿ ಫೇಸ್ಬುಕ್ ಸಮೂಹದ ವತಿಯಿಂದ ನೇರಪ್ರಸಾರದ ಕಾರ್ಯಕ್ರಮವಾಗಿ ಏರ್ಪಡಿಸಲಾಗಿತ್ತು

“ಹರಿನಾಮ ಸಂಕೀರ್ತನೆ” ಶೀರ್ಷಿಕೆಯಲ್ಲಿ, ಗಾಯಕರು “ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ” ಎಂಬ ಉಗಾಭೋಗದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ನಂತರ ತಾರತಮ್ಯವಾಗಿ, “ರತುನಾ ದೊರಕೀತಲ್ಲಾ” (ಶ್ರೀ ಜಗನ್ನಾಥದಾಸರು), “ಗುರುಪುರಂದರದಾ‌ಸರೇ ನಿಮ್ಮ ಚರಣಕಮಲವ ನಂಬಿಹೆ” ( ಶ್ರೀ ವಿಜಯದಾಸರು), “ದಯವಾರಿದೀಭವ ಭಯಹರ ಗುರುವರ” (ಶ್ರೀ ಶ್ಯಾಮಸುಂದರದಾಸರು), “ದಿನಕರನುದಿಸಿದನು ಧರೆಯೊಳಗೆ”, (ಐಹೊಳೆ ವೆಂಕಟ), “ಭಿಕ್ಷವ್ಯಾತಕೆ ಪಾಲಾಕ್ಷ ನಿನಗೆ” (ಶ್ರೀ ಮೋಹನದಾಸರು), “ಭಾರವೇ ಭಾರತಿ ರಮಣ”, (ಶ್ರೀ ವಿಜಯದಾಸರು), “ಏನು ಧನ್ಯಳೋ ಲಕುಮಿ” (ಶ್ರೀ ಪುರಂದರದಾಸರು), “ಬಾರೋ ಬೇಗ ಬಾರೋ ವೇಲಾಪುರದ ಚೆನ್ನ”, (ಶ್ರೀ ವಾದಿರಾಜರು), “ಗೋಪಿ ಕೇಳ್ ನಿನ್ನ ಮಗ ಜಾರ” (ಶ್ರೀದವಿಠಲದಾಸರು), “ಎಂಥ ಠಾವಳಿಗಾರನಮ್ಮ” (ಶ್ರೀ ಕನಕದಾಸರು), “ನಿನ್ನಾ ಒಲುಮೆಯಿಂದ ನಿಖಿಲಾ ಜನರು ಬಂದು ಮನ್ನಿಸುವರೋ ಮಹಾರಾಯ”, (ಶ್ರೀ ವಿಜಯದಾಸರು), ಇಷ್ಟು ಅಪರೂಪದ ಕೃತಿಗಳನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಪುರಂದರದಾಸರ “ಗೋವಿಂದ ನಿನ್ನಾನಂದ” ಎಂಬ ಕೃತಿಯೊಂದಿಗೆ ಮಂಗಳ ಹಾಡಿದರು.

ವಾದ್ಯ ಸಹಕಾರದಲ್ಲಿ, ಅಹಲ್ಯಾಬಾಯಿ ಕುಲಕರ್ಣಿ ಅವರು ಹಾರ್ಮೋನಿಯಂ ನಲ್ಲಿ, ಶ್ರೀ ಸಂದೀಪ್ ಕುಲಕರ್ಣಿ ಅವರು ತಬಲಾದಲ್ಲಿ ಸಾಥ್ ನೀಡಿದರು.

ವರದಿ: ದೇಸಾಯಿ ಸುಧೀಂದ್ರ

Related Articles

ಪ್ರತಿಕ್ರಿಯೆ ನೀಡಿ

Latest Articles