ಟಿ ನರಸೀಪುರ: ತಿರುಮಕೂಡಲು ವ್ಯಾಸರಾಜ ಮಠದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೋಸಲೆ ಶ್ರೀವ್ಯಾಸರಾಜ ಮಠದ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳಿರುವ ಕಿಟ್‍ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀಪಾದಂಗಳವರು ಮಾತನಾಡಿ, ಕರೋನ ರೋಗ ದೇಶದಲ್ಲಿ ಹಾನಿಯನ್ನುಉಂಟು ಮಾಡಿದ್ದು, ನಗರದಲ್ಲಿದ್ದ ರೋಗ ಈಗ ಗ್ರಾಮ ಪ್ರದೇಶಗಳಿಗೆ ಹರಡುತ್ತಿದೆ. ಬಹಳ ಜನ ಕಷ್ಟಪಡುತ್ತಿದ್ದಾರೆ. ಲಾಕ್‍ಡೌನ್‍ನ0ತಹ ಸಂದರ್ಭದಲ್ಲಿ ಪ್ರತಿ ನಿತ್ಯದ ಕಾರ್ಯವನ್ನು ಮಾಡಲಾಗದಿರುವುದರಿಂದ ನಮ್ಮ ಶ್ರೀಮಠದ ವತಿಯಿಂದ ಸಮಾಜಕ್ಕೆ ಅಲ್ಪ ಸೇವೆಯನ್ನು ಮಾಡುತ್ತಿದೆ. ಅನೇಕ ದಾನಿಗಳು ನಮಗೆ ನೆರವಾಗಿದ್ದಾರೆ. ನಾವು ಕೊಡುವ ಕೃಷ್ಣಪ್ರಸಾದ ಕೆಲವು ದಿನಗಳು ಮಾತ್ರ ಉಪಯೋಗವಾಗಬಹುದು, ನಾವು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಮೈಸೂರಿನ ಆಶಾ ಕಿರಣ ಆಸ್ಪತ್ರೆಯೊಂದಿಗೆ ಸೇರಿ ನರಸೀಪುರದ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಭಿರಗಳನ್ನು ನಡೆಸಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಲಾಗುವುದು ಹಾಗೂ ಪೌರಕಾರ್ಮಿಕರು ನಗರದ ಶುಚಿತ್ವವನ್ನು ಕಾಪಾಡುವವರು, ನಿಮ್ಮ ನಿಮ್ಮ ಮನೆಯ ಸುತ್ತ ಮುತ್ತ ಪರಿಸರವನ್ನು ಶುದ್ದವಾಗಿಟ್ಟುಕೊಳ್ಳಬೇಕೆಂದು ಕರೆ ನೀಡಿದರು.
ಕೋವಿಡ್‍ನ ಈ ವಿಷಮ ಪರಿಸ್ಥಿತಿ ನಗರದಿಂದ ಗ್ರಾಮಾಂತರ ಪ್ರದೇಶಗಳಿಗೆ ಹರಡಿದ್ದು ಲಾಕ್‍ಡೌನ್ ಜಾರಿಗೊಂಡ ನಂತರ ಟಿ ನರಸೀಪುರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಹಿಂದುಳಿದ ವರ್ಗಗಗಳ ಜನರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ದಲಿತರು, ಬಡವರು ಅರ್ಚಕರು, ದೋಣಿ ಹಾಯಿಸುವವರು, ತರಕಾರಿ ಮಾರುವವರು, ಇವರುಗಳ ಕಷ್ಟಕ್ಕೆ ತಿರುಮಕೂಡಲಿನ ಸೋಸಲೆ ಶ್ರೀ ವ್ಯಾಸರಾಜ ಮಠದ ವತಿಯಿಂದ ಸುಮಾರು 1000 ಜನರಿಗೆ 10ಕೆಜಿ ಅಕ್ಕಿ, ಬೇಳೆ 2ಕೆಜಿ, ಗೋದಿಹಿಟ್ಟು 1ಕೆಜಿ ರಾಗಿಹಿಟ್ಟು1ಕೆಜಿ, ಬೆಲ್ಲ 1ಕೆಜಿ, ಸಕ್ಕರೆ 1ಕೆಜಿ, ರವೆ 1ಕೆಜಿ, ಆಲೂಗೆಡ್ಡೆ 1ಕಜಿ, ಎಣ್ಣೆ 1ಲೀ, ಸಾಂಬಾರ್ ಪುಡಿ 250ಗ್ರಾಂ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಚೀಲಗಳನ್ನು ನೀಡುವುದರ ಮೂಲಕ ಸ್ಫಂದಿಸಿದೆ.
ಕಾರ್ಯಕ್ರಮದಲ್ಲಿ ಶ್ರೀವ್ಯಾಸತೀರ್ಥ ವಿದ್ಯಾಪೀಠದ ಕಾರ್ಯದರ್ಶಿಗಳಾದ ಡಾ. ಡಿ.ಪಿ ಮಧುಸೂದನ ಚಾರ್, ಶಿರಸ್ತೆದಾರ್ ಪ್ರಭು, ಟಿ ನರಸೀಪುರದ ಇನ್‍ಸ್ಪೆಕ್ಟರ್ ಕೃಷ್ಣಪ್ಪ, ಶ್ರೀಮಠದ ಮುಖ್ಯಸ್ತರಾದ ಆಶಾಕಿರಣ ಗುರುರಾಜ್, ಮುರಳಿಧರ್, ರಾಯರ ಹುಂಡಿ ಆನಂದ, ಶ್ರೀಗಳವರ ಆಪ್ತ ಸಹಾಯಕರಾದ ಅಭಿಜಿತ್ ಎಸ್ ರಾವ್ ತಿರುಮಕೂಡಲು ಮಠದ ವ್ಯವಸ್ಥಾಪಕರಾದ ಜಿ.ಶ್ರೀಧರ್, ಕೆ.ಪಿ ಮಧುಸೂದನ, ಮೈಸೂರು ಮಠದ ವ್ಯವಸ್ಥಾಪಕರಾದ ವಾಸು ಅವರು ಉಪಸ್ಥಿತರಿದ್ದರು ಎಂದು ಕೆ.ಪಿ. ಮಧಸೂದನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.