ಯೋಗ ಸಾಧನೆಯಿಂದ ಆರೋಗ್ಯ ಆಯುಷ್ಯ ವೃದ್ಧಿ: ಶ್ರೀ ರಂಭಾಪುರಿ ಜಗದ್ಗುರು

ರಂಭಾಪುರಿ ಪೀಠ (ಬಾಳೆಹೊನ್ನೂರು): ಮಾನವ ಜೀವನ ಯಾಂತ್ರಿಕವಾಗಿದ್ದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಕ್ರಮವರಿತು ನಿತ್ಯ ಯೋಗ ಸಾಧನೆ ಮಾಡಿದರೆ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತವೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ ನೆರವೇರಿಸಿ ಆಶೀರ್ವಚನವಿತ್ತರು.


ಅಧ್ಯಾತ್ಮ ಜೀವನ ಸಾಧನೆಗೆ ಯೋಗದ ಕೊಡುಗೆ ದೊಡ್ಡದು. ದೈಹಿಕ ಮತ್ತು ಮಾನಸಿಕ ಸ್ವಾಸ್ಥö್ಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಯೋಗ ಸಾಧನೆಯಿಂದ ಮನ: ಶಾಂತಿ ಮತ್ತು ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಮಾನಸಿಕ ಒತ್ತಡ, ತಾಮಸ ಆಹಾರ ಸೇವನೆ, ದುಶ್ಚಟ ಮತ್ತು ಪಾಶ್ಚಾತ್ಯ ಜೀವನ ಶೈಲಿಯಿಂದಾಗಿ ಮನುಷ್ಯನ ಶರೀರ ರೋಗದ ಗೂಡಾಗಿದೆ. ಯೋಗ ಸಾಧನೆಯಿಂದ ನವ ಚೈತನ್ಯದೊಂದಿಗೆ ಸದೃಢ ಶರೀರ ಮತ್ತು ಉಸಿರಾಟದ ಸಮತೋಲನ ಪಡೆಯಲು ಸಾಧ್ಯವಾಗುತ್ತದೆ. ಯೋಗ ಸಾಧನೆ ಮೂಲಕ ದೈವತ್ವದೆಡೆಗೆ ಸಾಗಲು ಪ್ರೇರೆಪಿಸುತ್ತದೆ. ಪೂರ್ವದ ಋಷಿ ಮುನಿಗಳು ಯೋಗ ಸಾಧನೆಯಿಂದಾಗಿ ಸುದೀರ್ಘವಾಗಿ ಬಾಳುವ ನೆಲೆಯನ್ನು ಅರಿತವರಾಗಿದ್ದರೆಂಬುದನ್ನು ಮರೆಯುವಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಪ್ರಾಧಾನ್ಯತೆ ತಂದು ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಯೋಗ ದಿನಾಚರಣೆ ನಿಮಿತ್ಯ ಒಂದೇ ದಿನ ಯೋಗಾಭ್ಯಾಸ ಮಾಡದೇ ದಿನ ನಿತ್ಯ ಯೋಗ ಸಾಧನೆಯಲ್ಲಿ ತೊಡಗಿಸಿಕೊಂಡರೆ ಎಲ್ಲ ರೋಗ ರುಜಿನಗಳು ದೂರವಾಗಿ ಮಾನಸಿಕ ಸ್ಥಿರತೆ ನೆಮ್ಮದಿ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂಶಯ ಇಲ್ಲವೆಂದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles