ದಾಸಶ್ರೇಷ್ಠ ಶ್ರೀ ಪುರಂದರದಾಸರು- ಹರಿಕಥೆ

ದಾಸವಾಣಿ ಫೇಸ್ಬುಕ್ ಸಮೂಹದ ವತಿಯಿಂದ ಜುಲೈ 10 ಶನಿವಾರ ಸಂಜೆ 6 ಗಂಟೆಗೆ ಕು|.ತುಷಾರ ಆಚಾರ್ಯ ಅವರಿಂದ “ದಾಸಶ್ರೇಷ್ಠ ಶ್ರೀ ಪುರಂದರದಾಸರು” ಹರಿಕಥೆ ಕಾರ್ಯಕ್ರಮ ಏರ್ಪಡಿಸಿದೆ.

ಈ ಕಾರ್ಯಕ್ರಮವನ್ನು ದಾಸವಾಣಿ ಫೇಸ್ಬುಕ್ ಗ್ರೂಪ್ ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಕಲಾವಿದರ ಸಂಕ್ಷಿಪ್ತ ಪರಿಚಯ : ಉಡುಪಿಯ ಲಕ್ಷ್ಮೀಶ ಆಚಾರ್ಯ ಮತ್ತು ಪ್ರೇಮಾ ಎಲ್. ಆಚಾರ್ಯ ಅವರ ಜೇಷ್ಠ ಪುತ್ರಿಯಾದ ಕುಮಾರಿ ತುಷಾರ ಚಿಕ್ಕವಯಸ್ಸಿನಲ್ಲೇ ಹರಿಕಥೆಯಲ್ಲಿ ಆಸಕ್ತಿ ಹೊಂದಿದ್ದನ್ನು ಗಮನಿಸಿದ ತಂದೆ-ತಾಯಿಯವರು, ಹರಿಕಥಾ ಪ್ರವೀಣೆ ಶೋಭಾ ನಾಯ್ಡು ಅವರಲ್ಲಿ ಅಭ್ಯಾಸ ಮಾಡಿಸಿದರು.

ಪ್ರಸ್ತುತ ಓದಿನಲ್ಲಿ ಎಂಬಿಬಿಎಸ್ ಮುಗಿಸಿ ಡಾ|| ಪದವಿ ಪಡೆದಿರುವ ತುಷಾರ ವೈದ್ಯಕೀಯ ಕ್ಷೇತ್ರದಲ್ಲೂ ಹಾಗೂ ಹರಿಕಥಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಸರಿದೂಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಪ್ರಶಸ್ತಿಗಳು: ವಿಶ್ವೇಶ್ವರಯ್ಯ ಪ್ರತಿಷ್ಠಾನದ ವತಿಯಿಂದ “ಭಾರತ ವಿಕಾಸ ರತ್ನ”, ರಾಷ್ಟ್ರೀಯ ಪ್ರಶಸ್ತಿ, ಶ್ರೀ ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್ ವತಿಯಿಂದ “ಯುವ ಪುರಂದರ” ಪ್ರಶಸ್ತಿ, ಶ್ರೀ ಜ್ಞಾನ ಮಂದಿರ ವಿದ್ಯಾ ಹಾಗೂ ಸಂಸ್ಕೃತಿ ಟ್ರಸ್ಟ್ ವತಿಯಿಂದ “ಜ್ಞಾನಶ್ರೀ” ಪ್ರಶಸ್ತಿ.

ಸನ್ಮಾನ: ಕನ್ನಡ ಮತ್ತು ಸಂಸ್ಕೃತಿ ಅಕಾಡೆಮಿ, ಕೀರ್ತನ ಕಲಾ ಪರಿಷತ್ತು, ಬಾಲಭವನ, ಕನ್ನಡ ಸಂಗೀತ ನೃತ್ಯ ಅಕಾಡೆಮಿ, ಯುವ ವಿಪ್ರ ವೇದಿಕೆ ಮುಂತಾದ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಕಾರ್ಯಕ್ರಮಗಳು: ಕು|ತುಷಾರಾ ಆಚಾರ್ಯ ಅವರು ಇದುವರೆಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles