*ಗೀತಕೃಷ್ಣ
ದುಡ್ಡಿನಿಂದ ಆಭರಣದಿಂದ ನಿನ್ನ ಗೆಲ್ಲಲಾರೆ , ಐಶ್ವರ್ಯ ವೈಭೋಗಗಳಿಂದ ನಿನ್ನ ಕೊಳ್ಳಲಾರೆ ... ರೂಪಕ್ಕೆ , ಸರಸಕ್ಕೆ ಸೋಲುವವನು ನೀನಲ್ಲ ನಿನ್ನ ಒಲಿಸಲು ಓಲೈಸಲು ನೂರಾರು ಮಾರ್ಗಗಳಿಲ್ಲ ... ಹೃದಯದರ್ಪಣೆಗೆ ಸೋಲುವವನು ನೀನು , ಹೃದಯದ ಸೆರೆಮನೆಯಲ್ಲಿ ನಗು ನಗುತ್ತಾ ನಿಲ್ಲುವವನು ನೀನು ... ಭಕ್ತಿ ಎನ್ನುವ ಸುಲಭವಾದ ಸಾಧನಕ್ಕೆ ಸೋಲುವವನು ನೀನು , ಭಕ್ತಿಗೆ ಸೋತು ವಶನಾಗುವವನು ನೀನು ... ನಿನ್ನ ಒಲಿಸುವುದು ಅತೀ ಸುಲಭವಾಗಿರುವಾಗ ಅನ್ಯ ಚಿಂತೆಗಳು ನನಗೇತಕೆ , ನೀನನ್ನವನೆಂಬ ಭಾವವೊಂದೇ ಸಾಕು ಅದೇ ನಾ ನಿನಗೆ ನೀಡುವ ಪ್ರೇಮದ ಕಾಣಿಕೆ...