ಬೆಳಗಾವಿಯ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಭಕ್ತಿ ಗೀತೆಗಳನ್ನು ರಚಿಸುವ ಸ್ಪರ್ಧೆ ಹಮ್ಮಿಕೊಂಡಿದೆ.
★ ಸ್ವರಚಿತ ಭಕ್ತಿಗೀತೆಗಳನ್ನು ಕಳುಹಿಸಲು ಕೊನೆಯ ದಿನಾಂಕ 30 ಆಗಸ್ಟ್ 2021 .
ಸ್ಪರ್ಧೆಯಲ್ಲಿ ಭಾಗವಹಿಸುವವರು
◆ ಭಕ್ತಿಗೀತೆಗಳು ನಿಮ್ಮ ಪರಿಸರದಲ್ಲಿ ಆಗಿಹೋದ ವಿಭೂತಿ ಪುರುಷರ ಶರಣ- ಸಂತ, ಮಹಾಂತರ, ಸಿದ್ಧ-ಸಾಧುಗಳ ಮಹಿಮೆಯನ್ನು ಸಾರುವಂತಹ ಭಕ್ತಿ ಗೀತೆಗಳು ರಚಿಸಿ ಕಳಿಸುವುದು.
★ ಭಕ್ತಿ ಗೀತೆಗಳು ಚರಣ, ಪಲ್ಲವಿ, ಆದಿ ಮಧ್ಯ ಮತ್ತು ಅಂತ್ಯ ಪ್ರಾಸ ಇವುಗಳಲ್ಲಿ ಯಾವುದಾದರೂ ಪ್ರಾಸವನ್ನು ಇಟ್ಟುಕೊಂಡು ಗೀತೆಯನ್ನು ರಚಿಸಿರಬೇಕು
★ ಭಕ್ತಿಗೀತೆಗಳು ಕನಿಷ್ಠ 16 ಸಾಲುಗಳಿಂದ ಗರಿಷ್ಠ 25 ಸಾಲುಗಳಿಂದ ಕೂಡಿರಬೇಕು ಒಬ್ಬರು ಎಷ್ಟು ಬೇಕಾದಷ್ಟು ಗೀತೆಗಳನ್ನು ಕಳಿಸಿ ಕೊಡಬಹುದು
★ ಸ್ಪರ್ಧೆಗಳಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಕ್ರಮವಾಗಿ 3-2-1 ಪುಸ್ತಕಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಕಳಿಸಿಕೊಡಲಾಗುವುದು.
★ ಆಯ್ದ ಭಕ್ತಿಗೀತೆಗಳನ್ನು ಉದ್ದೇಶಿತ ಭಕ್ತಿಗೀತೆ ಸಂಕಲನದಲ್ಲಿ ಪ್ರಕಟಿಸಲಾಗುವುದು ಪ್ರಕಟಿತ ಕವಿಗಳಿಗೆ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿ ಪುಸ್ತಕ ಪ್ರತಿ ನೀಡಲಾಗುವುದು.
★ ಬಹುಮಾನಕ್ಕೆ ಮತ್ತು ಪುಸ್ತಕದಲ್ಲಿ ಪ್ರಕಟಣೆಗೆ ಯೋಗ್ಯವಾದ ಗೀತೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಆಯ್ಕೆ ಸಮಿತಿ ರಚಿಸಲಾಗಿರುತ್ತದೆ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ.
★ ಭಕ್ತಿಗೀತೆಗಳು [email protected] / [email protected] ಈ ಇಮೇಲಿಗೆ ಮಾತ್ರ ಕಳಿಸಿಕೊಡಬೇಕು.
* ಗೀತೆಗಳು ಸಂದೇಶ ರೂಪದಲ್ಲಿ ಟೈಪ್ ಮಾಡಿರಬೇಕು