ಬದುಕಿನಲ್ಲಿ ಮಾನ ಸಮ್ಮಾನಗಳು ಸ್ಥಿರವಲ್ಲ: ಸದ್ಗುರು ಮುಕ್ತಾನಂದರು

ಸಿಂದೋಗಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ನಡೆದ ಆನ್‌ಲೈನ್ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವತ ಅಧ್ಯಾಯದ ಕುರಿತು ಸದ್ಗುರು ಮುಕ್ತಾನಂದ ಪೂಜ್ಯರು ಪ್ರವಚನ ನೀಡಿದರು. ಅದರ ಪೂರ್ಣಪಾಠ ಇಲ್ಲಿದೆ.

ಸವದತ್ತಿಃ “ಅಕ್ರೂರನು ಕಂಸನ ಆಜ್ಞೆಯಂತೆ ಬಂಗಾರದ ರಥವನ್ನೇರಿ ಮಥುರೆಯಿಂದ ನಂದಗೋಕುಲಕ್ಕೆ ಪ್ರಯಾಣ ಬೆಳೆಸಿದನು. ಅವನು ಶ್ರೀ ಕೃಷ್ಣನ ಭಕ್ತನಾಗಿದ್ದನು. ಪ್ರಯಾಣ ಮಾಡುತ್ತ ದಾರಿಯುದ್ದಕ್ಕೂ ಕೃಷ್ಣನ ಆಲೋಚನೆಯಲ್ಲಿ ಸಾಗಿದನು. ‘ನಾನು ಎಂತಹ ಪುಣ್ಯವನ್ನು ಮಾಡಿರಬೇಕು. ಎಂತಹ ತೀವ್ರವಾದ ತಪಸ್ಸನ್ನಾಚರಿಸಿರಬೇಕು. ಈ ದಿನ ನನಗೆ ಕೃಷ್ಣನ ದರ್ಶನವಾಗುವುದು.ಅಧಮನಾದ ನನಗೂ ಅಚ್ಯುತ ದರ್ಶನ ಆಗಿಯೇ ಆಗುವುದು. ಕರ್ಮವಶದಿಂದ ಕಾಲನದಿಯ ಸೆಳೆತಕ್ಕೆ ಸಿಕ್ಕಿದರೂ ಒಬ್ಬನಲ್ಲದೇ ಒಬ್ಬನು ದಡವನ್ನು ಸೇರಿಸಿಯಾನೆ ಎನ್ನುವಂತೆ ನನ್ನ ಸಕಲ ಅಮಂಗಳವೂ ನಾಶವಾಯಿತು. ನನ್ನ ಜನ್ಮ ಸಾಥಕವಾಯಿತು. ವಿಧಿ ನಿಯಮ ಕಂಸನ ಪಾಪದ ಕೊಡ ತುಂಬಿದ0ತೆ ಕಾಣುತ್ತಿದೆ. ಅವನ ಸಾವು ತನ್ನತ್ತ ತಾನೇ ಸೆಳೆಯುವಂತಾಗಿದೆ.

ಕೃಷ್ಣನ ಪರಮಭಕ್ತ ಅಕ್ರೂರನು ಕೃಷ್ಣ ದರ್ಶನದ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತ ದಾರಿಯನ್ನು ಸಾಗುತ್ತಾನೆ. ಅದೇ ವೇಳೆ ಶ್ರೀ ಕೃಷ್ಣನು ಗೋಕುಲದಲ್ಲಿ ಗೋವುಗಳ ಹಾಲು ಕರೆಯಲು ಸಾಗಿ ಹೋಗಿರುವ ಪಾದಪಥಗಳನ್ನು ಕಾಣುತ್ತಾನೆ. ಇಂದು ನನಗೆ ಸುಪ್ರಭಾತವಾಯಿತು. ರಥದಿಂದ ಇಳಿದೊಡನೆ ಶ್ರೀ ಕೃಷ್ಣನು ನಡೆದು ಹೋದ ಪಾದಗಳ ಗುರುತನ್ನು ಕಾಣುತ್ತ ಅತ್ತ ಕಡೆಗೆ ಹೆಜ್ಜೆ ಹಾಕುತ್ತ ‘ ಶ್ರೀ ಕೃಷ್ಣನನ್ನು ಗುರುತಿಸಬಹುದು. ಅವನ ಪಾದಕ್ಕೆರಗಿದಾಗ ತನ್ನ ತೋಳುಗಳಿಂದ ನನ್ನನ್ನು ಸ್ಪರ್ಶಿಸಿ ಅಜ್ಜ ಎಂದು ಕರೆಯಬಹುದು’ ಎಂದೆಲ್ಲ ಕನಸು ಕಾಣುತ್ತ ಧಾವಿಸುವನು.

ಶ್ರೀ ಕೃಷ್ಣನನ್ನು ಕಂಡೊಡನೆ ಅವನ ಪಾದಕ್ಕೆರಗುವನು ಎಂಬ ದೃಶ್ಯವನ್ನು ವಿವರಿಸುತ್ತ ನಾವೂ ಕೂಡ ಪುಣ್ಯಭೂಮಿಯ ಸ್ಪರ್ಶಕ್ಕೆ ಹೋದರೆ ಅಲ್ಲಿ ದೂರದಿಂದಲೇ ಆ ಪುಣ್ಯಭೂಮಿಯ ಪವಿತ್ರತೆ ನಮ್ಮನ್ನೂ ಕೂಡ ಆಯಸ್ಕಾಂತದ0ತೆ ಆಕರ್ಷಿಸುವುದು ಎಂಬುದನ್ನು ಶ್ರೀಮಠದ ಭಕ್ತರು ಗಣೇಶಪುರಿಗೆ ಪ್ರಯಾಣ ಬೆಳೆಸಿದ ಹಿಂದಿನ ಘಟನೆಯನ್ನು ಈ ಸಂದರ್ಭದಲ್ಲಿ ನೆನಪಿಸಿದರು.

ಶಿಶುನಾಳ ಷರೀಫರು ಗುರು ಗೋವಿಂದಭಟ್ಟರ ದರ್ಶನಕ್ಕೆ ಹೋದಾಗ ಆ ಪುಣ್ಯ ಭೂಮಿಯನ್ನು ಸಮೀಪಿಸುತ್ತಲೇ ನಮಸ್ಕಾರಗೈದು ಗುರುವಿನ ದರ್ಶನಕ್ಕೆ ಹೋಗಿರುವ ಘಟನೆಯನ್ನು ಈ ಸಂದರ್ಭದಲ್ಲಿ ನಿದರ್ಶನ ನೀಡಿದರು.
ನಾವು ಎಲ್ಲೆಲ್ಲಿ ಹೋಗುತ್ತೇವೆಯೋ ಅಲ್ಲಲ್ಲಿನ ಭೂಮಿಯ ವಾತಾವರಣದ ಆಕರ್ಷಣೆಗೆ ನಾವು ಒಳಗಾಗುತ್ತೇವೆ. ಅಂಥ ಸ್ಥಳ ಆಯಸ್ಕಾಂತದ0ತೆ ನಮ್ಮನ್ನು ಸೆಳೆಯುವುದು. ನಮ್ಮ ಬದುಕಿನಲ್ಲಿ ಮಾನ ಸಮ್ಮಾನಗಳು ಸ್ಥಿರವಲ್ಲ. ಆದರೆ ಸತ್ಸಂಗದಲ್ಲಿ ಬದುಕಿ ಸತ್ಸಂಗಿಗಳಾದರೆ ದೇವರ ಕೃಪೆಯೊಂದೇ ಮಾನ ಸಮ್ಮಾನಕ್ಕಿಂತಲೂ ಮಿಗಿಲಾದುದು ಎಂಬುದನ್ನು ಅಕ್ರೂರನು ಶ್ರೀ ಕೃಷ್ಣನನ್ನು ಕಾಣಲು ಬರುವಾಗ ಅವನ ಮನದಲ್ಲಿ ಮೂಡುವ ಆಲೋಚನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸತ್ಸಂಗಿಗಳಾದ ಯಶವಂತ ಗೌಡರ, ಬಸವರಾಜ ಹಲಗತ್ತಿ, ಕಾಶಪ್ಪ ನಲವಡೆ, ಪಂಚಪ್ಪ ಹನಸಿ, ಚನಬಸು ನಲವಡೆ, ವೈ.ಬಿ.ಕಡಕೋಳ, ಬಿ.ಬಿ.ಹುಲಿಗೊಪ್ಪ, ವೀರಣ್ಣ ಕೊಳಕಿ ಮುಖಾಮುಖಿ ಸತ್ಸಂಗದಲ್ಲಿ ಉಪಸ್ಥಿತರಿದ್ದರೆ ಗೂಗಲ್ ಮೀಟ್ ಸತ್ಸಂಗದಲ್ಲಿ ಚನ್ನಮ್ಮ ಹಲಗತ್ತಿ, ಯಲವ್ವ ಕುಸುಗಲ್(ಕಂಕಣವಾಡಿ), ಸವಿತಕ್ಕ ಕೆಂದೂರ, ಪವಿತ್ರ ಹನಸಿ, ಬಸಮ್ಮ ಬಿಕ್ಕನಗೌಡರ, ಪಾರ್ವತಿ(ಕಮಲಕ್ಕ) ಗುಂಡ್ಲೂರ, ಹನುಮವ್ವ ಬಿಕ್ಕನಗೌಡರ, ಚನ್ನವ್ವ ಬಿಕ್ಕನಗೌಡರ, ಪಂಚವ್ವ ಹನಸಿ, ಶಾಂತಕ್ಕ ತಿಗಡಿ, ಬಸಮ್ಮ ನಲವಡೆಅನುರಾಧ ಬೆಟಗೇರಿ ಶಂಕರೆವ್ವ ಚೌಡಾಪೂರ, ಕವಿತಾ ಶಲ್ಲೇದ, ಲತಾ ಗೌಡರ, ರಾಜಶ್ರೀ ಜವಳಿ, ಶಿವಾನಂದ ವನಹಳ್ಳಿ, ವಿಜಯಲಕ್ಷಿö್ಮÃ ಬಂಡಿ, ರಜನಿ ನಾಯ್ಕ, ಗೌರಿ ಜಾವೂರ, ಜಯಶ್ರೀ ಕುಲಕರ್ಣಿ, ಅನುಪಮಾ ಬಡಿಗೇರ, ಸೇರಿದಂತೆ 30 ಕ್ಕೂ ಹೆಚ್ಚು ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಚನಬಸು ನಲವಡೆ ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಿಕ್ಷಕ ವೀರಣ್ಣ ಕೊಳಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ವರದಿ: ವೈ,ಬಿ.ಕಡಕೋಳ ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ

Related Articles

ಪ್ರತಿಕ್ರಿಯೆ ನೀಡಿ

Latest Articles