ಬೆಂಗಳೂರು: ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ಗುರುರಾಜ ಅಸೋಸಿಯೇಶನ್ ಎನ್ ಆರ್ ಕಾಲೋನಿ, ಇವುಗಳ ಸಂಯುಕ್ತಾಶ್ರಯದಲ್ಲಿ ಎನ್ ಆರ್ ಕಾಲೋನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 3ರಿಂದ 6ರವರೆಗೆ ಪ್ರತಿದಿನ ಸಂಜೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಭಜನೆ : ಆಗಸ್ಟ್ 3, ಸಂಜೆ 6 ಗಂಟೆಗೆ ಹೊಸಕೆರೆಹಳ್ಳಿಯ ಅಂಭ್ರಣೀಶ ಭಜನಾ ಮಂಡಳಿಯವರಿಂದ.
ಆಗಸ್ಟ್ 4, ಸಂಜೆ 6 ಗಂಟೆಗೆ ಶ್ರೀನಿವಾಸನಗರದ ಬೃಂದಾವನಿ ಭಕ್ತವೃಂದದವರಿಂದ.
ಆಗಸ್ಟ್ 5, ಸಂಜೆ 6 ಗಂಟೆಗೆ ಚಾಮರಾಜಪೇಟೆಯ ಶ್ರೀರಾಮ ಭಜನಾ ಮಂಡಳಿಯವರಿಂದ.
ಪ್ರವಚನ: ಆಗಸ್ಟ್ 3 ರಿಂದ 5ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಮ||ಶಾ||ಸಂ|| ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ “ಗುರು-ಹಿರಿಯರ ಮಹಿಮೆ” ವಿಷಯವಾಗಿ ಪ್ರವಚನ.
ಹರಿನಾಮ ಸಂಕೀರ್ತನೆ : ಆಗಸ್ಟ್ 6, ಸಂಜೆ 6-30ಕ್ಕೆ ಸ್ರೋತಸ್ವಿನಿ ಹೊಸಹಳ್ಳಿ ಇವರಿಂದ “ಹರಿನಾಮ ಸಂಕೀರ್ತನೆ”. ವಾದ್ಯ ಸಹಕಾರ: ದುಶ್ಯಂತ್ (ಕೀ-ಬೋರ್ಡ್), ಸುಧನ್ವ ಪಾಂಡುರಂಗಿ (ತಬಲಾ).