ಮೈಸೂರು: ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಆಗಸ್ಟ್ 9 ರಿಂದ 13ರವರೆಗೆ ‘ಭಕ್ತಿ: ಬಹು ಅಭಿವ್ಯಕ್ತಿ’ 2ನೇ ವಾರದ ಆನ್ಲೈನ್ ಉಪನ್ಯಾಸ ಸರಣಿ ಆಯೋಜಿಸಲಾಗಿದೆ. ಆ.9 ರಂದು ಡಾ.ಬಸವರಾಜ ಕೋಡಗುಂಟಿ ‘ಬರಹವಿಲ್ಲದ ಬಕುತಿಯ ನಡಿಗೆ’ ಕುರಿತು ಮಾತನಾಡಲಿದ್ದಾರೆ. ಆ.10 ರಂದು ಡಾ.ಮೀನಾಕ್ಷಿ ಬಾಳಿ ಅವರು ‘ತತ್ವಪದ ಲೋಕದಲ್ಲೊಂದು ಸುತ್ತು’ ಕುರಿತು, ಆ.ಆಗಸ್ಟ್ ಪ್ರೊ.ರಹಮತ್ ತರೀಕೆರೆ ಅವರು ‘ಸೂಫಿ ಪಂತದ ಪ್ರಮುಖ ತಾತ್ವಿಕ ನೆಲೆಗಳು’ ಕುರಿತು ಮಾತನಾಡಲಿದ್ದಾರೆ. ಆ.12 ರಂದು ಪ್ರೊ.ಪಾದೇಕಲ್ಲು ವಿಷ್ಣುಭಟ್ಟ ಅವರು ‘ಕನ್ನಡ ಚಂಪೂ ಸಾಹಿತ್ಯ; ಭಕ್ತಿಯ ಅಭಿವ್ಯಕ್ತಿ ಚಿತ್ರಗಳು’ ಕುರಿತು, ಆ.13 ರಂದು ನಿವೃತ್ತ ಪ್ರಾಧ್ಯಾಪಕ ಎನ್.ಎಂ.ತಳವಾರ ಅವರು ‘ವಚನ; ಭಕ್ತಿಯ ಪರಿಕಲ್ಪನೆ’ ಕುರಿತು ಮಾತನಾಡಲಿದ್ದಾರೆ. ಸಮಯ: ಮಧ್ಯಾಹ್ನ 3.30ರಿಂದ 5 ಈ ಕಾರ್ಯಕ್ರಮವನ್ನು ಯೂಟ್ಯೂಬ್ ಲಿಂಕ್ https://www.youtube.com/c/CIILMysore1 ಬಳಸಿ ವೀಕ್ಷಿಸಬಹುದು.