*ಡಾ. ಪರ್ಲತ್ತಾಯ. ವಿ. ಸುದರ್ಶನ ಭಾರತೀಯ
(ರಾಗ: ಹಂಸಾನಂದಿ ತಾಳ: ಆದಿ)
ಕಂಡೆನಾ ಗುರುಗಳ ಔದಾರ್ಯವನು..
ನಿಂದೆ ಸದ್ಭಕ್ತಿಯಲಿ ಭಾವೋನ್ಮಾದದಲಿ.. ||ಪ||
ಇಂದು ನಿನ್ನೆಯ ಬಂಧುರವಿದಲ್ಲಾ…
ನಾಲ್ಕು ದಶಕಗಳ ಸಾರ ಸಂಧಿತಲ್ಲಾ..
ನಾರು ನಾನೆಂದರಿತೆ, ಹೂವಿನ ಸಂಗ ಬೆರೆತೆ (೨)
ಸೂರು ಸೂರಿಗೆ ಅಲೆದು ನೀರಡಿಕೆ ನಿಂತಿತೇ.. ||ಪ||
ಮೂರು ತಲೆಮಾರಿಗೂ ಹರಸಿದಾ ಗುರುವು (೩)
ಆರು ವೈರಿಗಳ ತೊರೆಸಿದಾ ಗುರುವು
ಊರು ಕೇರಿಯಲಿ ಮೆರೆಸಿದಾ ಗುರುವು (೨)
ಯಾರು ನಾನೆಂದು ತಿಳಿಸಿದಾ ಗುರುವು.. ||ಪ||
ಹರಿಯ ಒಲುಮೆ ದೊರೆಯಲು ಮನುಜಾ
ಗುರು ಕೃಪಾ ಚಿಲುಮೆಯಲಿ ಮೀಯಲೇಬೇಕು
ಹರಿ-ವಾಯು-ಗುರುಗಳ ಸೇವೆಗೆ ಸೋಕಿಸೋ ಸದಾ
ವೇಂಕಟ ವಿಠ್ಠಲಾ ಸುಗುಣದಾಸ.