ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಪಂಚರಾತ್ರೋತ್ಸವ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಹಾಗೂ ಕರ್ನಾಟಕ ಸರ್ಕಾರದ ಕೋವಿಡ್ 19ರ ನಿಯಮಾವಳಿಯಂತೆ ಶ್ರೀ ಮಠದಲ್ಲಿ ಭಕ್ತರ ಅನುಕೂಲಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಶ್ರೀಗುರುರಾಯರ 350ನೇ ಆರಾಧನಾ ಪಂಚರಾತ್ರೋತ್ಸವದ ಕಾರ್ಯ ಕ್ರಮವನ್ನು ಆಗಸ್ಟ್ 22 ರಂದು ಸಂಜೆ 6-30ಕ್ಕೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರು ಹಾಗೂ ಕೃಷ್ಣಗುಂಡಾಚಾರ್ಯರು ಉದ್ಘಾಟಿಸಲಿದ್ದಾರೆ ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದರು.

ಶ್ರೀ ಮಠಕ್ಕೆ ಆಗಮಿಸುವ ಭಕ್ತರು ಮುಖ ಕವಚ ಮಾಸ್ಕ್ ಹಾಕಿರಬೇಕು ಹಾಗೂ ದ್ವಾರದ ಮುಂಭಾಗ ದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಿ ಕೊಳ್ಳಲು ಪ್ರಕಾರದಲ್ಲಿ ಸ್ಕ್ವಯರ್ ಬಾಕ್ಸ್ ಹಾಕಲಾಗಿದೆ.

ಶ್ರೀಗುರುರಾಯರ ಆರಾಧನಾ ಮಹೋತ್ಸವಕ್ಕಾಗಿ ಸೇವೆಯನ್ನು ಮಾಡಿಸುವಂತಹ ಭಕ್ತರು ಶ್ರೀಮಠದ ಈ ವಾಟ್ಸಪ್ 9449133929 ನಂಬರ್ ಕ್ಯಾಟ್ ಲಾಗ್ ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು ಈ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀಮಠದ “nsrsmutt Jayanagar” ಫೇಸ್ಬುಕ್ ಲೈವ್ ನಲ್ಲಿ ಹಾಗೂ “harivara”ಎಂಬ ಫೇಸ್ಬುಕ್ ಲೈವ್ ನಲ್ಲಿ ವೀಕ್ಷಿಸಬಹುದು ಎಂದು ಶ್ರೀಮಠದ ವ್ಯವಸ್ಥಾಪಕ ಆರ್ ಕೆ ವಾದೀಂದ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ – 08022443962- 9945429129- 9449133929

Related Articles

ಪ್ರತಿಕ್ರಿಯೆ ನೀಡಿ

Latest Articles