ಏಕಕಾಲಕ್ಕೆ ಕನ್ನಡದಲ್ಲಿಯೂ ನಿರ್ಮಾಣಗೊಳ್ಳಲಿರುವ ‘ಏಕಚಕ್ರಮ್’ ಚಲನಚಿತ್ರವು, ಭೂತ-ವರ್ತಮಾನ ಮತ್ತು ಭವಿಷ್ಯದ ಸನ್ನಿವೇಶಗಳೊಂದಿಗೆ ತಳುಕು ಹಾಕಿಕೊಂಡಿರುವುದೊಂದು ವಿಶೇಷ.
ಸರ್ವಮಾನ್ಯ ಡಿ.ವಿ.ಜಿ. ಅವರ ಸಮಕಾಲೀನರಾಗಿದ್ದ ಮಹಾಮಹೋಪಾಧ್ಯಾಯ ದಿವಂಗತ ವಿದ್ವಾನ್ ಎನ್. ರಂಗನಾಥ್ ಶರ್ಮಾಜಿಯವರನ್ನು ಭಾರತದ ಪ್ರಬುದ್ಧ ವಿದ್ವಾಂಸರ ನಡುವೆ ಗುರುತಿಸಲಾಗುತ್ತದೆ. ಶ್ರೀಯುತರ “ಕಾವ್ಯೋದ್ಯಾನಮ್” ಪ್ರಚಲಿತ ಸಾಹಿತ್ಯದ ಪ್ರಮುಖ ಕೃತಿಗಳಲ್ಲೊಂದು.
“ಏಕಚಕ್ರಮ್” ಚತುರಂಕಗಳ ಲಘುರೂಪಕವಾಗಿದ್ದು, ವಿದ್ವಾನ್ ಶರ್ಮಾಜಿ ಅವರ ಮಹತ್ವದ ರಚನೆ ಎನಿಸಿದೆ. ದ್ವಾಪರಯುಗದ ಭೀಮ ಮತ್ತು ಬಕಾಸುರನ ನಡುವಣ ಸಂವಾದ ಸರಣಿಯ ಸಾರಸಂಗ್ರಹ. ಬಕಾಸುರ ವಧೆ, ಶಿಷ್ಟ ರಕ್ಷಣದ ಸಾರ್ವಕಾಲಿಕ ಸವಾಲನ್ನೂ ಉದ್ದೀಪಿಸುತ್ತದೆ.
‘ಏಕ ಚಕ್ರಮ್’ ನಾಟಕವು ಕಲಿಯುಗದ ಹಲವಾರು ಸಾಮ್ಯತೆ ಮತ್ತು ಸೂಕ್ಷ್ಮಗಳ ಸಮೀಕೃತ ಪ್ರಸ್ತುತಿ. ಕೃತಿಯ ಧರ್ಮಾರ್ಥಕಾಮಮೋಕ್ಷಗಳ ಮಾರ್ಮಿಕ ವಿಶ್ಲೇಷಣೆಯು ದೃಶ್ಯ ಸಾಹಸವಾಗಿ “ಏಕಚಕ್ರಮ್ ” ಶೀರ್ಷಿಕೆಯಡಿ ನಿರ್ಮಾಣಗೊಳ್ಳುತ್ತಲಿದೆ.
ಸತ್ಪುರುಷರ ಧರ್ಮನಿಷ್ಠೆ, ಮಾನವ ಸಂವೇದನೆ, ದುಷ್ಟಸಂಹಾರ, ಉದಾತ್ತತೆಯ ಸವಿವರ ಪರಾಮರ್ಶೆಯೇ ಏಕಚಕ್ರಮ್ ನ ಮುಖ್ಯ ಉದ್ದಿಶ್ಯ.
ಪೂರ್ಣಪ್ರಮಾಣದ ಸಂಸ್ಕೃತ ಕಥಾಚಿತ್ರವಾದ “ಏಕ ಚಕ್ರಮ್” ನ ಮೂಲ ರಚನೆ ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮ, ಸಂಚಾಲಕಿ ಪ್ರೊ.ಎಸ್.ಆರ್ ಲೀಲಾ, ಚಿತ್ರದ ನಿರ್ದೇಶಕ ಕೆ.ಸುಚೇಂದ್ರ ಪ್ರಸಾದ, ಕಲಾ ಸಂಪದ ಲಲಿತ ಕಲಾ ಕೇಂದ್ರದ ವಿದುಷಿ ವೀಣಾ ಸಿ, ಶೇಷಾದ್ರಿ, ನಿಧಿ ಸಂಗ್ರಹ ಸಹಾಯಕ್ಕಾಗಿ ‘ಮಿಲಾಪ್ ‘, ಲಯನ್ಸ್ ಪ್ರೈಡ್ ಇಂಟರ್ ನ್ಯಾಷನಲ್ನ ಲಯನ್. ಕೆ. ಶಿವಪ್ರಕಾಶ್, ಅರ್ಪಣ ಸೇವಾ ಸಂಸ್ಥೆಯ ಸುಂದರೇಶ, ಭಾರತೀಯ ಆಯುರ್ವೇದ ಪ್ರತಿಷ್ಠಾನದ ಡಾ.ಸಿ.ಎ.ಕಿಶೋರ ಮುಂತಾದವರ ಸಾಂದರ್ಭಿಕ ಸಹಯೋಗವಿರಲಿದೆ.
ಏಕಕಾಲಕ್ಕೆ ಕನ್ನಡದಲ್ಲಿಯೂ ನಿರ್ಮಾಣಗೊಳ್ಳಲಿರುವ ‘ಏಕಚಕ್ರಮ್’ ಚಲನಚಿತ್ರವು, ಭೂತ-ವರ್ತಮಾನ ಮತ್ತು ಭವಿಷ್ಯದ ಸನ್ನಿವೇಶಗಳೊಂದಿಗೆ ತಳುಕು ಹಾಕಿಕೊಂಡಿರುವುದೊಂದು ವಿಶೇಷ.
ಪ್ರಸಂಗ ಜರುಗಿ ಯುಗವೊಂದು ಸಂದ್ದಿದರೂ, ಮನುಕುಲವೇ ಬದಲಾಗಿದ್ದರೂ ಮನಃಸ್ಥಿತಿಯು ಮಾತ್ರ ಬದಲಾಗದಿರುವ ದುರಂತದ ಪ್ರಾತ್ಯಕ್ಷಿಕೆ ‘ಏಕ ಚಕ್ರಮ್’ನ ವಿಶೇಷತೆ. ಸದ್ಯದ ವ್ಯವಸ್ಥೆಯು ಮರೆತಿರುವ ನೈತಿಕತೆಯ ಪುನರುತ್ಥಾನ, ಮರುಮೌಲ್ಯಮಾಪನಗಳೂ ಈ ದೃಶ್ಯಸಾಹಸದ ಪ್ರಮುಖ ಭಾಗವಾಗಿರಲಿದೆ. ಮಹಾಕಾವ್ಯವಾದ ಮಹಾಭಾರತದ ಘಟನೆಗಳ ಸರಣಿಯು ಇಂದಿಗೂ ಪ್ರಸ್ತುತವಾಗಿದ್ದು ಸಾಂಪ್ರದಾಯಿಕ ಮೌಲ್ಯಾನುಷ್ಠಾನ ದಾಖಲೆಗಳನ್ನು ಪರಿಚಯಿಸುವ ಮತ್ತು ಸಂರಕ್ಷಿಸುವ ಚಲನಚಿತ್ರವಾಗಿರಲಿದೆ “ಏಕಚಕ್ರಮ್”.