ಆಗಸ್ಟ್ 23ರಿಂದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನೆ

ಬೆಂಗಳೂರು: ನಗರದ ಬನಶಂಕರಿ 3 ನೇ ಹಂತದಲ್ಲಿರುವ ಇಟ್ಟಮಡುವಿನ  ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ವಿಜಯ ಟ್ರಸ್ಟ್ (ರಿ) ವತಿಯಿಂದ ಆಗಸ್ಟ್ 23 ರಿಂದ ಮೂರು ದಿನ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. 

ಕರ್ನಾಟಕ ಸರ್ಕಾರದ ಕೋವಿಡ್ 19ರ ನಿಯಮದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಕೃಷ್ಣಚಾರ್ ನೇತೃತ್ವದಲ್ಲಿ ಶ್ರೀ ಗುರುರಾಯರ ವಿಶೇಷ ಉತ್ಸವ ಪೂಜಾರಾಧನೆಗಳು ನೆರವೇರಲಿದೆ.

22ರಂದು ಪೌರ್ಣಮಿ ಪ್ರಯುಕ್ತ ಬೆಳಗ್ಗೆ 9 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾ ಮಂಗಳಾರತಿ ನೆರವೇರಲಿದೆ. ಸಂಜೆ 6:30 ಕ್ಕೆ 350 ನೇ ಆರಾಧನೆ ಉದ್ಘಾಟನೆ – ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಕೃಷ್ಣಚಾರ್ ನೇತೃತ್ವದಲ್ಲಿ ಧ್ವಜಾರೋಹಣ-ಗೋಪೂಜೆ- ಧನ-ಧಾನ್ಯ ಪೂಜೆ -ಶ್ರೀ ಲಕ್ಷ್ಮೀ ಪೂಜೆ – ಶಾಖೋತ್ಸವ ಪೂಜೆ- ಶ್ರೇಯ:ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿದೆ.

23 ರಂದು ಪೂರ್ವಾರಾಧನೆ: ಪೂರ್ವಾರಾಧನೆ ಪ್ರಯುಕ್ತ ಗುರುರಾಯರ ಬೃಂದಾವನಕ್ಕೆ ಶ್ರೀ ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಸಹಿತ  ಪಾರಾಯಣದೊಂದಿಗೆ ಫಲ ಪಂಚಾಮೃತ ಅಭಿಷೇಕ, ನೂತನ ವಸ್ತ್ರ ಸಮರ್ಪಣೆ, ವಿಶೇಷ ಹೂವಿನ ಅಲಂಕಾರ, ಉತ್ಸವಗಳು (ಶ್ರೀಮಠದಿಂದ ಪಾದಪೂಜೆ) ಕನಕಾಭಿಷೇಕ, ಪ್ರವಚನ, ಮಹಾಮಂಗಳಾರತಿ ನೆರವೇರಲಿದೆ.

 24 ರಂದು ಮಧ್ಯಾರಾಧನೆ: ಶ್ರೀಗುರುರಾಯರ ಮಧ್ಯಾರಾಧನೆ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನದೊಳಗೆ ಪ್ರವೇಶ ಮಾಡಿದ ದಿನ,ಈ ದಿನವು ಗುರುಗಳ ಬೃಂದಾವನಕ್ಕೆ ಅಭಿಷೇಕ ವಿಶೇಷ ಹೂವಿನ ಅಲಂಕಾರ ನೂತನ ವಸ್ತ್ರ ಸಮರ್ಪಣೆ (ಶ್ರೀಮಠದಿಂದ ಪಾದಪೂಜೆ)  ಕನಕಾಭಿಷೇಕ ಪ್ರವಚನ ಮಹಾಮಂಗಳಾರತಿ ನೆರವೇರಲಿವೆ.

25 ರಂದು ಉತ್ತರಾರಾಧನೆ: ಅಭಿಷೇಕ ವಿಶೇಷ ಹೂವಿನ ಅಲಂಕಾರ ನೂತನ ವಸ್ತ್ರ ಸಮರ್ಪಣೆ (ಶ್ರೀಮಠದಿಂದ ಪಾದಪೂಜೆ) ಕನಕಾಭಿಷೇಕ ದೊಂದಿಗೆ ಉತ್ತರಾರಾಧನೆ  ನೆರವೇರಲಿದೆ.

 ರಾಜಬೀದಿಯಲ್ಲಿ ಮಹಾರಥೋತ್ಸವ ಇಲ್ಲ: ಪ್ರತಿವರ್ಷ ರಾಜಬೀದಿಯಲ್ಲಿ ಮಹಾರಥೋತ್ಸವವು ನೆರವೇರುತ್ತಿತ್ತು. ಆದರೆ ಈ ವರ್ಷ ಸರ್ಕಾರದ  ಕೋವಿಡ್ ನಿಯಮಾವಳಿಯಂತೆ ರಾಜಬೀದಿಯಲ್ಲಿ ಉತ್ಸವ ಇರುವುದಿಲ್ಲ.

ಶ್ರೀ ಗುರುರಾಯರ ಸನ್ನಿಧಿಯ ಪ್ರಾಕಾರದಲ್ಲಿ ಮಾತ್ರ ಬೆಳಗ್ಗೆ 10-ಕ್ಕೆ ರಥೋತ್ಸವ, ಪಲ್ಲಕ್ಕಿ ಉತ್ಸವ, ಕನಕಾಭಿಷೇಕ, ಪ್ರವಚನ, ಮಹಾಮಂಗಳಾರತಿ ನೆರವೇರಲಿದೆ.

ಭಕ್ತರು ಶ್ರೀ ಮಠಕ್ಕೆ ಆಗಮಿಸಿ ಶ್ರೀ ಗುರುರಾಯರ ದರ್ಶನ ಪಡೆದುಕೊಳ್ಳಬಹುದು.

ಮಾಸ್ಕ್ ಕಡ್ಡಾಯ

ಶ್ರೀ ಮಠಕ್ಕೆ ಬರುವಂತಹ ಭಕ್ತರು ಮುಖ ಕವಚ (ಮಾಸ್ಕ್) ಕಡ್ಡಾಯವಾಗಿ ಹಾಕಿರಬೇಕು.

 ಭಕ್ತಾದಿಗಳು ಶ್ರೀ ಮಠದ ಆಡಳಿತ ಮಂಡಳಿಯೊಂದಿಗೆ ಸಹಕರಿಸಿ ಶ್ರೀ ಗುರು ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಂದು ಶ್ರೀ ಮಠದ ಪರವಾಗಿ ಕೃಷ್ಣಚಾರ್ ವಿನಂತಿಸಿಕೊಂಡಿದ್ದಾರೆ.

  ಆಗಸ್ಟ್ 21 ಮತ್ತು 22 ರಂದು ಉಪಾಕರ್ಮ: 21 ತಾರೀಖು ಋಗ್ವೇದ ಉಪಾಕರ್ಮವು ಬೆಳಗ್ಗೆ 6 ಕ್ಕೆ 22 ರಂದು ಯಜರ್ವೇದ ಉಪಾಕರ್ಮವು ಬೆಳಗ್ಗೆ 6  ಕ್ಕೆ ನೆರವೇರಲಿದೆ.                   

ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles