ಋಣ

ನವಮಾಸ ಗರ್ಭದಿ ಹೊತ್ತು
ಪ್ರೀತಿಯಲಿ ನಮ್ಮನು  ಹೆತ್ತು
ಸಲುಹಿದೆ ಅಮ್ಮ ಮೂರು ಹೊತ್ತು
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಸುಂದರ ಬದುಕು ನೀಡಿದೆ ತಂದೆ
ಕಷ್ಟವನೆಂದು ತೋರಲಿಲ್ಲವೆಮಗೆ
ನಮಗಾಗಿ ಮುಡುಪಿಟ್ಟೆ ನಿನ್ನನ್ನೇ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಹಗಲಿರುಳುಗಳ ಲೆಕ್ಕವಿಲ್ಲ
ರಕ್ಷಿಸುವದೊಂದೆ ಮನದಲೆಲ್ಲ
ಓ ಸೈನಿಕನೇ ನಿನಗೆ ಸಮನಾರಿಲ್ಲ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಅಜ್ಞಾನದ ಕೊಳೆಯ ತೊಳೆದೆ
ಸುಜ್ಞಾನದ ಬೆಳಕ ಬೀರಿದೆ
ಸಮಾಜದಿ ಬಾಳಲು ದಾರಿ ತೋರಿದ ಗುರುವೆ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಭರವಸೆಯ ಕಿರಣ ನೀವು
ಮರು ಜನ್ಮಕ್ಕೆ ಕಾರಣ ತಾವು
ವೈದ್ಯೋನಾರಾಯಣಹರಿ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ದುಡಿಮೆಯನ್ನೇ ನಂಬಿದ ಯೋಗಿ
ಜಗಕೆ ಅನ್ನವ ನೀಡುವ ತ್ಯಾಗಿ
ಅನ್ನದಾತ ಹಸಿರು ಕ್ರಾಂತಿಯ ಹರಿಕಾರ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಭಾರತಾಂಬೆ ನಮ್ಮ ಹೆಮ್ಮೆ
ಯಾವುದಕ್ಕೂ ಕೊರತೆ ಇಲ್ಲ ನೋಡಿರೊಮ್ಮೆ
ಇಲ್ಲಿ ಹುಟ್ಟಿದ ನಾವೇ ಧನ್ಯರಮ್ಮ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ರಚನೆ: ಜ್ಯೋತಿ ಕೋಟಗಿ‌     
ಶಿಕ್ಷಕಿ, ಸ.ಮಾ.ಪ್ರಾ.ಶಾಲೆ ತಲ್ಲೂರ

Related Articles

ಪ್ರತಿಕ್ರಿಯೆ ನೀಡಿ

Latest Articles