ಬೆಂಗಳೂರು ಜಯನಗರದ 5ನೇ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಯರ 350ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆಯ ಅಂಗವಾಗಿ ಪರಮಪೂಜ್ಯ ಶ್ರೀ108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆದೇಶದಂತೆ ಭಕ್ತರ ಸಹಕಾರದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ,ವಿಶೇಷ ಸ್ವರ್ಣಲೇಪಿತ ಸಿಂಹಾಸನದ ಪೀಠದಲ್ಲಿ ಶ್ರೀಗುರುರಾಯರ ಪಾದಪೂಜೆ,ಪ್ರಾಕಾರದ ಆವರಣದಲ್ಲಿ ಗಜವಾಹನೋತ್ಸವ, ಪಲ್ಲಕ್ಕಿ ಉತ್ಸವ, ರಜತ ರಥೋತ್ಸವ,ತೊಟ್ಟಿಲು ಪೂಜಾ, ಸ್ವಸ್ತಿ ವಾಚನ, ಶ್ರೀ ರಾಘವೇಂದ್ರ ವಿಜಯ ಪ್ರವಚನ ಹಾಗೂ ಮಹಾಮಂಗಳಾರತಿಯು ನೆರವೇರಿತು.
ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯರವರು ಮತ್ತು ಎಡಿಜಿಪಿ ರೈಲ್ವೆ ಭಾಸ್ಕರ್ ರಾವ್ ರವರು ಹಾಗೂ ಭಕ್ತಾದಿಗಳು ಭಾಗವಹಿಸಿ ಶ್ರೀರಾಘವೇಂದ್ರ ಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾದರು ಎಂದು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರು ತಿಳಿಸಿದರು.