ಬೆಂಗಳೂರು: ಶ್ರೀ ಗೋವರ್ಧನಗಿರಿ ಗುಹಾಲಯ ಕ್ಷೇತ್ರ ಉಡುಪಿ ಶ್ರೀ ಪುತ್ತಿಗೆ ಮಠ ಬಸವನಗುಡಿಯಲ್ಲಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಶ್ರೀ ಸುಶೀಂದ್ರ ತೀರ್ಥರ ಅನುಗ್ರಹದೊಂದಿಗೆ ಆಗಸ್ಟ್ 30, 31ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಆಗಸ್ಟ್ 30ರಂದು ಬೆಳಗ್ಗೆ 7.30ರಿಂದ ಅಲಂಕಾರ ಪೂಜೆ, ಸುಪ್ರಭಾತ ನಾದಸ್ವರ, ಪವಮಾನ ಅರ್ಚನೆ, ತುಳಸಿ ಅರ್ಚನೆ, ಮಧ್ಯಾಹ್ನ 12.45ಕ್ಕೆ ಮಹಾಪೂಜೆ ನಡೆಯಲಿದೆ. ನಂತರ ಸಂಜೆ 4 ಗಂಟೆಗೆ ಶ್ರೀಕೃಷ್ಣ ಸ್ತುತಿ- ಶ್ರೀ ಗೋವರ್ಧನ ಭಜನಾ ಮಂಡಳಿಯವರಿ0ದ, ಸಂಜೆ 5.30ಕ್ಕೆ ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ ಅವರಿಂದ ಶ್ರೀಕೃಷ್ಣ ಸಂದೇಶ ಕುರಿತು ಪ್ರವಚನ. ಸಂಜೆ 6.30ಕ್ಕೆ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ಅನುಗ್ರಹ ಸಂದೇಶ. ನಂತರ ರಾತ್ರಿ 7ರಿಂದ ಅಭಿರಾಮ್ ಭರತವಂಶಿ ಫೌಂಡೇಶನ್ ವತಿಯಿಂದ ಶ್ರೀ ಕೃಷ್ಣಾಯ ತುಭ್ಯಮ್ ನಮಃ ನೃತ್ಯಾಂಜಲಿ.
ರಾತ್ರಿ 8 ಕ್ಕೆ ರಾತ್ರಿ ಪೂಜೆ, ರಾತ್ರಿ 12 ಕ್ಕೆ ಮಹಾಪೂಜೆ ರಾತ್ರಿ 12.17ಕ್ಕೆ ಅರ್ಘ್ಯ ಪ್ರದಾನ ನಡೆಯಲಿದೆ.
ಕಾರ್ಯಕ್ರಮದ ನೇರ ಪ್ರಸಾರವನ್ನು ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.
31 ರಂದು ಶ್ರೀಕೃಷ್ಣ ಲೀಲೋತ್ಸವ ನಡೆಯಲಿದ್ದು, ಬೆಳಗ್ಗೆ 5 ಗಂಟೆಗೆ ಪಂಚಾಮೃತ ಅಭಿಷೇಕ, 7 ಗಂಟೆಗೆ ಮಹಾಪೂಜೆ, ಸಂಜೆ 5 ಗಂಟೆಗೆ ವಿಟ್ಲಪಿಂಡಿ, ರಾತ್ರಿ 7 ಗಂಟೆಗೆ ರಂಗಪೂಜೆ, ಅಷ್ಟಾವಧಾನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.