ಎಳ್ಳು ಬೆಲ್ಲ ಲಡ್ಡು ತಯಾರಿಸುವುದು ಎಷ್ಟೊಂದು ಸುಲಭ

ಎಳ್ಳು-ಬೆಲ್ಲ, ಎಳ್ಳು-ಕೊಬ್ಬರಿ ಯಿಂದ ವಿಶೇಷ ಸಿಹಿ ತಿನಿಸನ್ನು ಮನೆಯಲ್ಲಿಯೇ ಶುಚಿರುಚಿಯಾಗಿ ತಯಾರಿಸಬಹುದು.

ಎಳ್ಳು ಬೆಲ್ಲ ಲಡ್ಡು

ಬೇಕಾಗುವ ಪದಾರ್ಥಗಳು: ಬಿಳಿ ಎಳ್ಳು1ಕಪ್, ಬೆಲ್ಲ 1ಕಪ್, ತುಪ್ಪ 3ಚಮಚ, ಏಲಕ್ಕಿ 2, 1/2 ಕಪ್ ನೀರು.


ತಯಾರಿಸುವ ವಿಧಾನ:
ಸಣ್ಣ ಉರಿಯಲ್ಲಿ ಎಳ್ಳನ್ನು ಬಿಸಿ ಮಾಡಿ. ಎಳ್ಳಿನ ಕಾಳು ಸ್ವಲ್ಪ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಹುರಿದ ಎಳ್ಳನ್ನು ತಟ್ಟೆಗೆ ಹಾಕಿ ತಣಿಯಲು ಬಿಡಿ. ಪಾತ್ರೆಯಲ್ಲಿ ನೀರು ಕುದಿಸಿ ಬೆಲ್ಲವನ್ನು ಹಾಕಿ. ಆಗಾಗ್ಗೆ ತಿರುಗಿಸಿಕೊಂಡು ಅದನ್ನು ದಪ್ಪ ಮಿಶ್ರಣವಾಗಿಸಿ. ಈ ಮಿಶ್ರಣ ದಪ್ಪಗಾದ ನಂತರ, ಹುರಿದ ಎಳ್ಳಿನ ಕಾಳು ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ತುಪ್ಪವನ್ನು ಮಿಶ್ರಣವಿರುವ ಪಾತ್ರೆಗೆ ಹಾಕಿ. ಈ ಮಿಶ್ರಣ ಬಿಸಿ ಇರುವಾಗಲೇ (ತಣ್ಣಗಾದಲ್ಲಿ ಲಾಡು ಕಟ್ಟಲು ಕಷ್ಟ) ಲಾಡನ್ನು ಉಂಡೆ ಕಟ್ಟಲು ಪ್ರಾರಂಭಿಸಿ. ಕೈಗೆ ಸ್ಪಲ್ಪ ತುಪ್ಪ ಹಚ್ಚಿಕೊಂಡು ಸುಲಭವಾಗಿ ಉಂಡೆ ಮಾಡಿಕೊಳ್ಳಿ. ಬೆಲ್ಲ ತಣ್ಣಗಾದಾಗ ಗಟ್ಟಿಯಾಗುತ್ತದೆ ಆದ್ದರಿಂದ ಬಿಸಿಯಾಗಿರುವಾಗ ಲಾಡು ಉಂಡೆ ಕಟ್ಟಿ.


Related Articles

ಪ್ರತಿಕ್ರಿಯೆ ನೀಡಿ

Latest Articles