ಮೋದಕ: ಇಷ್ಟಾರ್ಥ ಸಿದ್ಧಿ ಮತ್ತು ಸಾಕ್ಷಾತ್ ಗಣಪತಿಯೇ ನಮ್ಮ ಮನೆಯನ್ನು ಕಾಯುತ್ತಾನೆ. ಜಾತಕ ದೋಷಗಳು ನಿವಾರಣೆಯಾಗುತ್ತದೆ.
ಲಾಡು: ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ, ವಿವಾಹ ಭಾಗ್ಯವಾಗುತ್ತದೆ.
ಕರಿಗಡುಬು: ಸರ್ವರಿಗೂ ಆರೋಗ್ಯ ಭಾಗ್ಯ ಮತ್ತು ಲಕ್ಷ್ಮೀ ಪ್ರಾಪ್ತಿ.
ಅಪ್ಪಂ ಅಥವಾ ಕಜ್ಜಾಯ: ಹಿರಿಯರ ಶಾಪ ನಿವಾರಣೆ.
ಒಬ್ಬಟ್ಟು ಅಥವಾ ಹೋಳಿಗೆ: ಕುಜದೋಷ ನಿವಾರಣೆಯಾಗುತ್ತದೆ, ವಿವಾಹದ ದೋಷಗಳು ನಿವಾರಣೆಯಾಗುತ್ತದೆ.
ಬೆಲ್ಲದ ಅಚ್ಚು: ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಮಧುಮೇಹ ನಿಯಂತ್ರಣ ಆಗುತ್ತದೆ, ಅಧಿಕ ಲಾಭವಾಗುತ್ತದೆ, ಅಪಮೃತ್ಯು ನಿವಾರಣೆಯಾಗುತ್ತದೆ. ಪಂಚಕಜ್ಜಾಯ: ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ, ಇಷ್ಟಾರ್ಥ ಸಿದ್ಧಿ, ಶನಿ ದೋಷ, ರಾಹು ದೋಷ ನಿವಾರಣೆ, ಸರ್ವದಾ ಅಭಿವೃದ್ಧಿ.
ಚಿಗಳಿ ಅಥವಾ ಎಳ್ಳುಂಡೆ: ಮನೆಯಲ್ಲಿ ಸ್ತ್ರೀಯರ ಸಮಸ್ಯೆಗಳು ದೂರವಾಗುತ್ತವೆ, ಮುಟ್ಟಿನ ದೋಷಗಳು ನಿವಾರಣೆಯಾಗುತ್ತದೆ.
ಸಜ್ಜಿಗೆ: ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ, ಶುಭ ಸಮಾಚಾರ ಕೇಳಿ ಬರುತ್ತದೆ.
ಚಕ್ಕುಲಿ: ವ್ಯಾಪಾರಿಗಳಿಗೆ ಅಧಿಕವಾದ ವ್ಯಾಪಾರವಾಗಿ ಧನಲಾಭವಾಗುತ್ತದೆ. ಕಬ್ಬಿಣಕ್ಕೆ ಸಂಬಂಧಿಸಿದ ವ್ಯಾಪಾರಸ್ಥರಿಗೆ ಅತ್ಯತ್ತಮವಾಗಿರುತ್ತದೆ.
ಸಂಗ್ರಹ: ಎಚ್ ಎಸ್ ರಂಗರಾಜನ್