ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದೀಂದ್ರಾಚಾರ್ಯರ ನೇತೃ ತ್ವದಲ್ಲಿ ಪ್ರತಿವರ್ಷದಂತೆ “ಶ್ರೀ ಅನಂತಪದ್ಮನಾಭ ವ್ರತ” ಪೂಜೆಯನ್ನು ಧರ್ಮಾಧಿಕಾರಿಯಾದ ಶ್ರೀ ಕೃಷ್ಣ ಗುಂಡಾಚಾರ್ಯರು ನೆರವೇರಿಸಿದರು.
ಸಾಮೂಹಿಕ ಈ ಅನಂತ ದೇವರ ಪೂಜೆಯಲ್ಲಿ 108 ದಂಪತಿಗಳು ಕೂಡಿಕೊಂಡು ಭಕ್ತಾದಿಗಳು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಸ್ವರ್ಣಲೇಪಿತ ಸಿಂಹಾಸನದಲ್ಲಿ ಶ್ರೀ ಅನಂತ ಪದ್ಮನಾಭ ದೇವರ ಕಲಶವನ್ನು ಹಾಗೂ ರಜತ ಶೇಷ ದೇವರನ್ನು ಪ್ರತಿಷ್ಠಾಪಿಸಿ ನಂತರ (ದೋರ ಗ್ರಂಥಿ) ಅನಂತನ ದಾರವನ್ನು ಪೂಜಿಸಿ ಅರ್ಚಿಸಿದ ಅರ್ಚಕರಾದ ಇಂದಿರೇಶಾಚಾರ್ಯ, ರಾಮಚಂದ್ರಾಚಾರ್ಯ,ಕೃಷ್ಣ ಆಚಾರ್ಯರಿಂದ ಪೂಜಿಸಲಾಯಿತು ಎಂದು ಪುರೋಹಿತ ನಂದಕಿಶೋರಾಚಾರ್ಯ ತಿಳಿಸಿದರು.