ಔಷಧ

ಹಸಿವಿನಿಂದ ನರಳುತಿರುವವರ
ಉದರವ ಔಷಧ ತಣಿಸುವುದೇ?
ಮೂಢನಂಬಿಕೆಗಳ ಬಲೆಯಿಂದ
ಪಾರಾಗಲು ಔಷಧ ಸಿಗುವುದೇ?//


ನೊಂದ ಹೂ ಮನಸುಗಳಿಗೆ
ಔಷಧಿ ಆಸರೆಯಾದಿತೇ?
ಬಾಳ ಬವಣೆಯಲಿ ಬೆಂದಿರುವ
ಜೀವಕೌಷಧಿ ಉಪಚರಿಸುವದೇ?//


ಹೆಣ್ಣ ದೇಹವ ಕಿತ್ತು ತಿನ್ನುವ ನರ
ರಾಕ್ಷಸರ ಮಣಿಸಲು ಔಷಧಿ ಇದೆಯೇ?
ನಶೆಯ ಅಮಲಿನಲಿ ಕಂದಮ್ಮಗಳನೂ
ಬಿಡದ ನೀಚರನಾಶಕ್ಕೆ ಔಷಧಿ ಇದೆಯೇ?//


ಒಲುಮೆಯಿಂದ ಮೋಸಗೊಳಿಸುವವರ
ತಿಳಿಯಲು ಔಷಧ ಇರುವದೇ?
ಉತ್ತಮರು,ಅಧಮರು ಯಾರೆಂದು
ಗುರುತಿಸಲು ಔಷಧ ಇರುವುದೇ?//


ಎಲ್ಲದಕ್ಕೂ ಪರಿಹಾರ ಔಷಧ
ನೀಡುವದಾದರೆ ಹೇಗಿರುತಿತ್ತು?
ಸಮಾಜದಲ್ಲಿ ಎಲ್ಲ ಸಮಸ್ಯೆಗಳಿಗೆ
ಔಷಧಿ ಉತ್ತರವಾಗಿದ್ದರೆ ಚೆನ್ನವಿರುತಿತ್ತೆ?//

* ಜ್ಯೋತಿ ಸಿ ಕೋಟಗಿ

ಶಿಕ್ಷಕಿ
ಸ ಮಾ ಪ್ರಾ ಶಾಲೆ ತಲ್ಲೂರ

Related Articles

ಪ್ರತಿಕ್ರಿಯೆ ನೀಡಿ

Latest Articles