ಈ ವರ್ಷ ನವರಾತ್ರಿ 8 ದಿನ, ಇಲ್ಲಿದೆ ಘಟಸ್ಥಾಪನೆ ಮುಹೂರ್ತ, ಶುಭ ದಿನಗಳು

ನವರಾತ್ರಿ ಹಬ್ಬವು ಈ ಬಾರಿ 2021 ರ ಅಕ್ಟೋಬರ್ 7 ರಿಂದ ಆರಂಭವಾಗಿ ಅಕ್ಟೋಬರ್ 14 ರವರೆಗೆ ಆಚರಿಸಲಾಗುವುದು. ಮತ್ತು ವಿಜಯದಶಮಿ ಅಂದರೆ ದಸರಾವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ.

ಶಾರದಿಯಾ ನವರಾತ್ರಿ ಎಂದರೆ ದುರ್ಗಾ ದೇವಿಯ ಪವಿತ್ರ 9 ರೂಪಗಳನ್ನು ಪೂಜಿಸುವ ಒಂಬತ್ತು ದಿನಗಳು. ನವರಾತ್ರಿಯ ಪ್ರತಿದಿನ ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶ ಸಿಗುತ್ತದೆ. ಈ ವರ್ಷ ಶಾರದಿಯ ನವರಾತ್ರಿಯನ್ನು ಕೇವಲ ಎಂಟು ದಿನಗಳ ಕಾಲ ಮಾತ್ರ ಆಚರಿಸಲಾಗುತ್ತದೆ. ಕಾರಣ, ಈ ಬಾರಿ ಚತುರ್ಥಿ ಮತ್ತು ಪಂಚಮಿ ತಿಥಿ ಒಟ್ಟಿಗೆ ಬೀಳುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ, ಶಾರದಿಯ ನವರಾತ್ರಿ ಅಕ್ಟೋಬರ್ 7 ರಿಂದ ಆರಂಭವಾಗಿ ಅಕ್ಟೋಬರ್ 14 ರವರೆಗೆ ಮತ್ತು ವಿಜಯದಶಮಿ ಅಂದರೆ ದಸರಾವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ.

ಅಕ್ಟೋಬರ್ 9 ರ ಶನಿವಾರ, ತೃತೀಯಾ ಬೆಳಗ್ಗೆ 7:48 ರವರೆಗೆ ಇರುತ್ತದೆ, ನಂತರ ಚತುರ್ಥಿ ಆರಂಭವಾಗುತ್ತದೆ, ಇದು ಮರುದಿನ 10, ಭಾನುವಾರ ಬೆಳಗ್ಗೆ 4:56 ಗಂಟೆಯವರೆಗೆ ಇರುತ್ತದೆ. 
ಈ ಬಾರಿ ಮಾತೃ ದೇವಿಯ ಆರಾಧನೆಯು ಗುರುವಾರದಿಂದ ಆರಂಭವಾಗುತ್ತಿದೆ, ಇದು ಪೂಜೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಮಂಗಳಕರವಾಗಿದೆ ಎನ್ನುವ ನಂಬಿಕೆಯಿದೆ. ಚಿತ್ತಾ ನಕ್ಷತ್ರದಲ್ಲಿ ನವರಾತ್ರಿ ಆರಂಭವಾಗುತ್ತಿದೆ, ಇದರಿಂದ ಸಾಧನಾ, ಧೈರ್ಯ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಶರನ್ನವರಾತ್ರಿ ಅಥವಾ ಶಾರದಿಯಾ ನವರಾತ್ರಿಯ ದಿನಾಂಕಗಳು

- ಮೊದಲ ದಿನ 2021 ರ ಅಕ್ಟೋಬರ್ 7, ಗುರುವಾರ : ಪ್ರತಿಪ್ರದೆ - ದೇವಿ ಶೈಲಪುತ್ರಿಯ ಆರಾಧನೆ

- ಎರಡನೆಯ ದಿನ 2021 ರ ಅಕ್ಟೋಬರ್ 8, ಶುಕ್ರವಾರ : ಬಿದಿಗೆ -  ದೇವಿ ಬ್ರಹ್ಮಚಾರಿಣಿಯ ಆರಾಧನೆ

- ಮೂರನೆಯ ದಿನ 2021 ರ ಅಕ್ಟೋಬರ್ 9, ಶನಿವಾರ : ತದಿಗೆ ಮತ್ತು ಚತುರ್ಥಿ - ದೇವಿ ಚಂದ್ರಘಂಟಾ ಮತ್ತು ತಾಯಿ ಕೂಷ್ಮಾಂಡರ ಆರಾಧನೆ

- ನಾಲ್ಕನೇ ದಿನ 2021 ರ ಅಕ್ಟೋಬರ್ 10, ರವಿವಾರ : ಪಂಚಮಿ ದೇವಿ ಸ್ಕಂದಮಾತೆಯ ಆರಾಧನೆ, ಲಲಿತಾ ಪಂಚಮಿ

- ಐದನೇ ದಿನ 2021 ರ ಅಕ್ಟೋಬರ್ 11, ಸೋಮವಾರ : ಷಷ್ಠೀ - ದೇವಿ  ಕಾತ್ಯಾಯನಿಯ ಆರಾಧನೆ

- ಆರನೆಯ ದಿನ 2021 ರ ಅಕ್ಟೋಬರ್ 12, ಮಂಗಳವಾರ : ಸಪ್ತಮಿ -  ಕಾಳರಾತ್ರಿಯ ಪೂಜೆ, ಸರಸ್ವತಿ ಪೂಜೆ

- ಏಳನೆಯ ದಿನ 2021 ರ ಅಕ್ಟೋಬರ್ 13, ಬುಧವಾರ : ಅಷ್ಟಮಿ - ದೇವಿ  ಮಹಾಗೌರಿಯ ಆರಾಧನೆ, ದುರ್ಗಾಷ್ಟಮಿ

-ಎಂಟನೆಯ ದಿನ 2021 ರ ಅಕ್ಟೋಬರ್ 14, ಗುರುವಾರ : ನವಮಿ - ದೇವಿ ಸಿದ್ಧಿದಾತ್ರಿಯ ಆರಾಧನೆ, ಮಹಾನವಮೀ

- 2021 ರ ಅಕ್ಟೋಬರ್ 15, ಶುಕ್ರವಾರ  : ದಶಮಿ - ವಿಜಯದಶಮಿ (ದಸರಾ)

ಘಟಸ್ಥಾಪನಕ್ಕಾಗಿ ಶುಭ ಮುಹೂರ್ತ (ಶಾರದಿಯಾ ನವರಾತ್ರಿ 2021 ಘಟಸ್ಥಾಪನ ಶುಭ ಮುಹೂರ್ತ):
ನವರಾತ್ರಿಯ ಮೊದಲ ದಿನ, ಮಾತೃ ದೇವಿಯ ಆರಾಧನೆಯನ್ನು ಘಟಸ್ಥಾಪನದೊಂದಿಗೆ ಆರಂಭಿಸಲಾಗುತ್ತದೆ. ಘಟಸ್ಥಾಪನಕ್ಕೆ ಶುಭ ಸಮಯವನ್ನು ವಿಶೇಷವಾಗಿ ನೋಡಿಕೊಳ್ಳಿ. ಅಕ್ಟೋಬರ್ 7 ರಂದು ಘಟಸ್ಥಾಪನದ ಶುಭ ಸಮಯ ಬೆಳಿಗ್ಗೆ 6:17 ರಿಂದ 7:07 ರವರೆಗೆ ಇರುತ್ತದೆ. ಈ ಸಮಯದಲ್ಲಿ ಘಟಸ್ಥಾಪನ ಮಾಡುವುದರಿಂದ ನವರಾತ್ರಿ ಫಲಪ್ರದವಾಗುತ್ತದೆ.

ಈ ಬಾರಿ ನವರಾತ್ರಿಯನ್ನು ಕೇವಲ 8 ದಿನಗಳ ಕಾಲ ಮಾತ್ರ ಆಚರಿಸುವುದೇ ವಿಶೇಷವಾಗಿದೆ. ಸಾಮಾನ್ಯವಾಗಿ ಪ್ರತೀ ವರ್ಷ 9 ದಿನಗಳ ಕಾಲ ನವರಾತ್ರಿಯನ್ನು ಆಚರಿಸಲಾಗುತ್ತಿತ್ತು. ಹಾಗೂ ಈ ಬಾರಿ ದೇವಿಯ ಘಟಸ್ಥಾಪನೆಯ ಮುಹೂರ್ತವು ಶುಭದಾಯಕವಾಗಿದೆ.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು ಬೆಂಗಳೂರು

Related Articles

2 COMMENTS

  1. ನವರಾತ್ರಿಯ ಎರಡನೆಯ ದಿನ.ಶುಭಶುಕ್ರವಾರದಂದು ತಾಯಿ *ಬ್ರಹ್ಮಚಾರಿಣಿ ದೇವಿ* ಯವರ ಆಶೀರ್ವಾದ ಪಡೆಯೋಣ.

ಪ್ರತಿಕ್ರಿಯೆ ನೀಡಿ

Latest Articles