ಇಂದು ಅಕ್ಟೋಬರ್ 13 ರಂದು ಕಾಲರಾತ್ರಿ ದೇವಿಯ ಆರಾಧನೆ. ನವದುರ್ಗಿಯರಲ್ಲಿ 7ನೇ ರೂಪವೇ ಕಾಲರಾತ್ರಿ. ಕಾಲರಾತ್ರಿ ದೇವಿಯ ಆವಿರ್ಭಾದ ಕುರಿತು ಪುರಾಣ ಕಥೆಯೊಂದಿದೆ. ಅದರ ಸಂಕ್ಷಿಪ್ತ ಸಾರ ಇಲ್ಲಿದೆ. ಚಂಡ ಮುಂಡ ಎಂಬ ರಾಕ್ಷಸರು ದೇವಲೋಕದ ಮೇಲೆ ಆಕ್ರಮಣ ಮಾಡಿ ದೇವಲೋಕವನ್ನು ವಶಪಡಿಸಿಕೊಂಡಾಗ ಇಂದ್ರಾದಿ ದೇವತೆಗಳು ತಾಯಿ ಪಾರ್ವತಿಯ ಮೊರೆ ಹೋದರು. ಆಗ ಆ ರಾಕ್ಷಸರ ದಮನಕ್ಕೆ ಆ ಮಹಾತಾಯಿ ಕಾಲರಾತ್ರಿಯಾಗಿ ಆವಿರ್ಭವಿಸಿದಳು
ಇಂದಿನ ಶ್ಲೋಕದ ಸಾಲುಗಳು: ವಾಮಪಾದೋಲ್ಲಸಾಲ್ಲೋಹ/ ಲತಾಕಂಟಕಭೂಷಣ l *ವರ್ಧನ್ಮೂರ್ಧ್ವ ಧ್ವಜಾಕೃಷ್ಣ* *ಕಾಲರಾತ್ರಿ ಭಯಂಕರಿ ll
…