ಅಹೋಬಲ ನರಸಿಂಹದೇವರ ಕ್ಷೇತ್ರದಲ್ಲಿ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಷೋಡಶ ಬಾಹು ಶ್ರೀನರಸಿಂಹ ದೇವರು ಹಾಗೂ ಶ್ರೀ ಮುಖ್ಯಪ್ರಾಣ ದೇವರು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೂರ್ವಿಕ ಗುರುಗಳಾದ ಶ್ರೀ ವಿಬುಧೇಂದ್ರ ತೀರ್ಥರ ಮೃತ್ತಿಕಾ ಬೃಂದಾವನವು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೃತ್ತಿಕಾ ಬೃಂದಾವನವನ್ನು ಅಕ್ಟೋಬರ್ 22 ರಂದು ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀ ನವ ನರಸಿಂಹದೇವರ ಅವತರಿಸಿದ ಸ್ಥಳವಾದ ಅಹೋಬಲ ಕ್ಷೇತ್ರದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ ಪೂರ್ವಿಕ ಗುರುಗಳಾದ ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಷೋಡಶಬಾಹು ನರಸಿಂಹ ದೇವರು ಸ್ವಪ್ನಲಬ್ಧವಾಗಿ ಅಹೋಬಲ ಕ್ಷೇತ್ರದಲ್ಲಿ ಸಿಕ್ಕಿದ್ದು ಇತಿಹಾಸ. ನೋಡಲು ಅತಿ ಸುಂದರವಾದ ಷೋಡಶ ಬಾಹು ನರಸಿಂಹ ದೇವರ ವಿಗ್ರಹ ಇಂದಿಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ದಿನಗಳಲ್ಲಿ ಪೂಜೆಗೊಳ್ಳುತ್ತಿದೆ.
ನಂಜನಗೂಡು ಶ್ರೀ ಮಠದ ನೂತನ ಶಾಖೆಯಾದ ಅಹೋಬಲ ಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಭಕ್ತರಿಗಾಗಿ ಉಳಿದು ಕೊಳ್ಳುವ ವ್ಯವಸ್ಥೆ ಹಾಗೂ ತೀರ್ಥಪ್ರಸಾದ ವ್ಯವಸ್ಥೆಯನ್ನು ಪರಮಪೂಜ್ಯ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು ಭಕ್ತರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿದ್ದಾರೆ ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ . ಕೆ ವಾದೀಂದ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

